ದಿನಭವಿಷ್ಯ: ಹೇಗಿದೆ ಮೇ ತಿಂಗಳ ಮೊದಲ ದಿನದ ಭವಿಷ್ಯ?

ಮೇಷ
ಅನಿರೀಕ್ಷಿತ ಪ್ರಸಂಗ ಸಂಭವಿಸಬಹುದು. ಅದು ನಿಮಗೆ ಪ್ರತಿಕೂಲ ವಾಗಿದ್ದರೆ ಅದರಿಂದ ದೂರವಿರಿ. ವಿವಾದದಲ್ಲಿ ಸಿಲುಕಲು ಹೋಗದಿರಿ. ಕೌಟುಂಬಿಕ ನೆಮ್ಮದಿ.

ವೃಷಭ
ಒತ್ತಡ ಮತ್ತು ಉದ್ವಿಗ್ನತೆಯಲ್ಲಿ ದಿನ ಕಳೆಯುವಿರಿ. ಸಮಸ್ಯೆಯ ಆಳಕ್ಕಿಳಿದು ಪರಿಹಾರ ಕಂಡುಕೊಳ್ಳಿ. ಸಮಸ್ಯೆಯಿಂದ ಪಲಾಯನ ಮಾಡದಿರಿ.

ಮಿಥುನ
ಏಕತಾನತೆಯ ಬದುಕಿಂದ ರೋಸುವಿರಿ. ಹೊಸತನಕ್ಕೆ ತುಡಿಯುವಿರಿ. ಸಣ್ಣ ಪ್ರವಾಸ ಒಳ್ಳೆಯದು. ಆತ್ಮೀಯರ ಜತೆ ದಿನ ಕಳೆಯಿರಿ.

ಕಟಕ
ಮಾತಿನಿಂದಲೆ ಎಲ್ಲರನ್ನು ಗೆಲ್ಲುವಿರಿ. ನಿಮ್ಮ ಕೆಲಸದ ವೇಗವೂ ಹೆಚ್ಚುವುದು. ಅಪರಾಹ್ನದ ನಂತರ ಧನಲಾಭದ ಸುದ್ದಿ ಸಿಗಬಹುದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆ.

ಸಿಂಹ
ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ  ಪ್ರತಿಸ್ಪರ್ಧಿ ಗಳ ಕುರಿತು ಎಚ್ಚರದಿಂದಿರಬೇಕು. ಅವರಿಂದ ಪ್ರತಿಕೂಲ ಸನ್ನಿವೇಶ ಸೃಷ್ಟಿಯಾದೀತು.

ಕನ್ಯಾ
ಇತರರಿಂದ ಬರುವ ಸಲಹೆಗಳಿಗೆ ಕಿವಿಗೊಡಿರಿ. ಅದರಿಂದ ಕೆಲವೊಮ್ಮೆ ಒಳಿತಾಗಲಿದೆ. ಎಲ್ಲರನ್ನು ತಕ್ಷಣಕ್ಕೆ ತಿರಸ್ಕರಿಸಬೇಡಿ. ಕೌಟುಂಬಿಕ ಸಹಕಾರ ದೊರಕುವುದು.

ತುಲಾ
ಕಾರ್ಯದಲ್ಲಿ ಸಫಲತೆ ಸಿಗಬೇಕಾದರೆ ಆ ಕುರಿತಾದ ಜ್ಞಾನವನ್ನು ಮೊದಲು ಹೆಚ್ಚಿಸಿಕೊಳ್ಳಿ. ಏನೂ ಅರಿವಿಲ್ಲದೆ ಕೆಲಸಕ್ಕೆ ಧುಮುಕಬೇಡಿ. ಸಮಾಲೋಚನೆ ಒಳಿತು.

ವೃಶ್ಚಿಕ
ಉತ್ಸಾಹದ ದಿನ. ನಿಮ್ಮ ಸ್ಫೂರ್ತಿಯುತ ಕಾರ್ಯ ಯಶಸ್ಸು ತರುವುದು. ಮನೆಯಲ್ಲಿ ಭಿನ್ನಮತ ಉಂಟಾದರೂ ಬೇಗನೆ ಶಮನ. ಬಂಧುಗಳಿಂದ ಆದರ.

ಧನು
ವೃತ್ತಿಯಲ್ಲಿ ಅಸಹಾಯಕ ಪರಿಸ್ಥಿತಿ. ನೆರವು ಅಲಭ್ಯ. ಮನೆಯಲ್ಲಿ ಕುಟುಂಬಸ್ಥರ ಅಧಿಕಾರಯುತ ವರ್ತನೆಯಿಂದ ರೋಸುವಿರಿ.

ಮಕರ
ನೀವಿಂದು ಸಹನೆ ಕಳಕೊಳ್ಳುವ ಪ್ರಸಂಗ ಒದಗೀತು. ನಿಮಗೆ ಅಪ್ರಿಯವಾದ ಬೆಳವಣಿಗೆ ಸಂಭವ.  ಇತರರಿಗೆ ನಿಮ್ಮ ವರ್ತನೆ ಅಚ್ಚರಿ ತರಬಹುದು.

ಕುಂಭ
ಚಿಪ್ಪಿನಿಂದ ಹೊರಬಂದು ಎಲ್ಲರೊಂದಿಗೆ ಬೆರೆಯಿರಿ. ನಿಮ್ಮೊಳಗೇ ಕೊರಗುತ್ತಾ ಕೂರಬೇಡಿ. ಮನಸ್ಸಿನ ತಾಕಲಾಟಕ್ಕೆ ಇತರರಿಂದ ಪರಿಹಾರ ದೊರಕಬಹುದು.

ಮೀನ
ದೀರ್ಘಕಾಲೀನ ಹಣಕಾಸು ಬಿಕ್ಕಟ್ಟು ಇಂದು ಪರಿಹಾರ ಆಗುವ ಸಾಧ್ಯತೆಯಿದೆ. ಆರ್ಥಿಕ ಸಮಸ್ಯೆಗಳನ್ನು ತಕ್ಷಣವೆ ಪರಿಹರಿಸಿ. ಹಾಗೇ ಬಿಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!