14 ವರ್ಷಗಳ ಬಳಿಕ ಆಸೀಸ್‌ಗೆ U19 ವಿಶ್ವಕಪ್‌ ಕಿರೀಟ: ಟೀಮ್ ಇಂಡಿಯಾಗೆ ಸೋಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಕ್ಕೆ ನಿರಾಸೆಯಾಗಿದೆ. 6ನೇ ಚಾಂಪಿಯನ್ ಕಿರೀಟದ ಮೇಲೆ ಕಣ್ಣಿಟ್ಟಿದ್ದ ಟೀಂ ಇಂಡಿಯಾಗೆ ಶಾಕ್ ಆಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋಲು ಕಂಡಿದೆ.

ಇದರಿಂದ ಆಸ್ಟ್ರೇಲಿಯಾ ಬರೋಬ್ಬರಿ 14 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಮುಡಿಗೇರಿಸಿದೆ. ಫೈನಲ್ ಪಂದ್ಯದಲ್ಲಿ ಭಾರತ 254 ರನ್ ಟಾರ್ಗೆಟ್ ಪಡೆದಿತ್ತು. ಆದರೆ ದಿಟ್ಟ ಬೌಲಿಂಗ್ ಪ್ರದರ್ಶನದ ಮುಂದೆ ಟೀಂ ಇಂಡಿಯಾ 174 ರನ್ ಸಿಡಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾ 79 ರನ್ ಗೆಲುವು ದಾಖಲಿಸಿತು.

ಭಾರತ ಪರ ಆದರ್ಶ್ ಸಿಂಗ್ ಹಾಗೂ ಮುರುಗನ್ ಅಭಿಷೇಕ್ ಹೊರತು ಪಡಿಸಿ ಇನ್ನುಳಿದವರಿಂದ ನಿರೀಕ್ಷಿತ ಹೋರಾಟ ಮೂಡಿಬರಲಿಲ್ಲ.ಅರ್ಶಿನ್ ಕುಲಕರ್ಣಿ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು. ಆದರ್ಶ್ ಸಿಂಗ್ ಹೋರಾಟ ಮುಂದವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಮುಶೀರ್ ಖಾನ್ 22 ರನ್ ಕಾಣಿಕೆ ನೀಡಿದರು. ನಾಯಕ ಉದಯ್ ಶರಣ್ ಕೇವಲ 2 ರನ್ ಸಿಡಿಸಿ ಔಟಾದರು.

ಸಚಿನ್ ದಾಸ್ 9, ಪ್ರಿಯಾಂಶ್ 9 ರನ್ ಸಿಡಿಸಿ ಔಟಾದರು ಅರವೇಲಿ ಅವಿನಾಶ್, ರಾಜ್ ಲಿಂಬಾನಿ ಬಹುಬೇಗನೆ ಔಟಾದರು. ಹೋರಾಟ ನೀಡಿದ ಆದರ್ಶನ್ ಸಿಂಗ್ 47 ರನ್ ಸಿಡಿಸಿ ಔಟಾದರು. ಇತ್ತ ಅಭಿಷೇಕ್ ಮುರುಗನ್ ಹೋರಾಟ ನೀಡಿದರೂ ಸಾಕಾಗಲಿಲ್ಲ. ಆಸ್ಟ್ರೇಲಿಯಾ ಮಿಂಚಿನ ದಾಳಿಗೆ ರನ್ ಬರಲಿಲ್ಲ, ವಿಕೆಟ್ ಉಳಿಯಲಿಲ್ಲ.

ಮರುಗೇಶ್ ಅಭಿಷೇಕನ್ 42 ರನ್ ಸಿಡಿಸಿ ಔಟಾದರು. ನಮನ್ ತಿವಾರಿ 14 ರನ್ ಸಿಡಿಸಿದರೆ, ಸೌಮೇ ಪಾಂಡೆ ಕೇವಲ 2 ರನ್ ಸಿಡಿಸಿದರು. 43.5 ಓವರ್‌ಗಳಲ್ಲಿ 174 ರನ್ ಸಿಡಿಸಿ ಆಲೌಟ್ ಆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!