ದಿನಭವಿಷ್ಯ| ಈ ರಾಶಿಯವರಿಗಿಂದು ಆರೋಗ್ಯ ಸಮಸ್ಯೆ ಕಾಡಲಿದೆ….

ದಿನ ಭವಿಷ್ಯ

ಮೇಷ
ಕೌಟುಂಬಿಕ ಪರಿಸರದಲ್ಲಿ ನೆಮ್ಮದಿ ಕಂಡುಕೊಳ್ಳುವ ಯತ್ನ ನಿಮ್ಮದು. ಆದರೆ ಕೆಲವು ಸಾಮಾಜಿಕ ಜವಾಬ್ದಾರಿ ನಿಮ್ಮ ಒತ್ತಡ ಹೆಚ್ಚಿಸುತ್ತದೆ. ಆರೋಗ್ಯ ಸಮಸ್ಯೆ ಕಾಡೀತು.

ವೃಷಭ
ಹೊಸ ಉಡುಪು, ಹೊಸ ನೋಟ, ಹೊಸ ಹುರುಪು -ಇಂದು ನಿಮ್ಮ ದಿನದಲ್ಲಿ ಸೇರಿಕೊಳ್ಳಲಿದೆ. ಆಪ್ತರೊಂದಿಗೆ ಆತ್ಮೀಯ ಕಾಲಕ್ಷೇಪ.

ಮಿಥುನ
ಸುತ್ತಲಿನವರ ಮಾತುಗಳು ನಿಮ್ಮ ಮೇಲೆ ಪ್ರಭಾವ ಬೀರಬಹುದು. ಆದರೆ ನಿಮ್ಮ ಜೀವನ ಶೈಲಿ ಬದಲಿಸುವ ಚಿಂತನೆ ಮಾಡದಿರಿ.

ಕಟಕ
ಬಹಳಷ್ಟು ಒಳ್ಳೆಯ ಸಂಗತಿಗಳು ಇಂದು ನಿಮಗೆ ಸಂಭವಿಸಲಿವೆ. ಅವನ್ನು ಸ್ವೀಕರಿಸಲು ತಯಾರಾಗಿರಿ. ಕೌಟುಂಬಿಕ ಸಮಸ್ಯೆ ಪರಿಹಾರ.

ಸಿಂಹ
ಯೋಜಿಸಿ ಕೆಲಸ ಮಾಡಿದರೆ ಯಶಸ್ಸು ಖಂಡಿತ. ಬೇಕಾಬಿಟ್ಟಿ ಮಾಡಿದರೆ ಸೋಲು ಕಾಣುತ್ತೀರಿ. ಭಾವನಾತ್ಮಕ ಏರುಪೇರು ಸಂಭವ.

ಕನ್ಯಾ
ನಿಮ್ಮ ಹೃದಯಕ್ಕೆ ಆಪ್ತರಾಗಿರುವ ವ್ಯಕ್ತಿ ಬದಲಾಗುತ್ತಿದ್ದಾರೆ ಎಂಬ ಆತಂಕ ನಿಮ್ಮದು. ಮನಸ್ಸಿನಲ್ಲಿ ತಾಕಲಾಟ. ಇತರ ಕೆಲಸಗಳಲ್ಲಿ ನಿರುತ್ಸಾಹ.

ತುಲಾ
ನಿಮ್ಮ ಕಿವಿಗೆ ಬೀಳುವ ವಿಷಯಗಳನ್ನೆಲ್ಲ ನಂಬ ಬೇಡಿ. ನಿಮ್ಮ ದಾರಿ ತಪ್ಪಿಸಲು ಕೆಲವರು ಯತ್ನಿಸಬಹುದು. ಹಣಕಾಸಿನ ವಿಚಾರದಲ್ಲಿ ಶುಭದಿನ.

ವೃಶ್ಚಿಕ
ಆರ್ಥಿಕ ಪರಿಸ್ಥಿತಿಯ ಕುರಿತಂತೆ ನಿಮ್ಮ ಕುಟುಂಬ ಸದಸ್ಯರ ಜತೆ ಮಾತನಾಡಿ. ಅವರ ಸಲಹೆಗಳು ನಿಮಗೆ ಉಪಯುಕ್ತ ಆಗಲಿವೆ. ಆರೋಗ್ಯ ಸ್ಥಿರ.

ಧನು
ಎಂದಿಗಿಂತ ತುಸು ಭಿನ್ನವಾದ ದಿನ. ಏನೋ ಬದಲಾವಣೆ ತರಬೇಕೆಂದು ಬಯಸುತ್ತೀರಿ. ಆದರೆ ಅದನ್ನು ಸಾಸಲು ವಿಫಲರಾಗುತ್ತೀರಿ.

ಮಕರ
ನಿಮ್ಮ ಕೆಲಸವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುತ್ತೀರಿ. ಸಕಾಲದಲ್ಲಿ ಮುಗಿಸಲು ಪ್ರಯತ್ನ ಪಡುತ್ತೀರಿ. ಅದೃಷ್ಟವೂ ನಿಮ್ಮ ಜತೆಗಿದೆ.

ಕುಂಭ
ನಿಮ್ಮ ಖಾಸಗಿ ಬದುಕಿನಲ್ಲಿ ಅಥವಾ ವೃತ್ತಿಯಲ್ಲಿ ಎಸಗಿದ ತಪ್ಪುಗಳನ್ನು ಸರಿಪಡಿಸಲು ಸಕಾಲ. ಕ್ಷಮೆ ಯಾಚಿಸಲು ಹಿಂಜರಿಯಬೇಕಿಲ್ಲ.

ಮೀನ
ಕೌಟುಂಬಿಕ ಹೊಣೆಗಾರಿಕೆ ಹೆಚ್ಚಳ. ಆರ್ಥಿಕ ಸುಧಾರಣೆ. ವೃದ್ಧರು ತಮ್ಮ ಆರೋಗ್ಯದ ಕುರಿತಂತೆ ಹೆಚ್ಚು ಎಚ್ಚರ ವಹಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!