ನಾಳೆ ರಂಜಾನ್ ಉಪವಾಸ ಅಂತ್ಯ, ಶನಿವಾರ ಆಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್ ಮಾಸದ ಉಪವಾಸ ಇಂದು ಚಂದ್ರದರ್ಶನ ಹಿನ್ನೆಲೆ ನಾಳೆ ಮುಕ್ತಾಯವಾಗಲಿದ್ದು, ಶನಿವಾರ ರಂಜಾನ್ ಆಚರಿಸಲಾಗುವುದು.

ರಾಜ್ಯದ ಕರಾವಳಿ ಭಾಗದಲ್ಲಿ ಶನಿವಾರ ಪವಿತ್ರ ರಂಜಾನ್ ಹಬ್ಬ ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಜಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ.

1 ತಿಂಗಳ ಕಾಲ ಆಚರಿಸುವ ರಂಜಾನ್ ಉಪವಾಸ ವ್ರತ ನಾಳೆ ಅಂತ್ಯವಾಗಲಿದೆ. ವಿಶೇಷ ಪ್ರಾರ್ಥನೆ, ಶುಭಾಶಯ ವಿನಿಮಯ, ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬ ಆಚರಿಸುತ್ತಾರೆ.

ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ಪವಿತ್ರ ಮಾಸ ರಂಜಾನ್ ಅನ್ನು ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಈ ಸಮಯದಲ್ಲಿ 30 ದಿನಗಳ ಕಾಲ ಉಪವಾಸ ಅನುಸರಿಸುತ್ತಾರೆ. ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಅನುಸರಿಸುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಇಫ್ತಾರ್ ಭೋಜನದೊಂದಿಗೆ ಉಪವಾಸ ಮುಗಿಯುತ್ತದೆ. ನಾಳೆ ಉಪವಾಸ ಮುಕ್ತಾಯವಾಗಲಿದ್ದು, ಶನಿವಾರ ರಂಜಾನ್ ಆಚರಿಸಲಾಗುವುದು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!