October 11, 2026
Sunday, October 11, 2026
spot_img

ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ʼಬಾಂಬ್‌ʼಎಂದು ಬರೆದಿರುವ ಟಿಶ್ಯೂ ಪೇಪರ್‌ ಪತ್ತೆ: ಅಹಮದಾಬಾದ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಮ್ಮಾಮ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದೊಳಗೆ ಬಾಂಬ್‌ ಎಂದು ಬರೆದಿರುವ ಟಿಶ್ಯೂ ಪೇಪರ್‌ ಸಿಕ್ಕಿದ್ದು, ಅಹಮದಾಬಾದ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಲಾಗಿದೆ. ಯಾರೋ ಕಿಡಿಗೇಡಿಗಳು ಸುಮ್ಮನೆ ಪೇಪರ್‌ ಮೇಲೆ ಬರೆದು ಹೋಗಿದ್ದಾರಾ ಅಥವಾ ಬಾಂಬ್‌ ಇದೆಯಾ ಎಂದು ಪರಿಶೀಲನೆ ಮಾಡಲಾಗುತ್ತಿದೆ.

ವಿಮಾನದಲ್ಲಿ 40 ಪ್ಯಾಸೆಂಜರ್‌ಗಳಿದ್ದು, ಟಿಶ್ಯೂನಲ್ಲಿ ಬಾಂಬ್‌ ಎಂದು ಬರೆದಿದ್ದ ಸುದ್ದಿ ಕೇಳಿ ಕ್ಷಣಕಾಲ ಪ್ರತಿಯೊಬ್ಬರೂ ಗಾಬರಿಯಾಗಿದ್ದಾರೆ. ವಿಮಾನ ವಾಶ್‌ರೂಮ್‌ನಲ್ಲಿ ಇಟ್ಟಿದ್ದ ಟಿಶ್ಯೂ ಪೇಪರ್‌ ಬಳಕೆ ಮಾಡಿ ಬಾಂಬ್‌ ಎಂದು ಬರೆಯಲಾಗಿತ್ತು. ಬಾತ್‌ರೂಮ್‌ಗೆ ಸಿಬ್ಬಂದಿ ಹೋದಾಗ ಟಿಶ್ಯೂ ಪೇಪರ್‌ ಕಾಣಿಸಿದ್ದು, ತಕ್ಷಣ ಬೆಚ್ಚಿಬಿದ್ದಿದ್ದಾರೆ. ಪ್ರೋಟೋಕಾಲ್‌ ಫಾಲೋ ಮಾಡಿದ ಪೈಲಟ್‌ಗಳು ವಿಮಾನವನ್ನು ಅಹಮದಾಬಾದ್‌ನ ಸರ್ದಾರ್‌ ವಲ್ಲಬಾಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಿದ್ದಾರೆ.

ಸುರಕ್ಷತಾ ಕ್ರಮವಾಗಿ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಬೇಕಾಯಿತು. ಟಿಶ್ಯೂ ಪೇಪರ್‌ನಲ್ಲಿ ಬಾಂಬ್‌ ಎಂದು ಬರೆಯಲಾಗಿದೆ. ಸಿಐಎಸ್‌ಎಫ್‌, ಬಾಂಬ್‌ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಭದ್ರತಾ ಸಂಸ್ಥೆಗಳು ಸಂಪೂರ್ಣ ತಪಾಸಣೆ ನಡೆಸಿವೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಸಹಾಯಕ ಪೊಲೀಸ ಆಯುಕ್ತ ಜಿ ವಿಭಾಗದ ವಿ.ಎನ್‌. ಯಾದವ್‌ ಹೇಳಿದ್ದಾರೆ.

Must Read