ಮಾಸ್ಟರ್‌ಕಾರ್ಡ್ ಗೆ ಒಲಿದ ದೇಶದಲ್ಲಿ ನಡೆಯುವ ಎಲ್ಲ ಕ್ರಿಕೆಟ್​​ ಪಂದ್ಯಗಳ ಶೀರ್ಷಿಕೆ ಪ್ರಾಯೋಜಕತ್ವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗ್ಲೋಬಲ್ ಪೇಮೆಂಟ್ಸ್ ಕಂಪನಿ ಮಾಸ್ಟರ್‌ಕಾರ್ಡ್ ಭಾರತದಲ್ಲಿ ನಡೆಯುವ ಎಲ್ಲ ಕ್ರಿಕೆಟ್​ ಪಂದ್ಯಗಳ ಪ್ರಾಯೋಜಕತ್ವವವನ್ನು ಪಡೆದುಕೊಂಡಿದೆ.

ಇನ್ಮುಂದೆ ಇರಾನಿ ಟ್ರೋಫಿ, ದುಲೀಪ್​​ ಟ್ರೋಪಿ ಮತ್ತು ರಣಜಿ ಟ್ರೋಫಿ ಪಂದ್ಯಗಳ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಲಿದೆ.
ಅಂಡರ್​ 19-23 ಕ್ರಿಕೆಟ್​ ಪಂದ್ಯಗಳನ್ನು ಹೊರತು ಪಡಿಸಿ ಈ ಪ್ರಾಯೋಜಕತ್ವವನ್ನು ಮಾಸ್ಟರ್​ ಕಾರ್ಡ್​​ ಹೊಂದಲಿದೆ. ಇದರಲ್ಲಿ ಮಹಿಳಾ ಮತ್ತು ಪುರಷರ ಎಲ್ಲ ದೇಶಿ ಕ್ರಿಕೆಟ್​ ಪಂದ್ಯಗಳು ಇರಲಿವೆ.

2022-23ರ ಋತುವಿನ ದೇಶೀಯ ಕ್ರಿಕೆಟ್ ಪಂದ್ಯಗಳಿಗೆ ಮಾಸ್ಟರ್‌ಕಾರ್ಡ್ ಅನ್ನು BCCI ಸ್ವಾಗತಿಸುತ್ತದೆ. ಅಂತಾರಾಷ್ಟ್ರೀಯ ಸ್ಥಳೀಯ ಸರಣಿಗಳ ಜೊತೆಗೆ, BCCI ನ ದೇಶೀಯ ಪಂದ್ಯಾವಳಿಗಳು ನಿರ್ಣಾಯಕವಾಗಿವೆ.

ಭಾರತೀಯ ಕ್ರಿಕೆಟ್ ಬೆಳವಣಿಗೆಗೆ ಮಾಸ್ಟರ್‌ಕಾರ್ಡ್‌ನ ಬೆಂಬಲವನ್ನು BCCI ನಿಜವಾಗಿಯೂ ಗೌರವಿಸುತ್ತದೆ. ಈ ಕ್ರೀಡೆಯು ಉತ್ಸಾಹಕ್ಕಿಂತ ಹೆಚ್ಚಾಗಿ ದೇಶದ ಜನರ ಜೀವನ ವಿಧಾನವಾಗಿದೆ. ಈ ಪಾಲುದಾರಿಕೆಯು ಅಭಿಮಾನಿಗಳಿಗೆ ಕೆಲವು ನವೀನ ಅನುಭವಗಳನ್ನು ನೀಡುವುದನ್ನು ನಾವು ಎದುರು ನೋಡುತ್ತೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಆಗಸ್ಟ್ 2019 ರಲ್ಲಿ ನಡೆದ ಬಿಡ್​​ನಲ್ಲಿ Paytm 2019 – 23ರ ವರೆಗೆ ದೇಶದಲ್ಲಿ ನಡೆಯುವ ಪಂದ್ಯಗಳಿಗಾಗಿ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಗೆದ್ದುಕೊಂಡಿತ್ತು. 326.80 ಕೋಟಿ ರೂ ಬಿಡ್​​ನೊಂದಿಗೆ ಪೇಟಿಎಂ ಪ್ರಾಯೋಜಕತ್ವ ಪಡೆದುಕೊಂಡಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!