ಇಂದು ದೇಶದ ಇತಿಹಾಸದಲ್ಲಿ ವಿಶೇಷ ದಿನ: ನೆಹರೂ ಹಾರಿಸಿದ ಧ್ವಜ ಟ್ವೀಟ್​ ಮಾಡಿ ಜನತೆಗೆ ಮನವಿ ಮಾಡಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜುಲೈ 22 ಅಂದರೆ ಇಂದು ದೇಶದ ಇತಿಹಾಸದಲ್ಲಿ ಅತ್ಯಂತ ವಿಶೇಷ ದಿನವಾಗಿದೆ.
1947ರಲ್ಲಿ ಜುಲೈ 22ರಂದು ನಮ್ಮ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡ ದಿನವಿದು. ನಮಗೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದ ಹಿನ್ನೆಲೆಯಲ್ಲಿ ಈ ದಿನವನ್ನು ಸ್ಮರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಜನರನ್ನು ಮನವಿಯೊಂದನ್ನು ಮಾಡಿದ್ದಾರೆ.

ನಮ್ಮ ತ್ರಿವರ್ಣಧ್ವಜದ ಜೊತೆ ಸಹಯೋಗ ಹೊಂದಿದ ಸಮಿತಿಯ ವಿವರ, ಪಂಡಿತ್ ಜವಹರಲಾಲ್ ನೆಹರೂ ಅವರು ಅನಾವರಣಗೊಳಿಸಿದ ತ್ರಿವರ್ಣಧ್ವಜವನ್ನು ಟ್ವೀಟ್​ ಮೂಲಕ ಶೇರ್​ ಮಾಡಿಕೊಂಡಿರುವ ಪ್ರಧಾನಿಯವರು, ಇದು ನಮ್ಮ ಭಾರತದ ಮೊದಲ ಪ್ರಧಾನಿ ಪಂಡಿತ್​ ನೆಹರು ಅನಾವರಣಗೊಳಿಸಿರುವ ಧ್ವಜ ಎಂದು ಹೇಳಿದ್ದಾರೆ.

ದೇಶದ ಪ್ರತಿಯೊಬ್ಬ ನಾಗರಿಕರಲ್ಲಿ ದೇಶಭಕ್ತಿಯ ಭಾವನೆ ಮೂಡಿಸಲು, ಕೇಂದ್ರ ಸರ್ಕಾರವು ‘ಹರ್ ಘರ್ ತಿರಂಗ’ ಎಂಬ ಅತ್ಯುತ್ತಮ ಕಾರ್ಯಕ್ರಮವನ್ನು ಘೋಷಿಸಿದೆ. ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಕಾರ್ಯಕ್ರಮವನ್ನು ನಿಗದಿಪಡಿಸಿದೆ.

ಹರ್ ಘರ್ ತಿರಂಗಾ ಅಭಿಯಾನದ ಪ್ರಚಾರಕ್ಕಾಗಿ ಸರ್ಕಾರ https://harghartiranga.com/ ಎಂಬ ವೆಬ್ ಸೈಟ್ ನ್ನು ಕೂಡಾ ಆರಂಭಿಸಿದೆ. ಈ ವೆಬ್ ಸೈಟ್ ಮೂಲಕ ಭಾರತೀಯರು ತಮ್ಮ ಮನೆಯಲ್ಲಿ ಧ್ವಜ ಹಾರಿಸಬಹುದು. ಇಲ್ಲಿ ವರ್ಚುವಲ್ ಆಗಿ ಪಿನ್ ಎ ಫ್ಲ್ಯಾಗ್ ಮಾಡಬಹುದು ಮತ್ತು ಸೆಲ್ಫಿ ವಿತ್ ಫ್ಲಾಗ್ ಫೋಸ್ಟ್ ಮಾಡಬಹುದು.

ಕೇಂದ್ರ ಸರ್ಕಾರ ಆಜಾದ್ ಕಿ ಅಮೃತ ಮಹೋತ್ಸವ ಎಂದು ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಳಾಗಿದ್ದು, ಪ್ರತಿ ಮನೆಯಲ್ಲಿ ತಿರಂಗ ಅಭಿಯಾನವನ್ನು ಬಲಪಡಿಸೋಣ. ಆಗಸ್ಟ್ 13ರಿಂದ 15ರವರೆಗೆ ತ್ರಿವರ್ಣ ಧ್ವಜವನ್ನು ನಿಮ್ಮ ಮನೆಯಲ್ಲಿ ಹಾರಿಸಿ ಅಥವಾ ಪ್ರದರ್ಶಿಸಿ, ಈ ಅಭಿಯಾನ ರಾಷ್ಟ್ರಧ್ವಜದ ಮೇಲೆ ಭಾರತೀಯರ ಸಂಬಂಧವನ್ನು ಮತ್ತಷ್ಟು ಬಲಗೊಳಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!