ಇಂದು ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ, ಜೊತೆಗೆ ಇಂದು ಶನಿ ಅಮವಾಸ್ಯೆಯೂ ಇದೆ. ಶನಿವಾರದಂದೇ ಶನಿ ಅಮಾವಾಸ್ಯೆ ಬಂದಿರುವುದರಿಂದ ಇದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ದಿನ ದಾನ ಧರ್ಮ ಮಾಡಿದರೆ ಜೀವದಲ್ಲಿ ಅಭಿವೃದ್ಧಿ ಹೊಂದುತ್ತಾರೆ ಎಂದು ನಂಬಲಾಗಿದೆ.
ಈ ದಿನ ಶನಿ ದೇವರಿಗೆ ಇಷ್ಟದ ವಸ್ತುಗಳನ್ನು ದಾನ ಮಾಡಬಹುದು, ಆದರೆ ಕೆಲ ವಸ್ತುಗಳನ್ನು ದಾನ ನೀಡುವಂತೆ ಇಲ್ಲ. ಈ ದಿನ ತುಳಸಿ ಎಲ್ಲೆಗಳನ್ನು ಕೀಳಬಾರದು, ತುಳಸಿ ಗಿಡದಲ್ಲಿ ಲಕ್ಷ್ಮೀದೇವಿ ನೆಲೆಸಿದ್ದು, ಈ ದಿನ ತುಳಸಿ ಕೀಳುವುದರಿಂದ ಆಕೆಯ ಕೋಪಕ್ಕೆ ಕಾರಣರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂದು ಗಾಜಿನ ಪಾತ್ರೆಗಳಲ್ಲಿ ಅಡುಗೆಯನ್ನು ಇಡಬೇಕು, ಬೇಯಿಸಿದ ಆಹಾರ ಪದಾರ್ಥ ಆಗಿಂದಾಗಲೇ ಖಾಲಿ ಮಾಡಿ, ಉಳಿಸಬೇಡಿ. ಗರ್ಭಿಣಿಯರು ಇಂದು ಮನೆಯಿಂದ ಹೊರಬಾರದೇ ಇರುವುದು ಉತ್ತಮ, ಜೊತೆಗೆ ಚೂಪಾದ ವಸ್ತುಗಳನ್ನು ಬಳಸಬಾರದು ಎನ್ನಲಾಗಿದೆ. ಈ ಬಗ್ಗೆ ಹೆಚ್ಚು, ಸೂಕ್ತ ಮಾಹಿತಿ ತಿಳಿಯ ಬಯಸುವವರು ಹಿರಿಯರು ಅಥವಾ ದೇಗುಲಗಳಲ್ಲಿ ಪೂಜಾರರ ಬಳಿ ತೆರಳಿ ಮಾಹಿತಿ ಪಡೆಯಬಹುದು.