ಹೊಸ ದಿಗಂತ ವರದಿ, ಹಾವೇರಿ:
ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಕೃಷಿ ಕೇತ್ರದ ಅಭಿವೃದ್ಧಿ ಹಾಗೂ ರಾಸಾಯನಿಕ ಮುಕ್ತ ಹಾಗೂ ನೈಸರ್ಗಿಕ ಕೃಷಿ ಆದ್ಯತೆಯನ್ನು ನೀಡಿದ ಆಯವ್ಯಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ.
ಕೃಷಿ ವಿವಿಗಳ ಸಿಲೆಬಸ್‌ಗಳ ಪುನಾರಚನೆಗೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಪ್ರೋತ್ಸಾಹ ನೀಡಿದೆ. ಸಾವಯವ ಕೃಷಿಗೆ ಆದ್ಯತೆ, ಶೂನ್ಯ ಬಂಡವಾಳದಿಂದ ಆಧುನಿಕ ಕೃಷಿ ಪದ್ದತಿಯ ಕಲಿಕೆಗೆ ಉತ್ತೇಜನ. ರೈತರ ಕೃಷಿ ಉತ್ಪನ್ನಗಳಿಗೆ ನೀಡುವ ಕನಿಷ್ಟ ಬೆಂಬಲ ಬೆಲೆ ರೈತರ ಖಾತೆಗೆ ನೇರವಾಗಿ ಜಮೆ ಮಾಡುವುದರಿಂದ ರೈತರಿಗೆ ಪ್ರಯೋಜನವಾಗಲಿದೆ.
ಕೃಷಿ ಉತ್ಪನ್ನ ಹೆಚ್ಚಳಕ್ಕೆ ರೈತರಿಗೆ ಹೈಟೆಕ್ ಸೇವೆ ಒದಗಿಸುವುದಕ್ಕೆ ಚಾಲನೆ. ಕೃಷಿ ರಂಗದ ಸ್ಟಾರ್ಟ್ ಅಪ್‌ಗಳಿಗೆ ಹಣಕಾಸಿನ ನೆರವು ನೀಡುವುದಕ್ಕೆ ನಿರ್ಧಾರ. 1.63 ಕೋಟಿ ರೈತರಿಂದ 1208 ಮೆಟ್ರಿಕ್ ಟನ್ ಭತ್ತ ಹಾಗೂ ಗೋದಿ ಖರಿದಿಗಾಗಿ 2.37 ಲಕ್ಷ ಕೋಟಿ ಅನುದಾನ ಮೀಸಲು.
ರೈತರಿಗೆ ನೆರವಾಗುವ ಕೃಷಿ ಭೂಮಿ ಸಮೀಕ್ಷೆ, ಬೆಳೆ ಸಮೀಕ್ಷೆ ಹಾಗೂ ಬೆಳೆಗಳ ಕೀಟಗಳ ನಾಶಕ್ಕೆ ಡ್ರೋಣ್ ಬಳಕೆಗೆ ಪ್ರೋತ್ಸಾಹ ಹಾಗೂ ಡ್ರೋನ್ ಶಕ್ತಿ ಯೋಜನೆ ಜಾರಿಗೆ ತಂದಿರುವುದು. ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಠಿಸುವುದಕ್ಕೆ ನಬಾರ್ಡ್ ಸಹಯೋಗದಲ್ಲಿ ಸಹಾಯಧನ ನೀಡುವುದು ಸೇರಿದಮತೆ ಇನ್ನು ಹತ್ತು ಹಲವು ರೈತ ಯೋಜನೆಗಳನ್ನು ಕೇಂದ್ರ ಸರ್ಕಾರ ಈ ಆಯವ್ಯಯದಲ್ಲಿ ನೀಡುವ ಮೂಲಕ ದೇಶದ ರೈತರ ಹಿತ ಕಾಯುವ ಕೆಲಸವನ್ನು ಮಾಡಿದೆ.