ದಿನಭವಿಷ್ಯ: ನೀವು ಬಯಸಿದ ವ್ಯಕ್ತಿ ನಿಮಗೆ ಹತ್ತಿರವಾಗುತ್ತಾರೆ,ಆತ್ಮೀಯ ಸಂಬಂಧ ಬೆಳೆಯಬಹುದು

ಮೇಷ
ನಿಮ್ಮಲ್ಲಿ ಇಂದು ಗುಣಾತ್ಮಕ ಬದಲಾವಣೆ ಆಗಲಿದೆ. ಅದರಿಂದ ನಿಮ್ಮ ಆಪ್ತರಿಗೆ ಸಂತೋಷ. ನಿಮ್ಮ ಇಷ್ಟದ ವ್ಯಕ್ತಿಯನ್ನು ಭೇಟಿ ಆಗುವ ಅವಕಾಶ.

ವೃಷಭ
ಹೆಚ್ಚಿನ ಚಟುವಟಿಕೆ ಇಲ್ಲದ ಉದಾಸ ದಿನ. ಕೆಲವು ವಿಷಯಗಳಲ್ಲಿ ಹೆಚ್ಚು ತಾಳ್ಮೆ ಪ್ರದರ್ಶಿಸಬೇಕು. ದೈಹಿಕ ಆಲಸ್ಯ,  ಮೈಕೈ ನೋವು ಉಂಟಾದೀತು.

ಮಿಥುನ
ನೀವು ಇತ್ತೀಚೆಗೆ ಕೈಗೊಂಡ  ಕಾರ್ಯದ ತಪ್ಪುಒಪ್ಪುಗಳ ಪರಾಮರ್ಶೆ ನಡೆಸಿ. ನಿಮ್ಮ ಬೇಗುದಿಗೆ ಕಾರಣ ತಿಳಿಯುವಿರಿ. ಬಳಿಕ ಸೂಕ್ತ ನಿರ್ಧಾರ ತಾಳಿರಿ.

ಕಟಕ
ಇತರರ ಜತೆ ಉತ್ತಮ ಸಂವಹನ ಸಾಧಿಸಲಾಗದೆ ಗೊಂದಲ. ಮನಸ್ಸಿನ ದ್ವಂದ್ವ ಕಳೆದುಕೊಳ್ಳಿ. ನಿಶ್ಚಿತ ನಿರ್ಧಾರ ತಾಳಿ. ಸಹಕಾರ ಪಡೆಯಿರಿ.

ಸಿಂಹ
ಯಶಸ್ವಿ ದಿನ. ದಿನದ ಆರಂಭದಲ್ಲಿ ಸಂಕಷ್ಟ ಎದುರಿಸಿದರೂ ಬಳಿಕ ಎಲ್ಲವೂ ಸರಿಯಾಗುವುದು. ನಿಮ್ಮ ಉದ್ದೇಶ ಈಡೇರುವುದು.

ಕನ್ಯಾ
ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಹಾಗಾಗಿ ಮನೆಯಲ್ಲಿ ಸೌಹಾರ್ದ ಪರಿಸ್ಥಿತಿ. ಆರ್ಥಿಕ ಪ್ರಗತಿ ತೃಪ್ತಿದಾಯಕ. ಧನಲಾಭ. ಸಾಂಸಾರಿಕ ಸಹಕಾರ.

ತುಲಾ
ಉದ್ಯೋಗದಲ್ಲಿ ಹೆಚ್ಚು ಹೊಣೆಗಾರಿಕೆ. ಹಣದ ನಿಭಾವಣೆಯಲ್ಲಿ ಹೆಚ್ಚು ಒತ್ತಡ ಅನುಭವಿಸುವಿರಿ. ಇತರರ ವದಂತಿಯ ಮಾತು ನಂಬಿ ಕೆಡದಿರಿ. ವಿವೇಚನೆಯಿರಲಿ.

ವೃಶ್ಚಿಕ
ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಗಮನ ಕೊಡಿ. ಖರ್ಚು ಕಡಿಮೆ ಮಾಡುವುದೂ ಅದರಲ್ಲಿ ಒಂದು ದಾರಿ. ಕೌಟುಂಬಿಕ ಬಿಕ್ಕಟ್ಟು ನಿವಾರಣೆ.

ಧನು
ವೃತ್ತಿ ಬದುಕಿನಲ್ಲಿ ಸಫಲತೆ. ನೀವು ಬಯಸಿದ ಉದ್ದೇಶ ಈಡೇರುವುದು. ನಿಮ್ಮ ಕುಟುಂಬಸ್ಥರ ಜತೆ ಹೆಚ್ಚು ಸಮಯ ಕಳೆಯಲು ಗಮನ ಕೊಡಿ.

ಮಕರ
ಆದಾಯ ಹೆಚ್ಚಿಸುವ ಪ್ರಯತ್ನ ನಡೆಸುವಿರಿ. ಆದರೆ ಯೋಜನೆ ಸರಿಯಾಗಿರಲಿ. ಇತರರ ಸಹಕಾರ ಸಿಗದಿದ್ದರೆ ವಿಫಲತೆ ಕಾಣುವಿರಿ. ಕೌಟುಂಬಿಕ ವಾಗ್ವಾದ.

ಕುಂಭ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ನಿಮ್ಮ ಅಭೀಷ್ಟ ಈಡೇರಿಕೆ. ಖಾಸಗಿ ಬದುಕಿನಲ್ಲೂ ನಿಮ್ಮ ಇಷ್ಟಾರ್ಥ ಪೂರೈಸುವುದು.

ಮೀನ
ಬಾಕಿ ಇರುವ ಕಾರ್ಯ ಪೂರೈಸಲು ಆದ್ಯತೆ ಕೊಡಿ. ನೀವು ಬಯಸಿದ ವ್ಯಕ್ತಿ ನಿಮಗೆ ಹತ್ತಿರವಾಗುತ್ತಾರೆ. ಆತ್ಮೀಯ ಸಂಬಂಧ ಬೆಳೆಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!