ಒಂಬತ್ತು ತಿಂಗಳ ಅವಧಿಯಲ್ಲಿ 35,000 ರೈಲುಗಳು ರದ್ದು: ಆರ್‌ಟಿಇ ಅರ್ಜಿಯಿಂದ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂಬತ್ತು ತಿಂಗಳ ಅವಧಿಯಲ್ಲಿ 35,000 ಕ್ಕೂ ಹೆಚ್ಚು ರೈಲುಗಳು ನಿರ್ವಹಣಾ ಕಾರ್ಯದ ಕಾರಣದಿಂದ ರದ್ದುಗೊಳಿಸಲಾಗಿದೆ.
ಹೌದು, 2021-22 ರ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ 35 ಸಾವಿರ ರೈಲುಗಳು ರದ್ದುಗೊಂಡಿರುವ ಬಗ್ಗೆ ಆರ್‌ಟಿಇ ಅರ್ಜಿಯಿಂದ ಮಾಹಿತಿ ದೊರಕಿದೆ.

ಆರ್‌ಟಿಇ ಅನ್ವಯ ಕೇಳಲಾದ ಪ್ರಶ್ನೆಗೆ ಭಾರತೀಯ ರೈಲ್ವೆ ಸಚಿವಾಲಯ ಉತ್ತರ ನೀಡಿದೆ. 2021-22ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಮೇಂಟೇನೆನ್ಸ್ ಕಾರಣದಿಂದ 20,941 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಎರಡನೇ ತ್ರೈಮಾಸಿಕದಲ್ಲಿ 7,117 ಮತ್ತು ಮೂರನೇ ತ್ರೈಮಾಸಿಕದಲ್ಲಿ 6,869 ರೈಲುಗಳು ರದ್ದುಗೊಂಡಿವೆ.
ಈ ಬಗ್ಗೆ ಮಧ್ಯಪ್ರದೇಶದ ಚಂದ್ರಶೇಖರ್ ಗೌರ್ ಎನ್ನುವವರು ಮಾಹಿತಿ ಕೇಳಿದ್ದರು. 2022ರ ಬಹುಪಾಲು ಅವಧಿ ಕೊರೋನಾ ಕಾರಣದಿಂದ ರೈಲ್ವೆ ತನ್ನ ಜನರಲ್ ಪ್ರಯಾಣದ ಸೇವೆಗಳನ್ನು ರದ್ದುಗೊಳಿಸಿತ್ತು. ಆ ಸಮಯದಲ್ಲಿ ವಿಶೇಷ ರೈಲುಗಳ ಓಡಾಟ ಮಾತ್ರ ನಡೆಯುತ್ತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!