ಕಸದಿಂದ ರಸ: ಸಿನಿಮಾದಿಂದ ಪ್ರೇರಿತರಾಗಿ ‘ಅವತಾರ್’ ಪ್ರತಿಮೆಗಳನ್ನು ತಯಾರಿಸಿದ ಪುದುಚೇರಿ ವಿದ್ಯಾರ್ಥಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಅವತಾರ್: ದ ವೇ ಆಫ್ ವಾಟರ್’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದಷ್ಟೇ ಅಲ್ಲ, ಮಕ್ಕಳನ್ನು ಸೃಜನಶೀಲರಾಗಲು ಪ್ರೇರೇಪಿಸುತ್ತಿದೆ.
ಪುದುಚೇರಿಯ ಸೆಲಿಯಮೇಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಗುಂಪು ನೇಯ್ಟಿರಿ, ಜೇಕ್ ಸುಲ್ಲಿ ಮತ್ತು ಗ್ರೇಟ್ ಲಿಯೊನೊಪ್ಟೆರಿಕ್ಸ್‌ನ ಪ್ರಮುಖ ಪಾತ್ರಗಳ ಪ್ರತಿಮೆಗಳನ್ನು ರಚಿಸುವ ಮೂಲಕ ಜೇಮ್ಸ್ ಕ್ಯಾಮೆರಾನ್ ಬಗ್ಗೆ ತಮಗಿರುವ ಒಲವನ್ನು ಬಿತ್ತರಿಸಿದರು.

A still from 'Avatar' and the figurine made by Puducherry students (Image Source: Instagram, ANI Photos)

ಸಂತೋಷ್ ಮತ್ತು ನವನೀತಕೃಷ್ಣನ್ ಎಂಬ ಇಬ್ಬರು ವಿದ್ಯಾರ್ಥಿಗಳು ಪ್ರತಿಮೆಗಳನ್ನು ರಚಿಸಿದ್ದಾರೆ. ಚಲನಚಿತ್ರದ ಮೂಲ ಪಾತ್ರಗಳನ್ನು ಅನುಕರಿಸುವ ಪ್ರತಿಮೆಗಳನ್ನು ರಚಿಸಲು ಅವರಿಗೆ ಒಂದು ವಾರ ಬೇಕಾಯಿತು. ತೆಂಗಿನ ಚಿಪ್ಪುಗಳು, ಮಂದಾರ ಮತ್ತು ತಾಳೆ ಎಲೆಗಳಂತಹ ಗ್ರಾಮೀಣ ಪ್ರದೇಶಗಳಲ್ಲಿ ಸುಲಭವಾಗಿ ಲಭ್ಯವಿರುವ ನೈಸರ್ಗಿಕ ತ್ಯಾಜ್ಯ ವಸ್ತುಗಳಿಂದ ಪ್ರತಿಮೆಗಳನ್ನು ಸಂಪೂರ್ಣವಾಗಿ ರಚಿಸಲಾಗಿದೆ. ಕಸದಿಂದ ರಸ ಮಾಡುವ ಪ್ರಕ್ರಿಯೆಯನ್ನು ಈ ವಿದ್ಯಾರ್ಥಿಗಳನ್ನು ನೋಡಿ ಕಲಿಯಬೇಕಾಗಿದೆ.

ಇದಕ್ಕೂ ಮುನ್ನ ವಿದ್ಯಾರ್ಥಿಗಳು ರಾಜ್ಯಪಾಲೆ ತಮಿಳಿಸೈ ಅವರ ಶಿಲ್ಪವನ್ನು ರಚಿಸಿ ಸುತ್ತಮುತ್ತಲಿನ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು. ‘ಅವತಾರ್: ದಿ ವೇ ಆಫ್ ವಾಟರ್’ ನಲ್ಲಿ ಜೊಯ್ ಸಲ್ಡಾನಾ, ಸ್ಯಾಮ್ ವರ್ಥಿಂಗ್ಟನ್, ಸಿಗೌರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕ್ಲಿಫ್ ಕರ್ಟಿಸ್, ಜೋಯಲ್ ಡೇವಿಡ್ ಮೂರ್, CCH ಪೌಂಡರ್, ಎಡಿ ಫಾಲ್ಕೊ, ಜೆಮೈನ್ ಕ್ಲೆಮೆಂಟ್ ಮತ್ತು ಕೇಟ್ ವಿನ್ಸ್ಲೆಟ್ ನಟಿಸಿದ್ದಾರೆ.
ಡೆಡ್‌ಲೈನ್‌ನ ಪ್ರಕಾರ, ತೆರೆಮರೆಯಲ್ಲಿ, ಚಿತ್ರದ ನಿರ್ಮಾಣ ಬಜೆಟ್ ಮಾತ್ರ USD 250 ಮಿಲಿಯನ್ ತಲುಪಿದೆ ಎಂದು ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!