ಮೇಷ
ಉತ್ಸಾಹದ ದಿನ. ಕೌಟುಂಬಿಕ ಸಮಾಗಮ. ಸಣ್ಣ ಸಮಸ್ಯೆ ತಲೆದೋರಿದರೂ ಅದನ್ನು ಸೌಹಾರ್ದದಿಂದ ಪರಿಹರಿಸಲು ಶಕ್ತರು.
ವೃಷಭ
ಕೌಟುಂಬಿಕ ಶಾಂತಿ, ಸಮಾಧಾನ. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ವೃತ್ತಿಯಲ್ಲಿ ಮಾತ್ರ ಏರುಪೇರು ಎದುರಿಸುವಿರಿ. ತಾಳ್ಮೆಯಿಂದ ವರ್ತಿಸಿ.
ಮಿಥುನ
ಕೆಲವರ ಅಸಹಕಾರ. ಸಕಾಲದಲ್ಲಿ ನಿಮ್ಮ ಕೆಲಸ ಪೂರೈಸಲಾಗದು. ಅನಪೇಕ್ಷಿತ ಖರ್ಚು. ಆದರೂ ಕುಟುಂಬದ ಸಂಗದಲ್ಲಿ ಸಂತೋಷ.
ಕಟಕ
ಕೆಲಸಕ್ಕೆ ಅಡ್ಡಿ. ಮಾಡಿದ ಕೆಲಸ ಸರಿಯಾಗಿ ಶುರುವಾಗದು. ಆದರೆ ದಿನದಂತ್ಯಕ್ಕೆ ಎಲ್ಲವೂ ಸುಗಮ. ಒತ್ತಡ ನಿವಾರಣೆ. ಮನಶ್ಯಾಂತಿ.
ಸಿಂಹ
ಬಾಕಿ ಉಳಿದ ಪ್ರಮುಖ ಕಾರ್ಯ ಪೂರೈಸಲು ಶಕ್ತರಾಗುವಿರಿ. ಕುಟುಂಬ ಸದಸ್ಯರ ಜತೆ ವಾಗ್ಯುದ್ಧ ನಡೆದೀತು. ಸಂಯಮ ಅವಶ್ಯ.
ಕನ್ಯಾ
ಕೆಲಸದ ಹೊರೆ ಅಧಿಕ. ಆದರೆ ಅದನ್ನು ಸಮಯ ಮಿತಿಯಲ್ಲಿ ಪೂರೈಸಲು ಸಫಲ. ಸಂಜೆ ವೇಳೆಗೆ ಎಲ್ಲ ಹೊಣೆಗಾರಿಕೆ ನಿರ್ವಹಿಸಿದ ತೃಪ್ತಿ.
ತುಲಾ
ಅನಿರೀಕ್ಷಿತ ಲಾಭದ ದಿನ. ನಿಮ್ಮ ಕಾರ್ಯಕ್ಕೆ ಉಂಟಾಗಿದ್ದ ವಿಘ್ನ ನಿವಾರಣೆ. ಬಂಧುಗಳ ಸಹಕಾರ. ಮನಸ್ತಾಪ ನಿವಾರಣೆ.
ವೃಶ್ಚಿಕ
ಮನೆಯ ಅಭಿವೃದ್ಧಿಯ ಕುರಿತು ಯೋಜನೆ ಹಾಕಲು ಸಕಾಲ. ಎಲ್ಲವೂ ನಿಮಗೆ ಪೂರಕವಾಗಿ ಪರಿಣಮಿಸಲಿದೆ.
ಧನು
ಎಲ್ಲ ವಿಷಯಗಳು ಇಂದು ನಿಮಗೆ ಪೂರಕವಾಗಿ ವರ್ತಿಸಲಿವೆ. ಹಾಗಾಗಿ ಪ್ರಮುಖ ಕಾರ್ಯ ಎಸಗಲು ಮುಂದೆ ಹೆಜ್ಜೆ ಇಡಿ.
ಮಕರ
ಅಧಿಕ ಕೆಲಸದ ಒತ್ತಡ. ದಿನವಿಡೀ ವಿರಾಮವಿಲ್ಲದೆ ದುಡಿಯುವಿರಿ. ಹತಾಶೆ ಕಾಡಬಹುದು. ಗುಣಾತ್ಮಕ ಚಿಂತನೆ ಬೆಳೆಸಿಕೊಳ್ಳಿ.
ಕುಂಭ
ಬಿಡುವಿಲ್ಲದ ಕಾರ್ಯ. ಹೊಣೆಗಾರಿಕೆ ಹೆಚ್ಚು. ಸಂಜೆ ವೇಳೆಗೆ ದೇಹಾಲಾಸ್ಯ ಕಾಡಬಹುದು. ಖರ್ಚು ಅಧಿಕದ ಚಿಂತೆ ಕಾಡಲಿದೆ.
ಮೀನ
ನಿಮ್ಮ ಕೆಲಸಕ್ಕೆ ಸಣ್ಣ ಅಡ್ಡಿ ಬಂದೀತು. ಕೆಲವರ ಅಸಹಕಾರ ನಿಮ್ಮ ಮನಸ್ಸು ಮುದುಡಿಸುವುದು. ಧೃತಿಗೆಡದಿರಿ. ನಿಮ್ಮ ಕಾರ್ಯ ಮುಂದುವರಿಸಿ.