ದಿನಭವಿಷ್ಯ: ಸಣ್ಣ ವಿಷಯವನ್ನು ಮನಸ್ಸಿಗೆ ತೆಗೆದುಕೊಂಡು ನೆಮ್ಮದಿ ಹಾಳು ಮಾಡ್ಕೊಳ್ತೀರಿ…

ಮೇಷ
ಆತ್ಮೀಯ ಸಂಬಂಧ ದಲ್ಲಿ ಕೆಲವರು ಹುಳಿ ಹಿಂಡುವ ಯತ್ನ ನಡೆಸುವರು. ಅದಕ್ಕೆ ಅವಕಾಶ ನೀಡದಿರಿ.   ಕೌಟುಂಬಿಕ ಹೊಂದಾಣಿಕೆ ಮುಖ್ಯ.

ವೃಷಭ
ಪ್ರಮುಖ ನಿರ್ಧಾರ ತಾಳುವಾಗ ಎಚ್ಚರ ವಹಿಸಿ. ಇತರರ ಪ್ರಭಾವಕ್ಕೆ ಒಳಗಾಗದಿರಿ. ಕುಟುಂಬಸ್ಥರ ವಿರೋಧ ಎದುರಾದೀತು. ಸಹನೆಯಿಂದ ವರ್ತಿಸಿ.

ಮಿಥುನ
ಅದೃಷ್ಟ ನಿಮ್ಮ ಕೈಕೊಡಬಹುದು.ಸ್ವಲ್ಪ ಮಟ್ಟಿನ ಹಿನ್ನಡೆ ಅನುಭವಿಸುವಿರಿ.ವಾದವಿವಾದದಲ್ಲಿ ಸಿಲುಕುವಿರಿ. ಸಂಯಮ ಇರಲಿ.

ಕಟಕ
ವೃತ್ತಿಯಲ್ಲಿ ಕೆಲವು ಸವಾಲು.  ಕೌಶಲ್ಯ ಉಪಯೋಗಿಸಿ ಕಾರ್ಯ ಎಸಗಿರಿ. ಪ್ರೀತಿಪಾತ್ರರ ಜತೆ ಆತ್ಮೀಯವಾಗಿ ವರ್ತಿಸಿರಿ. ಜಗಳಕ್ಕೆ ಇಳಿಯಬೇಡಿ.

ಸಿಂಹ
ಸಣ್ಣ ವಿಷಯವನ್ನೆಲ್ಲ ಗಂಭೀರವಾಗಿ ತೆಗೆದುಕೊಂಡು ಮನಸ್ಸು ಹಾಳು ಮಾಡುವಿರಿ. ಕೆಲವನ್ನು  ಲಘುವಾಗಿ ಪರಿಗಣಿಸಿದರಷ್ಟೇ ನಿಮ್ಮ ಉದ್ವಿಗ್ನತೆ ಕಡಿಮೆ.

ಕನ್ಯಾ
ಬದ್ಧತೆಯಿಲ್ಲದ ಸಂಬಂಧವನ್ನು ಬೆಳೆಸಬೇಡಿ. ಕಾಲಕ್ಷೇಪವಷ್ಟೇ ಮುಖ್ಯ ಆಗದಿರಲಿ. ಭಾವುಕ ಪ್ರಸಂಗಕ್ಕೆ ಸಾಕ್ಷಿಯಾಗುವಿರಿ.

ತುಲಾ
ನೀವು ಬಯಸಿದಂತೆ ಇಂದಿನ ದಿನ ಸಾಗಲಿದೆ. ಆಪ್ತರಿಂದ ಶುಭಸುದ್ದಿ ಕೇಳುವಿರಿ. ಕುಟುಂಬ ಸದಸ್ಯರ ಜತೆ ಅನವಶ್ಯ ವಾಗ್ವಾದಕ್ಕೆ ಇಳಿಯಬೇಡಿ.

ವೃಶ್ಚಿಕ
ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ. ಇದರಿಂದ ನಿಮ್ಮ ಜನಪ್ರಿಯತೆ ಹೆಚ್ಚುವುದು. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಶಾಂತಿ, ನೆಮ್ಮದಿ.

ಧನು
ಸರಿಯಾದ ಸಮಯ ದಲ್ಲಿ ನಿಮ್ಮ ಕಾರ್ಯ ಮುಗಿದು ಮನಸ್ಸಿಗೆ ನಿರಾಳತೆ.ಕೌಟುಂಬಿಕ ಸಮ್ಮಿಲನ. ಆರ್ಥಿಕ ಪರಿಸ್ಥಿತಿ ಸುಧಾರಣೆ, ಅನಿರೀಕ್ಷಿತ ಧನಲಾಭ.

ಮಕರ
ಸಕಾಲದಲ್ಲಿ ಕಾರ್ಯ ಸಿದ್ಧಿ.ವೃತ್ತಿಯಲ್ಲಿ ಉನ್ನತಿ.ಕೌಟುಂಬಿಕ ಸಂಬಂಧ ವೃದ್ಧಿ. ಬಂಧುಗಳ ಜತೆ ಭಿನ್ನಮತ ನುಸುಳದಂತೆ ನೋಡಿಕೊಳ್ಳಿರಿ. ಆರ್ಥಿಕ ಬಿಕ್ಕಟ್ಟು ನಿವಾರಣೆ.

ಕುಂಭ
ಉದ್ಯೋಗದಲ್ಲಿ ಪ್ರಗತಿ. ಉಪಯುಕ್ತ ಕಾರ್ಯ ಎಸಗಲು ಇಂದಿನ ದಿನ ಬಳಸಿಕೊಳ್ಳಿ. ದಿನ ವ್ಯರ್ಥ ಮಾಡಬೇಡಿ. ಆಪ್ತರ ಜತೆಗೆ ವಾದವಿವಾದ ನಡೆಯಬಹುದು.

ಮೀನ
ಫಲಪ್ರದ ದಿನ. ಹೊಸ ವ್ಯವಹಾರ ಆರಂಭಿಸಬಹುದು.ಕೌಟುಂಬಿಕ ಪರಿಸರ ಕೂಡ ಉಲ್ಲಾಸಕರ. ಶಾಪಿಂಗ್, ಸುತ್ತಾಟಕ್ಕೆ ಮನ ಮಾಡುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!