ಬಿಜೆಪಿಯನ್ನು ಪದ್ಯದ ಮೂಲಕ ಹಾಡಿ ಹೊಗಳಿದ ಪುಟ್ಟ ಬಾಲಕಿ: ಖುಷಿಯಿಂದ ಶಭಾಶ್ ಎಂದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ಚುನಾವಣಾ ಪ್ರಚಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದು, ಇದರ ನಡುವೆ ಮೋದಿ ಪಕ್ಕ ಕುಳಿತು ಬಾಲಕಿಯೊಬ್ಬಳು ಬಿಜೆಪಿಕುರಿತಂತೆ ಪದ್ಯವೊಂದನ್ನು ಹಾಡುತ್ತಾ, ಹೊಗಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಬಾಲಕಿ ಗುಜರಾತಿ ಭಾಷೆಯಲ್ಲಿ ‘ಬಿಜೆಪಿ ನಮ್ಮನ್ನು ಉಳಿಸುತ್ತಿದೆ, ಬಿಜೆಪಿ ಮತ್ತೆ ಬರುತ್ತದೆ’ ಎಂದು ಹೇಳಿದ್ದು, ಪ್ರಧಾನಿ ಮೋದಿಯೇ ಆ ಪುಟ್ಟ ಬಾಲಕಿಯ ಮಾತನ್ನು ಕೇಳಿ ಖುಷಿಪಟ್ಟಿದ್ದಾರೆ.

57 ಸೆಕೆಂಡ್‍ಗಳಿರುವ ಈ ವೀಡಿಯೋದಲ್ಲಿ, ಬಿಜೆಪಿ, ಬಿಜೆಪಿ, ಬಿಜೆಪಿ, ಎಲ್ಲಿ ನೋಡಿದರೂ ಬಿಜೆಪಿ, ಪ್ರತಿಯೊಂದು ಚರ್ಚೆಯೂ ಬಿಜೆಪಿಯಿಂದಲೇ ಆರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ. ಬಿಜೆಪಿಯನ್ನು ಸೋಲಿಸಲು ಜನ ನಾನಾ ಆಟಗಳನ್ನು ಆಡುತ್ತಿದ್ದಾರೆ ಎಂದು ಬಾಲಕಿ ಪದ್ಯ ಹಾಡಲು ಶುರು ಮಾಡಿದ್ದಾಳೆ.
ಪದ್ಯವನ್ನು ಕೇಳಿದ ಮೋದಿ ಅವರು ಕೊನೆಗೆ ಬಾಲಕಿಗೆ ಶಭಾಶ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಳಿಕ ಪ್ರಧಾನಿ ಮೋದಿ ಅವರ ಪಕ್ಕದಲ್ಲಿ ಕುಳಿತುಕೊಳ್ಳಲುಭಯವಾಗಲಿಲ್ಲವೇ ಎಂದು ಕೇಳಿದಾಗ, ನಾನು ಕೋಣೆಗೆ ಹೋಗುವ ಮೊದಲು ಭಯಗೊಂಡಿದ್ದೆ. ಆದರೆ ನಾನು ಪ್ರಧಾನಿ ಅವರ ಮುಂದೆ ಹೋದ ನಂತರ ಭಯಪಡಲಿಲ್ಲ. ಅವರು ನನ್ನ ಅಜ್ಜ ಎಂದು ನಾನು ಭಾವಿಸಿದೆ. ನನಗೆ ಆಟೋಗ್ರಾಫ್ ಬೇಕಾ ಅಥವಾ ಫೋಟೋ ಬೇಕಾ ಎಂದು ಅವರು ನನ್ನನ್ನು ಕೇಳಿದರು. ಆಗ ನನಗೆ ಎರಡೂ ಬೇಕು ಅಂತ ಹೇಳಿದೆ. ಆಗ ನಾನು ಧರಿಸಿದ್ದ ಬಿಜೆಪಿ ಕವಚಕ್ಕೆ ಶಾಲಿಗೆ ಸಹಿ ಹಾಕಿದರು. ಅಲ್ಲದೇ ನನ್ನ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡರು ಎಂದು ಪೂತ ಬಾಲಕಿ ತಿಳಿಸಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!