ದಿನಭವಿಷ್ಯ: ಇಂದು ನಿಮ್ಮ ಕೆಲಸವನ್ನು ಎಲ್ಲರೂ ಮೆಚ್ಚಿಕೊಳ್ತಾರೆ, ಅನಿರೀಕ್ಷಿತ ಲಾಭವೂ ಇದೆ

ಮೇಷ
ಆರ್ಥಿಕ ವಿಷಯಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರ ತಾಳುವಿರಿ. ನಿಮ್ಮ ಕೌಶಲದಿಂದ ಕಾರ್ಯಸಾಧನೆ. ಸಾಂಸಾರಿಕ ನೆಮ್ಮದಿ.
ವೃಷಭ
ವೃತ್ತಿ ಕ್ಷೇತ್ರದಲ್ಲಿ ಉಂಟಾದ ಬದಲಾವಣೆ ಖಾಸಗಿ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಸಂಗಾತಿ ಜತೆಗೆ ವಾಗ್ವಾದ ಬೇಡ.
ಮಿಥುನ
ಬಾಕಿ ಉಳಿದ ಕೆಲಸ ಪೂರೈಸಲು ಶ್ರಮ ಪಡಬೇಕು. ಅವಸರ ಮಾಡಿ ತಪ್ಪೆಸಗದಿರಿ. ಸಾವಧಾನದಿಂದ ಕಾರ್ಯ ನಿರ್ವಹಿಸಿ.
ಕಟಕ
ಅನ್ಯರು ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಮಾಡದಂತೆ ಎಚ್ಚರ ವಹಿಸಿ.  ವಂಚನೆಯ  ಮಾತಿಗೆ ಮರುಳಾಗಬೇಡಿ.
ಸಿಂಹ
ಕೆಲಸದ ಒತ್ತಡದಿಂದ ವಿರಾಮ. ಆಪ್ತರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ಬಂಧುಗಳ ಬೇಡಿಕೆ ಈಡೇರಿಸಲು ಕಷ್ಟ ಪಡುವಿರಿ.
ಕನ್ಯಾ
ನಿಮ್ಮ ಬುದ್ಧಿಮತ್ತೆಗೆ ಸವಾಲೊಡ್ಡುವ ಪ್ರಸಂಗ ಉದ್ಭವಿಸುತ್ತದೆ. ಅದರಲ್ಲಿ  ಉತ್ತೀರ್ಣರಾಗುವಿರಿ. ಕೌಟುಂಬಿಕ ಸಮಸ್ಯೆ ಪರಿಹಾರ.
ತುಲಾ
ಈ ದಿನ ನಿಮ್ಮ ಪಾಲಿಗೆ ಎಂದಿನಂತಲ್ಲ. ಅಸಹಜ ಬೆಳವಣಿಗೆ ಸಂಭವ. ಇದು ಬದುಕಿನ ಮೇಲೆ ಪರಿಣಾಮ ಬೀರಬಹುದು.
ವೃಶ್ಚಿಕ
ಕಠಿಣವಾದರೂ ಗುರಿ ಸಾಧಿಸುವುದು ಕಷ್ಟವೇನಲ್ಲ. ವೃತ್ತಿಯಲ್ಲಿ  ಉತ್ಸಾಹದ ದಿನ. ಇತರರ ಸಹಕಾರ ಮನಸ್ಸಿಗೆ ನೆಮ್ಮದಿ ತರುತ್ತದೆ.
ಧನು
ಹಣಕ್ಕೆ ಸಂಬಂಧಿಸಿ ಯಾವುದೇ ಅವಸರದ ನಿರ್ಧಾರ ತಾಳದಿರಿ. ಸಾಲ ಕೊಡುವುದು, ಸಾಲ ಪಡೆಯುವುದು ಸೂಕ್ತವೆನಿಸದು.
ಮಕರ
ವಾಗ್ವಾದಕ್ಕೆ ಮುಂದಾಗಬೇಡಿ. ಅದು ಗಂಭೀರ ಸ್ವರೂಪ ತಾಳಬಹುದು. ಆರ್ಥಿಕ ಅಡಚಣೆ ಉಂಟಾಗಬಹುದು.
ಕುಂಭ
ಸುಗಮ ದಿನ. ಉದ್ಯೋಗ ಸಂಬಂಧಿ ಆತಂಕ ಪರಿಹಾರ. ಆರ್ಥಿಕ ಲಾಭ ಸಂಭವ. ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿರಿ.
ಮೀನ
ನಿಮ್ಮ ಕಾರ್ಯಕ್ಕೆ ಎಲ್ಲರ ಬೆಂಬಲ ದೊರಕುವುದು. ಅನಿರೀಕ್ಷಿತ ವಲಯದಿಂದ ಆರ್ಥಿಕ ಲಾಭ ಉಂಟಾಗಲಿದೆ. ಕೌಟುಂಬಿಕ ಶಾಂತಿ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!