ದಿನಭವಿಷ್ಯ: ಸಂಬಂಧ ಸುಧಾರಣೆಗೆ ಸಮಯ ನೀಡಿ, ಆಪ್ತರ ತಪ್ಪು ಮನ್ನಿಸುವ ಗುಣವಿರಲಿ!

ಗುರುವಾರ, 27 ಜನವರಿ 2022

ಮೇಷ
ಹಠಾತ್ತನೆ  ಉದ್ವೇಗಕ್ಕೆ ಒಳಗಾಗುವ ಪ್ರಸಂಗ ಉದ್ಭವಿಸ ಬಹುದು. ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿ. ಮುಜು ಗರಕ್ಕೆ ಈಡಾಗದಿರಿ.

ವೃಷಭ
ನಾಯಕತ್ವವು ನಿಮ್ಮ ಹುಟ್ಟುಗುಣ. ಇಂದು ಅದನ್ನು ಮತ್ತೊಮ್ಮೆ ಪ್ರದರ್ಶಿಸುವಿರಿ. ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಬಡ್ತಿ.

ಮಿಥುನ
ಕೌಟುಂಬಿಕ ವಿಷಯಗಳಿಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಕುಟುಂಬ ಸದಸ್ಯರ ಸಾಧನೆಯು ಸಂತೋಷ ತರುತ್ತದೆ.

ಕಟಕ
ವ್ಯಕ್ತಿಯೊಬ್ಬರು ನಿಮ್ಮಲ್ಲಿ ಹರ್ಷ ಉಕ್ಕಿಸುತ್ತಾರೆ. ಹೃದಯ ಮೀಟುತ್ತಾರೆ.  ಕೌಟುಂಬಿಕ ಸಂತೋಷ. ನಿಮ್ಮ ಕಾರ್ಯಕ್ಷೇತ್ರದ ಮೇಲೂ ಇದರಿಂದ ಗುಣಾತ್ಮಕ ಪರಿಣಾಮ.

ಸಿಂಹ
ವೃತ್ತಿಯೇತರ ವಿಷಯಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತೀರಿ. ಅದರಲ್ಲಿ ಪರಿಣತಿ ಸಾಸಲು ಯತ್ನ. ಕೌಟುಂಬಿಕ ಸನ್ನಿವೇಶ ಸೌಹಾರ್ದಕರ.

ಕನ್ಯಾ
ದೈನಂದಿನ ವ್ಯವಹಾರ ದಲ್ಲಿ ಸಣ್ಣಪುಟ್ಟ ಅಡ್ಡಿಗಳು. ದೊಡ್ಡ ಹಾನಿ ತರದಿದ್ದರೂ ಮನಸ್ಸಿಗೆ ಕಿರಿಕಿರಿ. ಕೌಟುಂಬಿಕ ಅಸಹಕಾರವು ಅಸಹನೆ ಸೃಷ್ಟಿಸುವುದು.

ತುಲಾ
ಇಂದು ಎದ್ದ ಘಳಿಗೆ ಸರಿಯಾಗಿಲ್ಲ ಎಂದು ಅನಿಸಬಹುದು. ಏಕೆಂದರೆ ದಿನವಿಡೀ ಕಿರಿಕಿರಿ. ಮಾನಸಿಕ ಶಾಂತಿ ದೂರ. ವೃತ್ತಿಯಲ್ಲಿ ಹಿನ್ನಡೆ.

ವೃಶ್ಚಿಕ
ಇತರರಿಂದ ಪಡೆದ ಹಳೆಯ ಉಪಕಾರಕ್ಕೆ ಪ್ರತ್ಯುಪಕಾರ ಮಾಡಲು ಸೂಕ್ತ ಸಮಯ. ನಿಮ್ಮ ಕುಟುಂಬದ ಹಿತಾಸಕ್ತಿಗೆ ಆದ್ಯತೆ ಕೊಡಿ. ಬೇಡಿಕೆ ಈಡೇರಿಸಿರಿ.

ಧನು
ಕುಟುಂಬದ ಸಂಗಡ ಹೆಚ್ಚು ಕಾಲ ಕಳೆಯುವ ಅವಕಾಶ. ವೃತ್ತಿಯಲ್ಲಿನ ಒತ್ತಡದಿಂದ ವಿರಾಮ ಪಡೆಯಲು ಬಯಸುವಿರಿ. ಧನ ಲಾಭ.

ಮಕರ
ನಿಮ್ಮದು ದೃಢ ಮನಸ್ಸು. ಆದರೆ ನಿಮ್ಮ ದೃಢತೆಯನ್ನು ಅಲುಗಾಡಿಸುವ ಬೆಳವಣಿಗೆ ಸಂಭವಿಸಬಹುದು. ಹತಾಶರಾಗದಿರಿ.

ಕುಂಭ
ಸಂಬಂಧ ಸುಧಾರಣೆಗೆ ಆದ್ಯತೆ ಕೊಡಿ. ಎಡವಟ್ಟು ಮಾಡದಿರಿ. ಆಪ್ತರ ತಪ್ಪುಗಳನ್ನು ಮನ್ನಿಸುವ ಉದಾರತೆ ಪ್ರದರ್ಶಿಸಿ. ಅದರಿಂದ ಶಾಂತಿ ನೆಲೆಸುವುದು.

ಮೀನ
ಸವಾಲಿನ ದಿನ. ಹೊಸ ಕ್ಷೇತ್ರದಲ್ಲಿ ಧುಮುಕಲು ಯತ್ನಿಸುವಿರಿ. ಕೆಲವರ ಅಸಹಕಾರ ಎದುರಿಸುವಿರಿ. ಕಠಿಣ ಪರಿಶ್ರಮ ದಿಂದ ಯಶಸ್ಸು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!