ರೈಲೊಳಗೆ ಮಹಿಳೆಯರ ರಸ್ಲಿಂಗ್: ಬಿಡಿಸಲು ಹೋದವರಿಗೂ ಬಿತ್ತು ಧರ್ಮದೇಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ರೈಲಿನಲ್ಲಿ ಜಗಳ ಸಾಮಾನ್ಯ. ಸೀಟಿಯಿಂದ ಹಿಡಿದು ಒಂದಲ್ಲ, ಒಂದು ವಿಚಾರಗಳಲ್ಲಿ ಜಗಳ ಆಗುತ್ತಾ ಇರುತ್ತೆ. ಇದೀಗ ಕೋಲ್ಕತ್ತಾದ ಲೋಕಲ್ ರೈಲಿನಲ್ಲಿ ಮಹಿಳೆಯರಿಬ್ಬರು ಕಿತ್ತಾಡಿಕೊಂಡಿದ್ದಾರೆ.

ಆರಂಭದಲ್ಲಿ ಮಹಿಳೆಯರಿಬ್ಬರು ಜಗಳ ಮಾಡಿಕೊಂಡಿದ್ದು, ನಿಮಿಷದಲ್ಲೇ ರಸ್ಲಿಂಗ್ ಟೀಮ್ ರೀತಿ ಮಹಿಳೆಯರ ಫೈಟಿಂಗ್ ಗ್ರೂಪ್ ಆಗಿ ಬದಲಾಗಿದೆ. ಇವರ ಜಗಳ ಬಿಡಿಸಲು ಮುಂದಾದವರಿಗೂ ಏಟು ಬಿದ್ದಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಸಾಕಷ್ಟು ವೈರಲ್ ಆಗಿದೆ.

30 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ನೀರಿನ ಬಾಟಲ್ ಹಾಗೂ ಚಪ್ಪಲಿಯಿಂದಲೂ ಪರಸ್ಪರ ಹೊಡೆದುಕೊಳ್ಳುವುದನ್ನು ಕಾಣಬಹುದಾಗಿದೆ. ಆದರೆ ಈ ಹೊಡೆದಾಟಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

https://twitter.com/Ayushihihaha/status/1678736891242487808?ref_src=twsrc%5Etfw%7Ctwcamp%5Etweetembed%7Ctwterm%5E1678736891242487808%7Ctwgr%5E6d5046490eb8da2730a9a5cfa40583e1d3c431cd%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FAyushihihaha%2Fstatus%2F1678736891242487808%3Fref_src%3Dtwsrc5Etfw

ಈ ವೀಡಿಯೋ ನೋಡಿದ ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದು ಮುಂಬೈ ಲೋಕಲ್ ರೈಲಿನ ಪ್ರೊ ವರ್ಷನ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ರೈಲಿನೊಳಗೆ ಉಚಿತ ಮನೋರಂಜನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ರೈಲೊಳಗೆ ರಸ್ಲಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!