ಇಂದು ಸಾವಿರಾರು ನೌಕರರನ್ನು ಕಂಪನಿಯಿಂದ ವಜಾಗೊಳಿಸಲಿದೆ ಮೈಕ್ರೋಸಾಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಕ್ರೋಸಾಫ್ಟ್ ಕಂಪನಿ ಇಂದು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲಿದೆ. ಜಾಗತಿಕ ಆರ್ಥಿಕತೆಯ ಕುಸಿತದಿಂದ ಕಂಪನಿ ಈ ನಿರ್ಧಾರಕ್ಕೆ ಬಂದಿದ್ದು, ಶೇ.5ರಷ್ಟು ಅಂದರೆ ಸುಮಾರು 11 ಸಾವಿರ ಮಂದಿ ಉದ್ಯೋಗಿಗಳನ್ನು ಕಂಪನಿ ವಜಾಗೊಳಿಸಲಿದೆ.

ಮಾನವ ಸಂಪನ್ಮೂಲ ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಸಾಕಷ್ಟು ದೈತ್ಯ ಕಂಪನಿಗಳು ಇತ್ತೀಚೆಗೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ.

ಅಮೆಜಾನ್, ಮೆಟಾ ಪ್ಲಾಟ್‌ಫಾರ್ಮ್ ಇಂಕ್ ಕಂಪನಿಗಳು ಸಹ ಜಾಗತಿಕ ಮಟ್ಟದಲ್ಲಿ ಆರ್ಥಿಕ ನಿಧಾನಗತಿ ಹಾಗೂ ಬೇಡಿಕೆ ಕಡಿಮೆಯಾಗಿದ್ದು, ಸಾವಿರಾರು ಉದ್ಯೋಗಿಗಳನ್ನು ಏಕಾಏಕಿ ಕಂಪನಿಯಿಂದ ವಜಾಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!