ಹೊಸದಿಗಂತ ವರದಿ, ಮೈಸೂರು:
ಅರಮನೆ ನಗರಿ ಮೈಸೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಕನ್ನಡದಲ್ಲಿ ಮಾತು ಪ್ರಾರಂಭಿಸಿ, ವಿಶ್ವ ಹಾಗೂ ದೇಶಕ್ಕೆ ಮೈಸೂರು ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಸಮಾವೇಶದಲ್ಲಿ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್ ,ವಿಶ್ವೇಶ್ವರಯ್ಯ ಹಾಗೂ ರಾಷ್ಟçಕವಿ ಕುವೆಂಪು ಅವರನ್ನು ಸ್ಮರಿಸಿದರು ವಿಶೇಷವಾಗಿತ್ತು.
ದೇಶದ ಆರ್ಥಿಕ, ಆಧ್ಯಾತ್ಮಿಕ ನಾಡು ಕರ್ನಾಟಕ, ಮೈಸೂರು ಇತಿಹಾಸ ಪಾರಂಪರಿಕ,ಆಧುನಿಕತೆಯ ಸಂಕೇತ ಎಂದು ಪ್ರಧಾನಿ ಬಣ್ಣಿಸಿದರು.
ಮೈಸೂರು ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ ಸಂಪದ್ಬರಿತವಾಗಿದೆ. ಇದಕ್ಕೆ ಕಾರಣ ಇಲ್ಲಿನ ಪೂರ್ವಜನರು ನೀಡಿದ ಕೊಡುಗೆ. ಇಲ್ಲಿನ ಪೂರ್ವಜರು ನಾಡನ್ನು ಕಟ್ಟಿದ್ದಾರೆ. ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ, ಕೊಡುಗೆಗಳನ್ನು ನೀಡಿ, ಮಾದರಿ ಹಾಕಿಕೊಟ್ಟಿದ್ದಾರೆ.
ಮೈಸೂರಿನ ಆಧ್ಯಾತ್ಮಕ ಶಕ್ತಿ ಇಡೀ ಜಗತ್ತಿಗೆ ಪರಿಚಯವಾಗಿದೆ. ಇಲ್ಲಿ ಯೋಗ ಇಡೀ ಜಗತ್ತಿಗೆ ಪರಿಚಿತವಾಗಿದೆ. ಹಾಗಾಗಿ ಮೈಸೂರು ಆಧ್ಯಾತ್ಮಕ ಕೇಂದ್ರ ಬಿಂದುವಾಗಿದೆ. ಇಲ್ಲಿ ನಡೆಯುತ್ತಿರುವ ಅಂತರಾಷ್ಟಿಯ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಈ ಮೂಲಕ ಇಡೀ ಜಗತ್ತನ್ನು ಯೋಗದ ಮೂಲಕ ಜೋಡಣೆ ಮಾಡುತ್ತಿದ್ದೇವೆ. ದೇಶದ ಜನರೊಂದಿಗೆ ಮೈಸೂರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಹಲವಾರು ಐತಿಹಾಸಿಕ ಪ್ರವಾಸಿ ತಾಣಗಳಿದ್ದು, ಅವು ಜಗತ್ತಿನ ಗಮನವನ್ನು ಸೆಳೆಯುತ್ತಿವೆ. ಪ್ರವಾಸೋದ್ಯಮದಲ್ಲೂ ಐತಿಹಾಸಿಕವಾಗಿದೆ. ಇಲ್ಲಿನ ಪ್ರವಾಸೋದ್ಯಮಕ್ಕೆ ಕೇಂದ್ರದಿOದ ಸಹಕಾರ ನೀಡಲಾಗುವುದು. ಉತ್ತರ ಆರೋಗ್ಯ ಸುಧಾರಣೆಗಾಗಿ ಮೈಸೂರಿಗೆ ಆ ಬಾರಿ ಆದ್ಯತೆ ನೀಡಲಾಗಿದೆ. ಮೈಸೂರಿನ ರೈಲು ನಿಲ್ದಾಣ ವಿಸ್ತರಣೆಯಾಗಲಿದೆ. ಮೈಸೂರು ತಾಲೂಕಿನ ನಾಗನಹಳ್ಳಿಯಲ್ಲಿ ರೈಲು ಟ್ರಕ ಟರ್ಮಿನಲ್ ನಿರ್ಮಾಣವಾಗುತ್ತಿದ್ದು, ಇದರಿಂದಾಗಿ ಮೈಸೂರಿನ ಚಹರೆಯೇ ಬದಲಾಗಲಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದರಾದ ಪ್ರತಾಪ್ ಸಿಂಹ ಸುಮಲತಾ ಅಂಬರೀಶ್, ಶಾಸಕರುಗಳಾದ ಎಸ್.ಎ.ರಾಮದಾಸ್,ನಾಗೇಂದ್ರ, ಜಿ.ಟಿ.ದೇವೇಗೌಡ,ಮೇಯರ್ ಸುನಂದಾ ಪಾಲನೇತ್ರ ಮತ್ತಿತರರಿದ್ದರು.