RECIPE| ರುಚಿ ಜೊತೆಗೆ ಡಯಟ್‌ ತಿಂಡಿ ಓಟ್ಸ್ ಬಿಸಿಬೇಳೆಬಾತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಕಾಗುವ ಸಾಮಗ್ರಿಗಳು :

ಓಟ್ಸ್
ತೊಗರಿಬೇಳೆ
ಕ್ಯಾರೆಟ್
ಆಲೂಗಡ್ಡೆ
ಹುರುಳಿಕಾಯಿ
ಕಡಲೆ ಬೀಜ
ಟೊಮೊಟೊ
ಈರುಳ್ಳಿ
ಅರಿಶಿಣ
ಬೆಲ್ಲ
ಹುಣಸೆಹಣ್ಣು
ಎಣ್ಣೆ
ಉಪ್ಪು
ಸಾಸಿವೆ
ಕರಿಬೇವು
ಬಿಸಿಬೇಳೆಬಾತ್ ಪುಡಿ

ಮಾಡುವ ವಿಧಾನ:

* ಮೊದಲು ಹತ್ತು ನಿಮಿಷ ಕುಕ್ಕರ್ ನಲ್ಲಿ ತರಕಾರಿಗಳನ್ನು ಬೇಯಿಸಿಕೊಳ್ಳಿ.
* ನಂತರ ಬೇಳೆಯನ್ನು ಬೇಯಿಸಿ.
* ಈಗ ಒಂದು ಪಾತ್ರೆಯಲ್ಲಿ ಓಟ್ಸ್ ಅನ್ನು 2-3 ನಿಮಿಷ ಸಣ್ಣಗಿನ ಉರಿಯಲ್ಲಿ ಹುರಿದುಕೊಳ್ಳಿ.
* ಹುರಿದ ಓಟ್ಸ್ ತಣ್ಣಗಾದ ನಂತರ ಅದಕ್ಕೆ ಮಸಾಲೆ ಬೆರೆಸಿ.
* ನಂತರ ಒಂದು ದೊಡ್ಡ ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ. ಒಗ್ಗರಣೆ ಮಾಡಿ. * ಅದಕ್ಕೆ ಕರಿಬೇವು ಎಲೆ, ಈರುಳ್ಳಿ ಸೇರಿಸಿ ಬಾಡಿಸಿಕೊಳ್ಳಿ.
* ಈಗ ಅರಿಶಿಣ, ಟೊಮೊಟೊ ಮತ್ತು ಇತರ ತರಕಾರಿಗಳನ್ನು ಸೇರಿಸಿ.
* ಈಗ ಎಷ್ಟು ಬೇಕೋ ಅಷ್ಟು ನೀರನ್ನು ಸೇರಿಸಿ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಕುದಿಸಿ.
* ಇದಕ್ಕೆ ಬೆಲ್ಲ ಸೇರಿಸಿ ಮತ್ತೆ 2 ನಿಮಿಷ ಚೆನ್ನಾಗಿ ಕುದಿಸಿ.
* ಈ ಮಿಶ್ರಣ ಸ್ವಲ್ಪ ಬೆಂದ ನಂತರ ಬೇಳೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ.
* ಇದಕ್ಕೆ ಹುಣಸೇ ಹುಳಿ, ಬಿಸಿಬೇಳೆ ಬಾತ್ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿ ನಂತರ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!