ಕರ್ನಾಟಕದ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ:ನಿತಿನ್‌ ಗಡ್ಕರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆ ಬಳಿ ಗಜ್ಜಲಗೆರೆ ಸಾರ್ವಜನಿಕ ಸಮಾವೇಶದಲ್ಲಿ ಕೇಂದ್ರ ಸಚಿತ ನಿತಿನ್‌ ಗಡ್ಕರಿ ಭಾಗಿಯಾಗದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕದ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು.

ಹೆದ್ದಾರಿ ನಿರ್ಮಾಣದ ಜೊತೆ ಜೊತೆಗೆ ಹಾಳಾಗಿದ್ದ ಹಳೆಯ ರಸ್ತೆಗಳನ್ನು ಸಹ ದುರಸ್ತಿಪಡಿಸಿದ್ದೇವೆ. 8 ಕಿಲೋ ಮೀಟರ್‌ ದೂರ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ತಮಿಳುನಾಡಿಗೂ‌ ಈ ಹೆದ್ದಾರಿ ಸಂಪರ್ಕ ಹೊಂದಲಿದೆ ಎಂದರು. ಡಬಲ್‌ ಎಂಜಿನ್‌ ಸರ್ಕಾರ ಇದ್ದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಇದೊಂದು ಸೂಕ್ತ ನಿದರ್ಶನ.

ರಾಜ್ಯದಲ್ಲಿ ಡಬಲ್​ ಎಂಜಿನ್​ ಸರ್ಕಾರದಿಂದ ಅಭಿವೃದ್ಧಿ ಪರ್ವ ಶುರುವಾಗಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ 20 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು-ಚೆನ್ನೈ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ ಎಂದರು. ಅದೂ ಕೂಡ ಮುಂಬರುವ ವರ್ಷ ಇದೇ ಸಮಯಕ್ಕೆ 2024ರ ಮಾರ್ಚ್​ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂಬ ಮಾತನ್ನು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!