ದಿನಭವಿಷ್ಯ: ನಿಮ್ಮವರಿಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತೀರಿ, ಆದರೂ ತೃಪ್ತಿ ಸಿಗಲಿದೆ!

ಬುಧವಾರ, 9 ಮಾರ್ಚ್ 2022

ಮೇಷ
ನಿಮ್ಮ, ನಿಮ್ಮವರ ಕೋರಿಕೆ ಈಡೇರಿಸಿಕೊಳ್ಳಲು ಇಂದು ಹಣವನ್ನು ಸಾಕಷ್ಟು ವ್ಯಯಿಸ ಬೇಕಾಗುತ್ತದೆ. ಆದರೂ ಇದರಿಂದ ನಿಮಗೆ ಆತ್ಮತೃಪ್ತಿಯಿದೆ.

ವೃಷಭ
ಸಾಮಾಜಿಕ ಕಾರ್ಯ ಗಳು ಹೆಚ್ಚು. ಕೆಲವು ಅಡ್ಡಿಗಳು ಒದಗಿದರೂ ಅದರಿಂದ ನಿಮ್ಮ ಕಾರ್ಯಕ್ಕೆ ಬಾಧೆಯಾಗದು. ಕೌಟುಂಬಿಕ ಸಹಕಾರ.

ಮಿಥುನ
ಕೆಲವೊಮ್ಮೆ ಒತ್ತಡಗಳೂ ಒಳ್ಳೆಯದೆ. ಅದರಿಂದಾಗಿ ಉತ್ತಮ ಕೆಲಸಗಳು ಹೊರಹೊಮ್ಮುತ್ತವೆ. ಇದು ಇಂದು ನಿಮ್ಮ ಪಾಲಿಗೆ ಅನ್ವಯ.

ಕಟಕ
ನಿಮ್ಮ ಮನೋಸ್ಥಿತಿ ಇಂದು ಪದೇಪದೇ ಬದಲಾಗಬಹುದು. ಸಣ್ಣ ವಿಷಯಗಳೂ ಭಾವೋದ್ವಿಗ್ನತೆ ಸೃಷ್ಟಿಸಬಹುದು. ಸಂಯಮ ಕಾದುಕೊಳ್ಳಿ.

ಸಿಂಹ
ಭಾವುಕರಾಗಿ ಇಂದು ವರ್ತಿಸುವಿರಿ. ಇದರಿಂದ ವಿವೇಕ ನಶಿಸಬಹುದು. ಪ್ರಮುಖ ವಿಷಯದಲ್ಲಿ ತೆಗೆದುಕೊಳ್ಳುವ ಭಾವನಾತ್ಮಕ ನಿರ್ಧಾರ ಒಳಿತು ತರಲಾರದು.

ಕನ್ಯಾ
ನಿಮ್ಮ ಕೆಲಸದ ಕುರಿತಂತೆ ಇತರರು ಟೀಕೆ ಮಾಡಬಹುದು. ಅದರಿಂದ ಖಿನ್ನ ರಾಗದಿರಿ.  ಎಲ್ಲರನ್ನು ಮೆಚ್ಚಿಸುವುದು ಸಾಧ್ಯವಿಲ್ಲ, ಅರಿಯಿರಿ.

ತುಲಾ
ದಿನವಿಡೀ ಕಳೆಗುಂದಿದ ಮನಸ್ಥಿತಿ. ಉಲ್ಲಾಸ ಪಡುವ ವಿಷಯಗಳಿದ್ದರೂ ಮನಸ್ಸೇಕೋ ಅದಕ್ಕೆ ಸರಿಹೊಂದದು. ಆರ್ಥಿಕ ಒತ್ತಡ.

ವೃಶ್ಚಿಕ
ಇತರರ ಮನಸ್ಸನ್ನು ಅರಿತು ವ್ಯವಹರಿಸುವಲ್ಲಿ ನೀವು ನಿಷ್ಣಾತರು. ಹಾಗಾಗಿ ಎಲ್ಲರೂ ನಿಮ್ಮಲ್ಲಿ ವಿಶ್ವಾಸ ತೋರುತ್ತಾರೆ. ಇತರರ ಸಮಸ್ಯೆ ಪರಿಹರಿಸುವಿರಿ

ಧನು
ಕಣ್ಣು ಕಿವಿ ತೆರೆದಿಡಿ. ಸುತ್ತಲಿನ ಬೆಳವಣಿಗೆಯನ್ನು ಸರಿಯಾಗಿ ಗಮನಿಸಿ. ಅವು ನಿಮ್ಮ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಮಕರ
ಮುಂಜಾನೆಯ ಅವ ಸಮಸ್ಯೆಗಳ ಪರಿಹಾರದಲ್ಲೇ ತೊಡಗುವಿರಿ. ಅಪರಾಹ್ನ ಎಲ್ಲವೂ ನಿರಾಳವಾಗಿ ಸಮಾಧಾನ. ಕೌಟುಂಬಿಕ ಸಾಮರಸ್ಯ.

ಕುಂಭ
ಸಂಬಂಧಗಳ ಮೇಲೆ ಪರಿಣಾಮ ಬೀರಬಲ್ಲ ಬೆಳವಣಿಗೆ ಸಂಭವಿಸೀತು. ಹೊಸ ವಿಚಾರ ತಿಳಿದು ಬರ ಬಹುದು. ದುಡುಕಿನಿಂದ ವರ್ತಿಸದಿರಿ.

ಮೀನ
ಇಂದು ವಾದವಿವಾದ ಗಳಿಂದ ದೂರವಿರಿ. ಏಕೆಂದರೆ ಅದರಲ್ಲಿ ನೀವು ಗೆಲ್ಲಲಾರಿರಿ. ಸಂಘರ್ಷದಿಂದ ದೂರ ಇರುವುದರಲ್ಲೇ ನಿಮ್ಮ ಹಿತವಡಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!