ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇಂದು 148 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಸೋಂಕಿನಿಂದಾಗಿ ಓರ್ವ ಸಾವನ್ನಪ್ಪಿದ್ದಾರೆ. ಅಲ್ಲದೇ ಸಕ್ರೀಯ ಸೋಂಕಿತರ ಸಂಖ್ಯೆ 1,144ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ ಆರ್.ಟಿ ಪಿಸಿಆರ್ ಮೂಲಕ 6,237, RAT ಮೂಲಕ 1068 ಸೇರಿದಂತೆ 7,305 ಮಂದಿಗೆ ಕೋವಿಡ್ ಪರೀಕ್ಷೆಯನ್ನು ಮಾಡಲಾಗಿದೆ .
ಬೆಂಗಳೂರು ನಗರದಲ್ಲಿ 75, ಗ್ರಾಮಾಂತರ 03, ಬಳ್ಳಾರಿ 04, ಚಿಕ್ಕಬಳ್ಳಾಪುರ 05, ಚಿತ್ರದುರ್ಗ 03, ದಕ್ಷಿಣ ಕನ್ನಡ 03, ಧಾರವಾಡ 01, ಗದಗ 03, ಹಾಸನ 18, ಕಲಬುರ್ಗಿ 01, ಕೋಲಾರ 01, ಮೈಸೂರು 02, ರಾಯಚೂರು 03, ತುಮಕೂರು 01, ಉತ್ತರ ಕನ್ನಡ 07 ಹಾಗೂ ವಿಜಯನಗರ 08 ಸೇರಿದಂತೆ 148 ಮಂದಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಅಂತ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 248 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 1144ಕ್ಕೆ ತಲುಪಿದೆ.