ದಿನಭವಿಷ್ಯ| ಮುಖಭಾವದಿಂದಲೇ ಜನರನ್ನು ಅಳೆಯಬೇಡಿ, ಮನಸ್ಸು ಅರಿತು ವ್ಯವಹರಿಸಿರಿ..

ದಿನಭವಿಷ್ಯ

ಮೇಷ
ವೈಯಕ್ತಿಕ ಬದುಕಿನಲ್ಲಿ ಮುಖ್ಯ ನಿರ್ಧಾರ ತಾಳಬೇಕಾಗಿದೆ. ವೃತ್ತಿಯಲ್ಲಿ ಹೆಚ್ಚು ಚುರುಕಾಗಬೇಕು. ಸಮಸ್ಯೆ ಇದೆಯೆಂದು ಕೊರಗುವುದು ಬೇಡ.

ವೃಷಭ
ಅಗತ್ಯಕ್ಕೆ ತಕ್ಕ ಹಣಕಾಸು ನೆರವು ದೊರಕುವುದು. ನಿರಾಳ ಮನಸ್ಥಿತಿಯಿಂದ ಕೆಲಸ ಮಾಡಿ. ಆಪ್ತರ ಜತೆ ಯಾವುದೇ ಮುಚ್ಚುಮರೆ ಮಾಡಬೇಡಿ.

ಮಿಥುನ
ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಿ. ಇನ್ನಷ್ಟು ವಿಳಂಬ ಬೇಡ. ಕುಟುಂಬ ಸದಸ್ಯರ ಜತೆ ಹೆಚ್ಚಿನ ಕಾಲ ಕಳೆಯುವಿರಿ. ಶಾಪಿಂಗ್ ಅವಕಾಶವಿದೆ.

ಕಟಕ
ವೃತ್ತಿಗೆ ಸಂಬಂಧಿಸಿ ಕಠಿಣ ನಿರ್ಧಾರ ತಳೆಯಿರಿ. ಕೆಲವರಿಗೆ ಅಪ್ರಿಯವಾದೀತೆಂಬ ಮುಲಾಜು ಬೇಡ. ನಿಮ್ಮ ಸ್ಥಾನ ಭದ್ರಪಡಿಸಿಕೊಳ್ಳಿ.

ಸಿಂಹ
ವೃತ್ತಿ ಮತ್ತು ಮನೆ ಯಲ್ಲಿ ಎಲ್ಲರ ಗಮನ ನಿಮ್ಮ ಮೇಲಿರುವುದು. ಸರಿಯಾಗಿ ಕಾರ್ಯ ನಿರ್ವಹಿಸಿ.ಪ್ರೀತಿಪಾತ್ರರ ಜತೆಗಿನ ಭಿನ್ನಮತ ನಿವಾರಿಸಿಕೊಳ್ಳಿ.

ಕನ್ಯಾ
ಮನೆಯಲ್ಲಾಗಲಿ, ಕಚೇರಿಯಲ್ಲಾಗಲಿ ನಿಮಗಿಂದು ವಿಶೇಷಗಳಿಲ್ಲದ ದಿನ. ಹಾಗಾಗಿ ಬದುಕು ನೀರಸವೆನಿಸಬಹುದು. ಬದಲಾವಣೆಗೆ ತುಡಿತ.

ತುಲಾ
ನಿಮ್ಮ ಮನಸ್ಸಿಗೆ ತೃಪ್ತಿ ತರುವಂತಹ ಕಾರ್ಯವೆಸಗುವಿರಿ. ನಿಮ್ಮ ವ್ಯಕ್ತಿ ಗೌರವ ಹೆಚ್ಚಲಿದೆ. ವೃತ್ತಿಯಲ್ಲಿ ಹೊಣೆಗಾರಿಕೆ ಹೆಚ್ಚು, ಆದರವೂ ಹೆಚ್ಚು.

ವೃಶ್ಚಿಕ
ಖಾಸಗಿ ಬದುಕು ಮತ್ತು ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚುವುದು. ನಿಮಗೆ ನೀಡಲಾದ ಕಾರ್ಯವನ್ನು ಲೋಪವಿಲ್ಲದೆ ನೆರವೇರಿಸಿ.

ಧನು
ಅಭದ್ರತೆ ಭಾವನೆ ಕಾಡುತ್ತದೆ. ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಡಿ. ಎಲ್ಲದಕ್ಕೂ ಪರಿಹಾರ ಇದೆ ಎಂಬುದರಿಯಿರಿ.

ಮಕರ
ನಿಮ್ಮ ಮಹತ್ವಾಕಾಂಕ್ಷೆ ನೆರವೇರಿಸಲು ಆದ್ಯತೆ ಕೊಡಿ. ಅದಕ್ಕಾಗಿ ಕೆಲವು ತ್ಯಾಗ ಮಾಡಬೇಕಾಗ ಬಹುದು. ಸಮೀಪ ಬಂಧುಗಳ ಸಲಹೆ ಪಡೆಯಿರಿ.

ಕುಂಭ
ಮುಖಭಾವದಿಂದಲೆ ಜನರನ್ನು ಅಳೆಯ ಬೇಡಿ. ಅವರ ಮನಸ್ಸು ಅರಿತು ವ್ಯವಹರಿಸಿರಿ. ಇದು ಗ್ರಹಗಳು ಇಂದು ನಿಮಗೆ ನೀಡುತ್ತಿರುವ ಸಲಹೆ.

ಮೀನ
ಬದಲಾವಣೆಯ ದಿನ. ಖಾಸಗಿ ಬದುಕು ಮತ್ತು ವೃತ್ತಿಯಲ್ಲಿ ಏರಿಳಿತವನ್ನು ಅನುಭವಿಸುವಿರಿ. ಉದ್ವಿಗ್ನತೆ ಬಿಟ್ಟು ನಿರಾಳವಾಗಿ ಚಿಂತಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!