October 9, 2026
Friday, October 9, 2026
spot_img

‘BOMB’ ಎಂದು ಬರೆದ ಟಿಶ್ಯೂ ಪೇಪರ್ ಪತ್ತೆ: ಲಖನೌ-ದಮ್ಮಾಮ್ ಇಂಡಿಗೋ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನದಲ್ಲಿ ‘BOMB’ ಎಂದು ಬರೆದಿದ್ದ ಟಿಶ್ಯೂ ಪೇಪರ್ ಪತ್ತೆಯಾದ ಘಟನೆ ಲಖನೌದಿಂದ ದಮ್ಮಾಮ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದಿದ್ದು ತಕ್ಷಣವೇ ವಿಮಾನವನ್ನು ಗುರುವಾರ ಸಂಜೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು.

ಗುರುವಾರ ಸಂಜೆ ಸುಮಾರು 5.55ಕ್ಕೆ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ವಿಮಾನದಲ್ಲಿ ಪತ್ತೆಯಾದ ಟಿಶ್ಯೂ ಪೇಪರ್‌ನಲ್ಲಿನ ಬಾಂಬ್ ಸಂದೇಶದ ಹಿನ್ನೆಲೆಯಲ್ಲಿ ಘಟನೆ ಕುರಿತು ವಿವಿಧ ತನಿಖಾ ಸಂಸ್ಥೆಗಳು ಪರಿಶೀಲನೆ ಆರಂಭಿಸಿವೆ.

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಹಲವು ತಂಡಗಳು ಸ್ಥಳದಲ್ಲಿ ತಪಾಸಣೆ ನಡೆಸುತ್ತಿವೆ.

Must Read