ಮದುವೆಯಾದ 15 ದಿನದಲ್ಲೇ ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಷ ಸೇವಿಸಿ ಆತ್ಮಹತ್ಯೆಗೈಯ್ಯಲು ಯತ್ನಿಸಿದ್ದ ನವ ವಿವಾಹಿತೆಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತುವಿನ ರಶ್ಮಿ (24) ಎಂಬಾಕೆಯೇ ಮೃತಪಟ್ಟ ಯುವತಿಯಾಗಿದ್ದಾಳೆ.
ಗಂಜಿಮಠ ಮೂಲದ ಹಾಗೂ ದುಬಾಯಿಯಲ್ಲಿ ಇಂಜಿನಿಯರ್ ಆಗಿರುವ ಯುವಕನ ಜೊತೆ ಆರು ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದಿದ್ದು, ಕಳೆದ ಆಗಸ್ಡ್ 21 ರಂದು ವಿವಾಹ ನೆರವೇರಿತ್ತು.
ಸೆ.3 ರಂದು ರಶ್ಮಿಯ ಅಕ್ಕನ ಮನೆಯಲ್ಲಿ ಔತನ ಕೂಟ ಏರ್ಪಡಿಸಲಾಗಿದ್ದು, ಅದೇ ದಿನ ರಶ್ಮಿ ವಿಷ ಸೇವಿಸಿದ್ದಳು ಎನ್ನಲಾಗಿದೆ.
ಬಳಿಕ ಆಕೆಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಕೆ ಮೃತಪಟ್ಟಿದ್ದಾಳೆ.ಈ ಬಗ್ಗೆ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!