3 ಶೇಕಡಾಗೆ ಕುಸಿದ ಚೀನಾ ಜಿಡಿಪಿ: 50 ವರ್ಷಗಳಲ್ಲಿ ಇದು ಎರಡನೇ ಬಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ತಾಂಡವದಿಂದಾಗಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾ ತತ್ತರಿಸಿದ್ದು ಜಿಡಿಪಿ 3 ಶೇಕಡಾಗೆ ಕುಸಿದಿದೆ. ಕಟ್ಟುನಿಟ್ಟಿನ ಶೂನ್ಯ ಕೋವಿಡ್‌ ನೀತಿ ಹಾಗು ರಿಯಲ್‌ ಎಸ್ಟೇಟ್‌ ಉದ್ಯಮ ನೆಲ ಕಚ್ಚಿರುವುದರಿಂದ ಚೀನಾದ ಆರ್ಥಿಕತೆ ಗಣನೀಯ ಕುಸಿತ ಕಂಡಿದೆ. 50 ವರ್ಷಗಳಲ್ಲಿ ಎರಡನೇ ಅತಿ ಕಡಿಮೆ ಬೆಳವಣಿಗೆಯ ದರವನ್ನು ದಾಖಲಿಸಿದೆ ಎಂದು ಅಂಕಿ ಅಂಶಗಳು ಬಹಿರಂಗ ಪಡಿಸಿವೆ. . ಚೀನಾದ ವಾರ್ಷಿಕ GDP 2022 ರಲ್ಲಿ 21.02 ಟ್ರಿಲಿಯನ್ ಯುವಾನ್ (17.94 ಟ್ರಿಲಿಯನ್ ಡಾಲರ್) ಆಗಿತ್ತು, ಇದು 5.5 ಶೇಕಡಾ ಅಧಿಕೃತ ಗುರಿಗಿಂತ ಕಡಿಮೆಯಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ (NBS) ಹೇಳಿದೆ.‌

ಕಟ್ಟುನಿಟ್ಟಾಗಿ ಜಾರಿಗೊಳಿಸಲಾದ ಶೂನ್ಯ-ಕೋವಿಡ್ ನೀತಿ, ಮರುಕಳಿಸಿದ ಲಾಕ್‌ ಡೌನ್‌ ಗಳಿಂದ ಕೈಗಾರಿಕೆಗಳು ದೊಡ್ಡ ನಷ್ಟ ಅನುಭವಿಸುವಂತಾಯಿತು. ಅಲ್ಲದೇ ರಿಯಲ್‌ ಎಸ್ಟೇಟ್‌ ಉದ್ಯಮವು ಕೂಡ ನೆಲಕಚ್ಚಿದ್ದು ಚೀನಾ ಆರ್ಥಿಕತೆ ಕುಸಿಯಲು ಪ್ರಮುಖ ಕಾರಣ ಎನ್ನಲಾಗಿದೆ. 1974ರಲ್ಲಿ ಜಿಡಿಪಿಯಲ್ಲಿ ಶೇ.2.3ರಷ್ಟು ದಾಖಲಾದ ನಂತರ ಇದು ಚೀನಾದ ಆರ್ಥಿಕತೆಯ ಎರಡನೇ ನಿಧಾನಗತಿಯ ಬೆಳವಣಿಗೆ ಎನ್ನಲಾಗಿದೆ.

ಶಾಂಘೈನಂತಹ ಉನ್ನತ ಕೈಗಾರಿಕಾ ಮತ್ತು ವ್ಯಾಪಾರ ಕೇಂದ್ರಗಳು ಸೇರಿದಂತೆ ವಿವಿಧ ನಗರ ಕೇಂದ್ರಗಳ ಪುನರಾವರ್ತಿತ ಕೋವಿಡ್ ಲಾಕ್‌ಡೌನ್‌ಗಳಿಂದ ಮೂರನೇ ತ್ರೈಮಾಸಿಕದಲ್ಲಿ 3.9 ಶೇಕಡಾದಷ್ಟಿದ್ದ ಜಿಡಿಪಿ ಬೆಳವಣಿಗೆ ನಾಲ್ಕನೇ ತ್ರೈಮಾಸಿಕದಲ್ಲಿ 2.9 ಶೇಕಡಾಗೆ ಕುಸಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!