ದಿನಭವಿಷ್ಯ
ಮೇಷ
ಇತರರ ಖಾಸಗಿ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡದಿರಿ. ಅದು ನಿಮಗೇ ತಿರುಗು ಬಾಣವಾದೀತು. ಆಪ್ತರ ಜತೆ ಹೆಚ್ಚು ಕಾಲ ಕಳೆಯುವಿರಿ.
ವೃಷಭ
ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಉಂಟಾದೀತು. ಕಡೆಗಣನೆ ಬೇಡ. ಉದ್ಯೋಗದಲ್ಲಿ ಒತ್ತಡದ ಪರಿಸ್ಥಿತಿ ಎದುರಿಸುವಿರಿ. ಮಾಡಬೇಕಾದ ಕಾರ್ಯ ಪೂರೈಸದು.
ಮಿಥುನ
ಆರ್ಥಿಕ ಪರಿಸ್ಥಿತಿ ತುಸು ಚಿಂತೆಗೆ ಕಾರಣವಾಗುತ್ತದೆ. ನಿರೀಕ್ಷಿಸಿದ ಲಾಭ ಉಂಟಾಗದು. ಅನಿರೀಕ್ಷಿತ ಖರ್ಚು ಒದಗಿಬರುವುದು.
ಕಟಕ
ಹೊಸತಾಗಿ ಹಣದ ಹೂಡಿಕೆ ಮಾಡದಿರಿ. ಕಾಲ ಪಕ್ವವಾಗಿಲ್ಲ. ಅಜೀರ್ಣದಂತಹ ಸಮಎಏಡಿಡಿ ಕಾಡಬಹುದು. ಆಹಾರ ಸೇವನೆಯಲ್ಲಿ ಎಚ್ಚರವಿರಲಿ.
ಸಿಂಹ
ಲಾಭನಷ್ಟವಿಲ್ಲದ ಪರಿಸ್ಥಿತಿ ಇಂದು. ಎಲ್ಲವೂ ಸಹಜವಾಗಿ ಸಾಗುವವು. ದೊಡ್ಡ ಕಾರ್ಯ ಎಸಗಲು ಹೋಗದಿರಿ. ಸಫಲತೆಯ ಸಾಧ್ಯತೆ ಕಡಿಮೆಯಿದೆ.
ಕನ್ಯಾ
ನಕಾರಾತ್ಮಕ ಚಿಂತನೆ ಮನದಲ್ಲಿ ತುಂಬಲು ಅವಕಾಶ ಕೊಡಬೇಡಿ. ಕೆಲವು ಹಿನ್ನಡೆಗಳನ್ನು ಸೂರ್ತಿಯಿಂದ ಸ್ವೀಕರಿಸಿ. ತಪ್ಪುಗಳನ್ನು ತಿದ್ದಿಕೊಳ್ಳಿ.
ತುಲಾ
ಆರ್ಥಿಕ ದೃಢತೆ ಕಾಣುವಿರಿ. ಖರ್ಚು ಸರಿದೂಗಿಸಲು ಸಮರ್ಥರಾಗುವಿರಿ. ಕೌಟುಂಬಿಕ ಶಾಂತಿ ಮನಸ್ಸಿಗೆ ನಿರಾಳತೆ ತರುವುದು.
ವೃಶ್ಚಿಕ
ಕೆಲಸದ ಒತ್ತಡದಿಂದ ಸ್ವಲ್ಪವಾದರೂ ವಿರಾಮ ಪಡೆಯಲು ಯತ್ನಿಸಿ. ಇಲ್ಲವಾದರೆ ಅತೀವ ಒತ್ತಡದಿಂದ ನಲುಗುವಿರಿ. ಆರೋಗ್ಯಕ್ಕೂ ಪ್ರತಿಕೂಲ.
ಧನು
ಮನೆಯಲ್ಲಿ ನಿಮ್ಮ ಸಹನೆಯನ್ನು ಕಾಯ್ದುಕೊಳ್ಳಿ. ಕೌಟುಂಬಿಕ ಶಾಂತಿ ಕಾಯ್ದುಕೊಳ್ಳಲು ಇದು ಅವಶ್ಯ. ವಾಗ್ವಾದಕ್ಕೆ ಇಂಬು ಕೊಡಬೇಡಿ.
ಮಕರ
ಉದ್ಯಮದಲ್ಲಿ ಪ್ರಗತಿ. ಆರ್ಥಿಕವಾಗಿ ಸಕಾರಾತ್ಮಕ ಬೆಳವಣಿಗೆ. ಆರೋಗ್ಯದ ಕಡೆ ತುಸು ಗಮನ ಹರಿಸಿ. ಅನಾರೋಗ್ಯ ಕಾಡದಂತೆ ನೋಡಿಕೊಳ್ಳಿ.
ಕುಂಭ
ಆರ್ಥಿಕ ಹಿನ್ನಡೆ ಸಂಭವಿಸಬಹುದು. ಸಿಗಬೇಕಾದ ಹಣವು ಸಿಗುವುದಿಲ್ಲ. ಮನೆಯಲ್ಲಿ ಸಣ್ಣ ವಿಷಯಕ್ಕೆ ವಾಗ್ವಾದ ಉಂಟಾಗಬಹುದು.
ಮೀನ
ಮನೆಯಲ್ಲಿ ವಾಗ್ವಾದ ನಡೆದೀತು. ಆದರೆ ಅದರ ಮೇಲಿನ ಕೋಪವನ್ನು ದೀರ್ಘಕಾಲ ಇಟ್ಟುಕೊಳ್ಳದಿರಿ. ಸಮಾಧಾನ ಒಳಿತು.