ಇಂದು ‘ಪಾನಿಪುರಿ ದಿನ’: ಗೂಗಲ್‌ ನಿಂದ ಡೂಡಲ್‌ ಮೂಲಕ ವಿಶೇಷ ಗೌರವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಾನಿಪುರಿ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ… ಯಾರೇ ಭಾರತಕ್ಕೆ ಬಂದರೂ ಪಾನಿಪುರಿ ಸವಿಯದೇ ಇರಲ್ಲ. ಇದೀಗ ಗೂಗಲ್ ಕೂಡ ಭಾರತದ ಪಾನಿಪುರಿಗೆ ಮನಸೋತಿದ್ದು, ಡೂಡಲ್ ಮೂಲಕ ಪಾನಿಪುರಿಗೆ ವಿಶೇಷ ಗೌರವ ಸಲ್ಲಿಸಿದೆ.

ಆಲೂಗಡ್ಡೆ, ಕ್ಯಾರೆಟ್​ ಹಾಗೂ ಮಸಾಲೆ ನೀರಿನಿಂದ ತುಂಬಿದ ಗರಿಗಿರಿಯಾದ ಪುರಿ ಬೀದಿಬದಿಯ ಜನಪ್ರಿಯ ಖಾದ್ಯ. ಇಂದು ಪಾನಿಪುರಿ ದಿನವಾಗಿದ್ದು. ಈ ಹಿನ್ನೆಲೆಯಲ್ಲಿ ಗೂಗಲ್ ಗೌರವ ಸಲ್ಲಿಸಿದೆ.

2015ರ ಜುಲೈ 12ರಂದು ಮಧ್ಯಪ್ರದೇಶದ ಇಂದೋರ್ನ ರೆಸ್ಟೋರೆಂಟ್ವೊಂದು ತನ್ನ ಗ್ರಾಹಕರಿಗಾಗಿ 51 ವಿವಿಧ ರೀತಿಯ ಪಾನಿಪುರಿಗಳನ್ನು ತಯಾರಿಸಿತು. ಅಲ್ಲಿ ತಯಾರಿಸಲಾಗಿದ್ದ ಅಷ್ಟೂ ಪಾನಿಪುರಿಗಳು ಅತ್ಯಂತ ರುಚಿಕರವಾಗಿದ್ದರಿಂದ ಗೋಲ್ಡನ್​ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ನಲ್ಲಿ ಸ್ಥಾನ ನೀಡಲಾಗಿತ್ತು.

ಅಂದಿನಿಂದ ಜುಲೈ 12 ಅನ್ನು ‘ಪಾನಿಪುರಿ ದಿನ’ ಎಂದು ಕರೆಯಲಾಗುತ್ತಿದೆ. ಇದೀಗ ಎಂಟು ವರ್ಷಗಳ ನಂತರ ಗೂಗಲ್ ಪಾನಿಪುರಿ ದಿನಾಚರಿಸುತ್ತಿದ್ದು, ಪಾನಿಪುರಿ ಗೇಮ್ ರಚಿಸಿದೆ.

ಗೂಗಲ್​ ಡೂಡಲ್​ ಪಾನಿಪುರಿ ಗೇಮ್​ ಆಡುವುದು ಹೇಗೆ? WWW.Google.Com ಸರ್ಚ್ ಮಾಡಿ . ನಂತರ ಕಂಪ್ಯೂಟರ್ ಅಥವಾ ಮೊಬೈಲ್ ಮೇಲೆ ಗೇಮ್ ಗೋಚರವಾಗುತ್ತದೆ ಬಳಿಕ ಗೇಮ್ ಮೇಲೆ ಕ್ಲಿಕ್ ಮಾಡಿ ಆಗ Timed ಹಾಗೂ Relaxed ಎಂಬ ಆಪ್ಶನ್ ಸಿಗುತ್ತವೆ, ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಬಳಿಕ ಪಾನಿ ಪುರಿ ಜೋಡಿಸುತ್ತ ಗೇಮ್ ಆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!