Wednesday, March 29, 2023

Latest Posts

IND vs NZ 2nd T20 : ಭಾರತಕ್ಕೆ 100 ರನ್ ನ ಗೆಲುವಿನ​ ಗುರಿ ನೀಡಿದ ನ್ಯೂಜಿಲ್ಯಾಂಡ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್​ ದಾಳಿಗೆ ನಲುಗಿದ ನ್ಯೂಜಿಲ್ಯಾಂಡ್​​ ಹಾರ್ದಿಕ್​ ಪಡೆಗೆ 100 ರನ್​ ಗೆಲುವಿನ ಗುರಿ ನೀಡಿದೆ.

ಟಾಸ್​ ಗೆದ್ದ ಕಿವೀಸ್​ ನಾಯಕ ಮಿಚೆಲ್​ ಸ್ಯಾಂಟ್ನರ್​​ ಬ್ಯಾಟಿಂಗ್​ ಆಯ್ದುಕೊಂಡಿದ್ದರು.

ಬ್ಯಾಟಿಂಗ್​ ಆರಂಭಿಸಿದ ನ್ಯೂಜಿಲ್ಯಾಂಡ್​​ ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳುತ್ತ ಸಾಗಿತು. ತಂಡದ ಪರ ನಾಯಕ ಮಿಚೆಲ್​ ಸ್ಯಾಂಟ್ನರ್ ಸರ್ವಾಧಿಕ 19 ರನ್​ ಗಳಿಸಿದರು. . ಅಂತಿಮವಾಗಿ ಕಿವೀಸ್​ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 99 ರನ್​ ಗಳಿಸಿದೆ. ಭಾರತದ ಪರ ಅರ್ಷದೀಪ್​ ಸಿಂಗ್​ 7ಕ್ಕೆ 2 ವಿಕೆಟ್​ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ಹಾಗೂ ಯುಜ್ವೇಂದ್ರ ಚಹಲ್ ತಲಾ ಒಂದು ವಿಕೆಟ್ ಪಡೆದು​ ಮಿಂಚಿದರು.
ಈಗಾಗಲೇ ಸರಣಿಯಲ್ಲಿ 0-1ರ ಹಿನ್ನಡೆಯಲ್ಲಿರುವ ಭಾರತ ತಂಡವು ಸರಣಿ ಜೀವಂತವಾಗಿರಿಸಿಕೊಳ್ಳಲು 100 ರನ್​ ಗಳಿಸಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!