ಸುನಿಲ್ ನರೈನ್ ಸ್ಪೋಟಕ ಬ್ಯಾಟಿಂಗ್‌: ಲಖನೌ ಗೆಲುವಿಗೆ ಬೃಹತ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸುನಿಲ್ ನರೈನ್ ಸ್ಪೋಟಕ ಬ್ಯಾಟಿಂಗ್‌ನಿಂದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಕೆಕೆಆರ್ ಬೃಹತ್ ಮೊತ್ತ ದಾಖಲಿಸಿದೆ. ಸುನಿಲ್ ನರೈನ್ 81 ರನ್ , ರಘುವಂಶಿ ಹಾಗೂ ಪಿಲಿಪ್ ಸಾಲ್ಟ್ ಸಿಡಿಸಿದ 32 ರನ್ ನೆರವಿನಿಂದ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿದೆ.

ಮೊದಲು ಬ್ಯಾಟಿಂಗ್ ಇಳಿದ ಕೆಕೆಆರ್ ತಂಡಕ್ಕೆ ಸುನಿಲ್ ನರೈನ್ ಬ್ಯಾಟಿಂಗ್ ಅಬ್ಬರ ನೆರವಾಯಿತು. ಪಿಲಿಪ್ ಸಾಲ್ಟ್ ಹಾಗೂ ಸನಿಲ್ ನರೈನ್ ಸ್ಫೋಟಕ ಬ್ಯಾಟಿಂಗ್‌ನಿಂದ ಮೊದಲ ವಿಕೆಟ್‌ಗೆ ಈ ಜೋಡಿ 61 ರನ್ ಜೊತೆಯಾಟ ನೀಡಿತು. ಸಾಲ್ಟ್ 32 ರನ್ ಸಿಡಿಸಿ ಔಟಾದರು. ನರೈನ್ ಹಾಗೂ ಅಂಗ್ಕ್ರಿಶ್ ರಘುವಂಶಿ ಸ್ಫೋಟಕ ಬ್ಯಾಟಿಂಗ್‌ನಿಂದ ಕೆಕೆಆರ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು.

ಅಬ್ಬರಿಸಿದ ನರೈನ್ 39 ಎಸೆತದಲ್ಲಿ 81 ರನ್ ಸಿಡಿಸಿದರು. 6 ಬೌಂಡರಿ, 7 ಸಿಕ್ಸರ್ ಮೂಲಕ ಅಬ್ಬರಿಸಿದರು. ಇತ್ತ ರಘುವಂಶಿ 32 ರನ್ ಕಾಣಿಕೆ ನೀಡಿದರು. ಆ್ಯಂಡ್ರೆ ರಸೆಲ್ 12 ರನ್ ಸಿಡಿಸಿ ಔಟಾದರು. ರಿಂಕು ಸಿಂಗ್ 16 ರನ್ ಸಿಡಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 23 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ರಮನದೀಪ್ ಕೇವಲ 6 ಎಸೆತದಲ್ಲಿ 25 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!