25 ವರ್ಷಗಳ ಬಳಿ ಹೊಸ ತಂತ್ರಜ್ಞಾನಗಳೊಂದಿಗೆ ರೀ ರಿಲೀಸ್‌ಗೆ ಸಜ್ಜಾಗಿದೆ ʼಟೈಟ್ಯಾನಿಕ್‌ʼ

ಇಡೀ ಜಗತ್ತಿಗೆ ಒಂದು ಸುಂದರ ಪ್ರೇಮ ಕಥೆಯನ್ನು ಪರಿಚಯಿಸಿದ ʼಟೈಟ್ಯಾನಿಕ್‌ʼ ಸಿನೆಮಾ, ಇದೀಗ ೨೫ ವರ್ಷಗಳ ಬಳಿಕ ಹೊಸ ತಂತ್ರಜ್ಞಾನಗಳೊಂದಿಗೆ ಮತ್ತೊಮ್ಮೆ ತೆರೆ ಮೇಲೆ ಕಾಣಲು ಸಜ್ಜಾಗಿದೆ.

ಈ ಭಾರಿಯ ಪ್ರೇಮಿಗಳ ದಿನಾಚರಣೆಯ ನಾಲ್ಕು ದಿನ ಮುನ್ನ ಅಂದರೆ ಫೆಬ್ರವರಿ 10 ರಂದು ವಿಶ್ವದಾದ್ಯಂತ ‘ಟೈಟ್ಯಾನಿಕ್’ ಸಿನಿಮಾ ಮರು ಬಿಡುಗಡೆಯಾಗಲಿದೆ. 3ಡಿ ಹಾಗೂ 4ಕೆ ತಂತ್ರಜ್ಞಾನವನ್ನು ಸಿನಿಮಾಕ್ಕೆ ಅಳವಡಿಸಲಾಗಿದ್ದು ಮೊದಲಿಗಿಂತಲೂ ಅದ್ಭುತವಾಗಿ ಟೈಟ್ಯಾನಿಕ್ ಸಿನೆಮಾ ಪ್ರೇಕ್ಷಕರನ್ನು ರಂಜಿಸಲಿದೆ.

ಈ ಚಿತ್ರವನ್ನು ಜೇಮ್ಸ್ ಕ್ಯಾಮರನ್ ನಿರ್ದೇಶಿಸಿದ್ದು, ಡಿಸೆಂಬರ್ 19, 1997 ರಂದು ಚಿತ್ರವು ತೆರೆಕಂಡಿತ್ತು. ಚಿತ್ರದಲ್ಲಿ ಲಿಯೋನಾರ್ಡೊ ಡಿ ಕ್ಯಾಪ್ರಿಯೋ ಹಾಗೂ ಕೇಟ್ ವಿನ್‌ಸ್ಲೆಟ್ ನಟಿಸಿದ್ದರು. ಅತ್ಯಂತ ಪ್ರಸಿದ್ಧಿ ಮತ್ತು ಮೆಚ್ಚುಗೆ ಪಡೆದಿದ್ದ ʼಟೈಟ್ಯಾನಿಕ್‌ʼ ಇದೀಗ ಸಿನಿ ಪ್ರೇಕ್ಷಕರಿಗೆ ಮತ್ತೊಮ್ಮೆ ಮನೋರಂಜನೆ ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!