Wednesday, March 29, 2023

Latest Posts

ಹಂಪಿ ಉತ್ಸವ, ಪ್ರೇಕ್ಷಕರನ್ನು ರಂಜಿಸಿದ ಸ್ಯಾಂಡಲ್ ವುಡ್ ‌ಗಾಯಕರು!

ಹೊಸ ದಿಗಂತ ವರದಿ, ಹಂಪಿ (ಗಾಯತ್ರಿ ಪೀಠ):

ಹಂಪಿ ಉತ್ಸವದ ಗಾಯತ್ರಿ ಪೀಠದ ಮುಖ್ಯ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.

ಗಾಯಕಿ ಅನುರಾಧ ಭಟ್ ಅವರು ಅಪ್ಪಾ ಐಲವ್ ಯೂ ಪಾ ಸೇರಿದಂತೆ ವಿವಿಧ ಹಾಡುಗಳನ್ನು ಪ್ರಸ್ತುತ ಪಡಿಸಿ ನೆರೆದ ಸಾವಿರಾರು ಪ್ರೇಕ್ಷಕರನ್ನು ರಂಜಿಸಿದರು.
ನಂತರ ಹೆಸರಾಂತ ಗಾಯಕ ವಿಜಯ ಪ್ರಕಾಶ್ ಅವರು, ಗೊಂಬೆ ಹಾಡುತೈತೆ, ಮತ್ತೆ ಹೇಳತೈತೆ, ರಾಜಕುಮಾರ ಸೇರಿದಂತೆ ಪ್ರಸ್ತುತ ಪಡಿಸಿದ ಪ್ರತಿ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು, ವಿಜಯ ಪ್ರಕಾಶ್ ಹಾಗೂ ಅನುರಾಧ ಭಟ್ ಇಬ್ಬರ ಜೋಡಿ ನೆರೆದ ಸಾವಿರಾರು ‌ಜನರನ್ನು ರಂಜಿಸಿತು.
ಸಾವಿರಾರು ಜನರು ಎಲ್ಲ ಹಾಡುಗಳನ್ನು ಕೇಳಿ ಸಂಭ್ರಮದಲ್ಲಿ ಮಿಂದೆದ್ದರು. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ, ಡಿಸಿ ಟಿ.ವೆಂಕಟೇಶ, ಎಸ್ಪಿ ಶ್ರೀಹರಿಬಾಬು ಸೇರಿದಂತೆ ವಿವಿಧ ಅಧಿಕಾರಿಗಳು ಆಸನದಲ್ಲಿ ಕುಳಿತು ಹಾಡುಗಳನ್ನು ಆಲಿಸಿ, ಸಂಭ್ರಮಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!