Wednesday, June 7, 2023

Latest Posts

ಮರೆಯಾಗಲಿವೆಯೇ ಶ್ರೀನಗರದ ಐಕಾನಿಕ್ ಬೋಟ್‌ಹೌಸ್‌ಗಳು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಶ್ಮೀರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಶ್ರೀನಗರದ ಬೋಟ್‌ಹೌಸ್‌ಗಳು ಮರೆಯಾಗುವ ಆತಂಕ ಎದುರಾಗಿದೆ.

Houseboats are floating houses that are anchored along the banks of the Dal and Nigeen lakes in Srinagar. Credit: iStock Photoಐಕಾನಿಕ್ ಬೋಟ್‌ಹೌಸ್‌ಗಳು ಇತಿಹಾಸದ ಪುಟಗಳನ್ನು ಸೇರುವ ಲಕ್ಷಣಗಳು ಕಾಣಿಸುತ್ತಿವೆ, ಬೋಟ್ ಹೌಸ್‌ಗಳ ನಿರ್ಮಾಣ ಹಾಗೂ ಹಳೆಯ ಬೋಟ್‌ಹೌಸ್‌ಗಳ ದುರಸ್ತಿಗೆ ನಿರ್ಬಂಧ ಇರುವ ಕಾರಣ ಈಗಿರುವ ಬೋಟ್‌ಗಳು ಮೂಲೆ ಸೇರುತ್ತಿವೆ. ಇದು ಹೀಗೆ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಬೋಟ್‌ಹೌಸ್‌ಗಳು ನೆನಪಾಗಿ ಮಾತ್ರ ಉಳಿಯುತ್ತವೆ.

SUKOON HOUSEBOAT (Srinagar, Kashmir) - B&B Reviews, Photos, Rate Comparison  - Tripadvisorಬೋಟ್‌ಹೌಸ್ ಹುಟ್ಟಿದ್ದು ಹೇಗೆ?
ಈ ಹಿಂದೆ ಬ್ರಿಟಿಷರ ಕಾಲದಲ್ಲಿ ಬ್ರಿಟಿಷರು ಬೇಸಿಗೆಯ ಧಗೆಯಿಂದ ತಪ್ಪಿಸಿಕೊಳ್ಳೋದಕ್ಕೆ ಕಾಶ್ಮೀರಕ್ಕೆ ಬರುತ್ತಿದ್ದರು. ಆದರೆ ಕಾಶ್ಮೀರದ ದೊರೆ ಮನೆಗಳ ನಿರ್ಮಾಣಕ್ಕೆ, ಜಮೀನು ಖರೀದಿಗೆ ಹೊರಗಿನವರಿಗೆ ಅವಕಾಶ ನೀಡುತ್ತಿರಲಿಲ್ಲ. ಹಾಗಾಗಿ ಬಣ್ಣ ಬಣ್ಣದ ಬೋಟ್‌ಹೌಸ್‌ಗಳನ್ನು ನಿರ್ಮಿಸಿ ಅಲ್ಲಿ ತಂಗಲಾಗುತ್ತಿತ್ತು.

CHICAGO GROUP OF HOUSEBOATS (Srinagar, Kashmir) - Ranch Reviews, Photos,  Rate Comparison - Tripadvisorಹೊಸ ಬೋಟ್‌ಹೌಸ್ ನಿರ್ಮಾಣಕ್ಕೆ ನಿಷೇಧ ಏಕೆ?
ಬೋಟ್‌ಹೌಸ್‌ಗಳು ಜನರ ಆಕರ್ಷಣೆಯಾಗುತ್ತಿದ್ದಂತೆಯೇ ಅವುಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿತ್ತು. ದಾಲ್ ಹಾಗೂ ನಿಗೀನ್ ಸರೋವರದಲ್ಲಿ ಒಟ್ಟಾರೆ 3,500 ಸಾವಿರ ಬೋಟ್‌ಗಳಿದ್ದವು. ಇದೀಗ ಈ ಸಂಖ್ಯೆ 900ಕ್ಕೆ ಬಂದು ಇಳಿದಿದೆ. ನಿರ್ವಹಣೆ ಹಾಗೂ ದುರಸ್ತಿ ಇಲ್ಲದೆ ಸಾಕಷ್ಟು ಬೋಟ್ ಕೆಲಸಕ್ಕೆ ಬಾರದೆ ನಿಂತಿದೆ. ಹೊಸ ಬೋಟ್‌ಹೌಸ್ ನಿರ್ಮಾಣಕ್ಕೆ ಜಮ್ಮು-ಕಾಶ್ಮೀರ ಹೈಕೋರ್ಟ್ ನಿಷೇಧ ಹೇರಿದೆ.

Triumph Houseboats | Srinagar Houseboat BOOK Now @ ₹0ಹಳೆಯ ಬೋಟ್ ದುರಸ್ತಿಗೇಕೆ ನಿರ್ಬಂಧ?
ಈ ಬೋಟ್‌ಗಳನ್ನು ನಿರ್ಮಾಣ ಮಾಡುವುದು ದೇವದಾರು ಮರಗಳಿಂದ. ಈ ಮರಗಳು ನೀರಿನಲ್ಲಿದ್ದರೂ ದೀರ್ಘಕಾಲದವರೆಗೆ ಹಾಳಾಗುವುದಿಲ್ಲ. ಹಾಗಾಗಿ ಬೋಟ್‌ಹೌಸ್‌ಗಾಗಿ ಇದೇ ಮರ ಬೇಕಿದೆ. ಆದರೆ ಇದೀಗ ಈ ಮರಗಳು ಲಭ್ಯವಿಲ್ಲ. ಲಭ್ಯವಿದ್ದರೂ ಅದರ ಬೆಲೆ ಗಗನಕ್ಕೇರಿದ್ದು, ಖರೀದಿ ಅಸಾಧ್ಯ. ಹೀಗಾಗಿ ಹಳೆಯ ಬೋಟ್ ರಿಪೇರಿ ಕಷ್ಟವಾಗಿದ್ದು, ಹಾಳಾದ ಬೋಟ್‌ಗಳು ದಡದಲ್ಲೇ ಇವೆ.

Kashmir's Dal Lake choking with 'huge amount of sewage' and weeds |  Environment News | Al Jazeeraಇನ್ನೇನು ಸಮಸ್ಯೆ?
ಹೊಸ ಬೋಟ್ ನಿರ್ಮಾಣಕ್ಕೆ ನಿಷೇಧ, ಹಳೆ ಬೋಟ್ ದುರಸ್ತಿಗೆ ನಿರ್ಬಂಧ ಇರುವ ಕಾರಣ ಬೋಟ್‌ಹೌಸ್ ನಿರ್ಮಾಣ ಕುಶಲಕರ್ಮಿಗಳಿಗೆ ಕೆಲಸ ಇಲ್ಲದಂತಾಗಿದೆ. ಈ ಸಮಸ್ಯೆಗಳು ತಪ್ಪಿದರೆ ಬೋಟ್‌ಹೌಸ್‌ಗಳು ಉಳಿಯಬಹುದಾಗಿದೆ.

The houseboats of Srinagar, a sinking piece of Indian heritage | CNN

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!