ಪಂಚರಾಜ್ಯ ಚುನಾವಣಾ ಸಮೀಕ್ಷೆ: ಉತ್ತರ ಪ್ರದೇಶ, ಗೋವಾ ಮತ್ತೆ ಬಿಜೆಪಿ ತೆಕ್ಕೆಗೆ, ಪಂಜಾಬ್‌ ಎಎಪಿಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತೀವ್ರ ಕುತೂಹಲಕ್ಕೆ ಕಾರವಾಗಿರುವ ಈ ಬಾರಿಗೆ ಪಂಚರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಎಲ್ಲೆಡೆ ಚುನಾವಣಾ ಸಮೀಕ್ಷೆ ನಡೆಯುತ್ತಿದೆ.

ಉತ್ತರ ಪ್ರದೇಶ, ಪಂಜಾಬ್‌, ಗೋವಾ, ಉತ್ತರಾಖಂಡ್‌ ಹಾಗು ಮಣಿಪುರ ರಾಜ್ಯಗಳಲ್ಲಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ಎಲ್ಲಾ ರಾಜ್ಯಗಳ ಫಲಿತಾಂಶ ಪ್ರಾಮುಖ್ಯ ಪಡೆದುಕೊಂಡಿದೆ.

ಇನ್ನು ವಿವಿಧ ಸಮೀಕ್ಷೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಗದ್ದುಗೆ ಏರುವ ಸಾಧ್ಯತೆ ಇದೆ. ಯುಪಿನಲ್ಲಿ 262ರಿಂದ 277 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇದ್ದು, ಎಸ್‌ ಪಿ ಮೈತ್ರಿಕೂಟ 119-135 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ. ಇನ್ನು ಮೂರನೇ ಸ್ಥಾನದಲ್ಲಿ ಕಾಂಗ್ರೆಸ್‌ ಕೇವಲ 3-4 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.

ಹೇಗಿದೆ ವಿವಿಧ ಸಮೀಕ್ಷೆಗಳ ವರದಿ?

ಪಂಜಾಬ್‌:
ಇಟಿಜಿ ರಿಸರ್ಚ್‌ ಸಮೀಕ್ಷೆ: ಎಎಪಿ- 70-75, ಕಾಂಗ್ರೆಸ್‌ – 22-33, ಬಿಜೆಪಿ 3-7, ಅಖಾಲಿದಳ 7–13
ಇಂಡಿಯಾ ಟುಡೆ ಸಮೀಕ್ಷೆ:
ಎಎಪಿ 76–90, ಕಾಂಗ್ರೆಸ್‌ 19–31, ಬಿಜೆಪಿ 1–4, ಅಖಾಲಿದಳ 7–11
ನ್ಯೂಸ್‌ಎಕ್ಸ್‌ ಸಮೀಕ್ಷೆ: ಎಎಪಿ 56–61, ಕಾಂಗ್ರೆಸ್‌ 24–29, ಬಿಜೆಪಿ 1–6, ಅಖಾಲಿದಳ 22–26
ರಿಪಬ್ಲಿಕ್‌ ಟಿ.ವಿ ಸಮೀಕ್ಷೆ:  ಎಎಪಿ 62–70, ಕಾಂಗ್ರೆಸ್‌ 23–31, ಬಿಜೆಪಿ 1–3, ಅಖಾಲಿದಳ 16–24

ಉತ್ತರ ಪ್ರದೇಶ:
ರಿಪಬ್ಲಿಕ್‌ ಟಿ.ವಿ ಸಮೀಕ್ಷೆ: ಬಿಜೆಪಿ 240, ಕಾಂಗ್ರೆಸ್‌ 4, ಎಸ್‌ಪಿ+ 140, ಬಿಎಸ್‌ಪಿ 17
ಇಟಿಜಿ ರಿಸರ್ಚ್‌ ಸಮೀಕ್ಷೆ: ಬಿಜೆಪಿ 230–245, ಕಾಂಗ್ರೆಸ್‌ 2–6, ಎಸ್‌ಪಿ+ 150–165, ಬಿಎಸ್‌ಪಿ 5–10
ನ್ಯೂಸ್‌ ಎಕ್ಸ್‌ ಸಮೀಕ್ಷೆ: ಬಿಜೆಪಿ 211–245, ಕಾಂಗ್ರೆಸ್‌ 4–6, ಎಸ್‌ಪಿ+ 146–160, ಬಿಎಸ್‌ಪಿ 14–24

ಮಣಿಪುರ
ಇಂಡಿಯಾ ನ್ಯೂಸ್‌ ಸಮೀಕ್ಷೆ: ಬಿಜೆಪಿ 23–28, ಕಾಂಗ್ರೆಸ್‌+ 10–14
ಇಂಡಿಯಾ ಟಿವಿ ಸಮೀಕ್ಷೆ: ಬಿಜೆಪಿ 26–31, ಕಾಂಗ್ರೆಸ್‌ 12–17
ನ್ಯೂಸ್‌ 18 ಸಮೀಕ್ಷೆ: ಬಿಜೆಪಿ 27–31, ಕಾಂಗ್ರೆಸ್‌ 11–17

ಉತ್ತರಾಖಂಡ
ಇಟಿಜಿ ರಿಸರ್ಚ್‌ ಸಮೀಕ್ಷೆ : ಬಿಜೆಪಿ 37–40, ಕಾಂಗ್ರೆಸ್‌ 29–32, ಎಎಪಿ 0–1
ರಿಪಬ್ಲಿಕ್‌ ಟಿ.ವಿ ಸಮೀಕ್ಷೆ: ಬಿಜೆಪಿ 35–39, ಕಾಂಗ್ರೆಸ್‌ 28–34, ಎಎಪಿ 0–3
ಟೈಮ್ಸ್‌ ನವ್‌ ಸಮೀಕ್ಷೆ: ಬಿಜೆಪಿ 37, ಕಾಂಗ್ರೆಸ್‌ 31, ಎಎಪಿ 1

ಗೋವಾ:
ಇನ್ನು ಗೋವಾದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಎಲ್ಲಾ ಸಾಧ್ಯತೆಗಳು ಇದ್ದು, ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ನಿರೀಕ್ಷೆ ಇದೆ.

ಇಂಡಿಯಾ ಟಿವಿ ಸಮೀಕ್ಷೆ: ಬಿಜೆಪಿ 16–22, ಕಾಂಗ್ರೆಸ್‌ 11–17, ಟಿಎಂಸಿ 1–2
ಇಟಿಜಿ ರಿಸರ್ಚ್‌ ಸಮೀಕ್ಷೆ: ಬಿಜೆಪಿ 17–20, ಕಾಂಗ್ರೆಸ್‌ 15–17, ಟಿಎಂಸಿ 3–4

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!