ಟ್ವಿಟರ್​ಗೆ ಗುಡ್ ಬೈ ಹೇಳಿದ ಉದ್ಯೋಗಿಗಳಿಗೆ ನಮ್ಮಲಿಗೆ ಬನ್ನಿ ಎಂದ ಕೂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲಾನ್ ಮಸ್ಕ್ ಒಡೆತನದ ಟ್ವಿಟರ್ ಕಂಪನಿಯನ್ನು ಈಗಾಗಲೇ ಅನೇಕ ಹೊಸ ಹೊಸ ರೂಲ್ಸ್ ತರುತ್ತಿದ್ದು, ಇದರಿಂದ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದೀಗ ಹೀಗೆ ಟ್ವಿಟರ್​ಗೆ ಗುಡ್ ಬೈ ಹೇಳಿದ ಉದ್ಯೋಗಿಗಳನ್ನು ಶೀಘ್ರದಲ್ಲೇ ನಾವು ನೇಮಿಸಿಕೊಳ್ಳುತ್ತೇವೆ ಎಂದು ಭಾರತದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ (Koo App) ಹೇಳಿದೆ.

ಕೂ ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕ ಟ್ವೀಟ್‌ ಮಾಡುವ ಮೂಲಕ ಟ್ವಿಟರ್​ನ ಮಾಜಿ ಉದ್ಯೋಗಿಗಳಿಗೆ ಕರೆನೀಡಿದ್ದಾರೆ.

“#RIPTwitter ಹಾಗೂ ಇದಕ್ಕೆ ಸಂಬಂಧಿಸಿದ ಹ್ಯಾಶ್​ಟ್ಯಾಗ್ ಅನ್ನು ನೋಡುವುದಕ್ಕೆ ತುಂಬಾ ಬೇಸರವಾಗುತ್ತದೆ. ನಾವು ಟ್ವಿಟರ್‌ನ ಮಾಜಿ ಉದ್ಯೋಗಿಗಳಲ್ಲಿ ಕೆಲವರನ್ನು ನೇಮಿಸಿಕೊಳ್ಳಲು ಮುಂದಾಗಿದ್ದೇವೆ. ನಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಶ್ರಮವಹಿಸುತ್ತೇವೆ. ಇವರು ತಮ್ಮ ಪ್ರತಿಭೆಯನ್ನು ಗೌರವಿಸುವ ಸ್ಥಳದಲ್ಲಿ ಕೆಲಸ ಮಾಡಲು ಅರ್ಹರಾಗಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಜನರ ಶಕ್ತಿಗೆ ಸಂಬಂಧಿಸಿದ್ದಾಗಿದೆ,’ ಎಂದು ಬಿಡವಟ್ಕ ಟ್ವೀಟ್ ಮಾಡಿದ್ದಾರೆ.

ಮಾರ್ಚ್ 2020 ರಲ್ಲಿ ಪ್ರಾರಂಭವಾದ ಕೂ ಇಂದು ವಿಶ್ವದಲ್ಲಿ ಎರಡನೇ ಅತಿದೊಡ್ಡ ಮೈಕ್ರೋಬ್ಲಾಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 50 ಮಿಲಿಯನ್​​ಗೂ ಅಧಿಕ ಡೌನ್‌ಲೋಡ್‌ ಕಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!