ಕಂದಕಕ್ಕೆ ಉರುಳಿ ಬಿದ್ದ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್: 35 ಮಂದಿ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಈಸ್ಟರ್ ನಿಮಿತ್ತ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 35 ಮಂದಿ ಸಾವನ್ನಪ್ಪಿದ್ದಾರೆ. ಜಿಂಬಾಬ್ವೆಯ ಪೂರ್ವ ಮಣಿಕಾಲ್ಯಾಂಡ್ ಪ್ರಾಂತ್ಯದ ಚಿಪಿಂಗ್ ಜಿಲ್ಲೆಯ ಬಳಿ ಶುಕ್ರವಾರ ಈ ಅಪಘಾತ ಸಂಭವಿಸಿದೆ.
ಬಸ್​ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಈ ವೇಳೆ ಉಬ್ಬುತಗ್ಗಾದ ರಸ್ತೆಯಿಂದ ಬಸ್ ತಿರುಗಿ ಆಳ ಕಂದಕಕ್ಕೆ ಬಿದ್ದಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಈಸ್ಟರ್ ರಜೆ ಹಿನ್ನೆಲೆಯಲ್ಲಿ ಜಿಯಾನ್ ಚರ್ಚ್‌ನ ಸದಸ್ಯರನ್ನು ಈ ಬಸ್‌ ಸಾಗಿಸುತ್ತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!