ದಿನಭವಿಷ್ಯ: ಇಂದು ಕೆಲಸದ ಒತ್ತಡ ಕಡಿಮೆ, ಫ್ಯಾಮಿಲಿ ಜೊತೆ ಉತ್ತಮ ಸಮಯ ಕಳೆಯುವಿರಿ

ಮೇಷ
ಕರ್ತವ್ಯದಲ್ಲೇ ಸಂತೋಷ ಕಾಣುವವರು. ಹಾಗಾಗಿ ಹೆಚ್ಚಿನ ಕೆಲಸವಿದ್ದರೂ ಒತ್ತಡ ಬಾಽಸದು. ಆರೋಗ್ಯಕರ ಆಹಾರ ಸೇವಿಸಿರಿ.

ವೃಷಭ
ಕಠಿಣ ಕೆಲಸ ವೊಂದನ್ನು ಸಾಽಸುವ ಪ್ರಯತ್ನದಲ್ಲೇ ನಿಮ್ಮ ದಿನ ಕಳೆದು ಹೋಗುತ್ತದೆ. ಉಳಿದ ವಿಷಯಗಳು ಗೌಣವಾಗುತ್ತವೆ.

ಮಿಥುನ
ವೃತ್ತಿಯಲ್ಲೂ, ಮನೆಯಲ್ಲೂ ಹೆಚ್ಚಿನ ಹೊಣೆಗಾರಿಕೆ. ಅದನ್ನು ನಿಭಾಯಿಸಲು ಪ್ರಯತ್ನಿಸಿ. ಇದರ ಮಧ್ಯೆ ಆರೋಗ್ಯ ಕಡೆಗಣಿಸಬೇಡಿ.

ಕಟಕ
ಅನುಕೂಲಕರ ದಿನ. ನಿರ್ಧಾರಗಳು ಉತ್ತಮ ಫಲ ನೀಡುತ್ತವೆ. ದಾಂಪತ್ಯದಲ್ಲಿ  ಸಂತೋಷ.  ಸ್ವಂತ ವ್ಯವಹಾರದಲ್ಲಿ ಧನಲಾಭ.

ಸಿಂಹ
ಎಲ್ಲಾ ಕೆಲಸ ಬೇಗನೆ ಮುಗಿಸಿಕೊಳ್ಳಿ. ಬಳಿಕ ನಿಮಗೆ ವಿರಾಮ ಸಿಗಲಾರದು. ಏಕಾಗ್ರತೆ ಕೆಡಿಸುವಂತಹ ಸನ್ನಿವೇಶ ಎದುರಾದೀತು. ಸಹನೆಯಿಂದಿರಿ.

ಕನ್ಯಾ
ಸಹೋದ್ಯೋಗಿಗಳು  ನಿಮ್ಮ ವಿರುದ್ಧವಾಗುವರು. ತಕ್ಷಣಕ್ಕೆ ಪ್ರತಿಕ್ರಿಯಿಸದಿರಿ. ಆಲೋಚಿಸಿ ಕ್ರಮ ತೆಗೆದುಕೊಳ್ಳಿ. ಸಾಂಸಾರಿಕ ನೆಮ್ಮದಿ.

ತುಲಾ
ಸುಗಮ ಕಾರ್ಯ. ಇತರರ ನೆರವು. ಕುಟುಂಬ ಸದಸ್ಯರ ಜತೆ ಉತ್ತಮ ಬಾಂಧವ್ಯ. ಆರ್ಥಿಕವಾಗಿ ಸಮಾಧಾನಕರ. ಆರೋಗ್ಯ ಸುಸ್ಥಿರ.

ವೃಶ್ಚಿಕ
ಯಾವುದೇ ವಿಚಾರದಲ್ಲೂ ಇಂದು ತೃಪ್ತಿ ಉಂಟಾಗದು. ಸಣ್ಣ ಮಟ್ಟಿನ ಅತೃಪ್ತಿ ಉಳಿಯಲಿದೆ. ಅಧ್ಯಾತ್ಮದತ್ತ ಒಲವು.

ಧನು
ಇಂದು ವೃತ್ತಿಯ ಒತ್ತಡ ಕಡಿಮೆ. ಹಾಗಾಗಿ ಪ್ರೀತಿಪಾತ್ರರ ಜತೆ ನಿರಾಳ ಸಮಯ ಕಳೆಯಲು ಅವಕಾಶ. ಹಣದ ಚಿಂತೆ ನಿವಾರಣೆ. ಬಂಧು ನೆರವು.

ಮಕರ
ಬಾಕಿ ಉಳಿದಿರುವ ಹಳೆಯ ಕೆಲಸಗಳನ್ನು ಪೂರೈಸಲು ಇಂದು ಗಮನ ಕೊಡಿ. ಎಲ್ಲವೂ ನಿಮಗೆ ಅನುಕೂಲಕರವಾಗಿ ಸಾಗುವುದು.

ಕುಂಭ
ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ. ಕಳೆದು ಹೋದ  ವಿಷಯಗಳಿಗೆ ಚಿಂತಿಸದಿರಿ.  ನಿಮ್ಮ ಮನೋಭಾವ ಬದಲಿಸಿಕೊಳ್ಳಿ.

ಮೀನ
ವೃತ್ತಿಗೆ ಸಂಬಂಽಸಿ ತೃಪ್ತಿಕರ ಬೆಳವಣಿಗೆ. ಆರ್ಥಿಕವಾಗಿ ನೀವು ನೆರವು ನೀಡಿದವರಿಂದ ಪ್ರತಿಫಲ ಪಡೆಯುವಿರಿ. ಕೌಟುಂಬಿಕ ಕ್ಲೇಶ ನಿವಾರಣೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!