ಮೇಷ
ಈ ದಿನವು ನಿಮಗೆ ಪೂರಕವಾಗಿ ಆರಂಭವಾಗದಿದ್ದರೂ ಬಳಿಕ ಎಲ್ಲವೂ ಸುಸೂತ್ರವಾಗಲಿದೆ. ಕಾರ್ಯ ಸಂಪೂರ್ಣ.
ವೃಷಭ
ನೀವು ಎಸಗಿದ ಹಳೆಯ ಕಾರ್ಯವೊಂದು ಪರಿಣಾಮ ಬೀರಲಿದೆ. ತಪ್ಪೆಸಗಿದ್ದರೆ ಸರಿಪಡಿಸಲು ಯತ್ನಿಸಿ. ಆಪ್ತರ ಸಹಕಾರ ಲಭ್ಯ. ಹಣ ಖರ್ಚು.
ಮಿಥುನ
ಅಪನಿಂದೆ ಕೇಳುವಿರಿ. ನಿಮ್ಮ ವರ್ತನೆಯು ಅದಕ್ಕೆ ಆಸ್ಪದ ನೀಡಿದೆಯೆ ಎಂದು ಪರಿಶೀಲಿಸಿಕೊಳ್ಳಿ. ಸಂಧಾನ ಮಾರ್ಗ ಒಳಿತು.
ಕಟಕ
ಕೆಲವರ ವರ್ತನೆ ನಿಮ್ಮ ಮನಶ್ಯಾಂತಿ ಕಲಕಬಹುದು. ನಿಮ್ಮ ವ್ಯವಹಾರದಲ್ಲಿ ಅವರು ಮೂಗು ತೂರಿಸುತ್ತಾರೆ. ಆಪ್ತರಿಂದ ಸಾಂತ್ವನ.
ಸಿಂಹ
ಖಾಸಗಿ ಹಿತಾಸಕ್ತಿಗೆ ಗಮನ ಹರಿಸಲು ಸಾಧ್ಯವಾಗದ ಸ್ಥಿತಿ. ಇತರರ ಕಾರ್ಯ ಮಾಡುವುದರಲ್ಲೆ ಸಮಯ ವಿನಿಯೋಗ. ಒತ್ತಡ ಅಧಿಕ.
ಕನ್ಯಾ
ದಿನವನ್ನು ಆರಾಮವಾಗಿ ಕಳೆಯಬೇಕೆಂಬ ನಿಮ್ಮ ಯೋಜನೆ ಫಲಿಸದು. ಅನಿರೀಕ್ಷಿತ ಬೆಳವಣಿಗೆ ಸಂಭವಿಸುವುದು.
ತುಲಾ
ಅತಿಯಾದ ಕೆಲಸದ ಒತ್ತಡ ಕಾಡುವುದು. ಸುಲಭ ಕಾರ್ಯವೂ ಕಷ್ಟಕರವಾಗಿ ಪರಿಣಮಿಸುವುದು. ಉದ್ವಿಗ್ನ ಮನಸ್ಥಿತಿ.
ವೃಶ್ಚಿಕ
ಕುಟುಂಬದ ನೆಮ್ಮದಿ ಹಾಳಾಗುವ ಚಿಂತನೆಯಿಂದ ದೂರವಿರಿ. ಕೆಲವರ ಚಾಡಿಮಾತನ್ನು ನಂಬಬೇಡಿ. ಅವರನ್ನು ದೂರವಿಡಿ.
ಧನು
ಕೆಲವರ ನಡೆನುಡಿ ನಿಮ್ಮ ಮನಸ್ಸಿಗೆ ಒಪ್ಪಿಗೆ ಆಗದಿರಬಹುದು. ಆದರೂ ಹೊಂದಾಣಿಕೆ ಸಾಧಿಸಿ. ಸಂಘರ್ಷದಿಂದ ಕೆಲಸ ಆಗಲಾರದು.
ಮಕರ
ಅತಿಯಾದ ಭಾವುಕ ವರ್ತನೆ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಅನ್ಯರ ಟೀಕೆಗೆ ಹೆಚ್ಚು ಗಮನ ಕೊಡದಿರಿ.
ಕುಂಭ
ಜನರ ನಡುವೆ ಬೆರೆತು ಬಾಳಲು ಕಲಿಯಿರಿ. ಎಲ್ಲರಿಂದ ದೂರವಾಗಿ ನಿಲ್ಲಬೇಡಿ. ಕೌಟುಂಬಿಕ ಸಮಸ್ಯೆ ಶಾಂತಿಯಿಂದ ಬಗೆಹರಿಸಿ.
ಮೀನ
ಆಪ್ತರ ಕುರಿತಾದ ಚಿಂತೆಯು ಮನಸ್ಸನ್ನು ಕಾಡುವುದು. ಎಲ್ಲ ಇದ್ದೂ ನೆಮ್ಮದಿ ಇಲ್ಲದಾಗುವ ಸ್ಥಿತಿಯನ್ನು ನೀವಿಂದು ಅನುಭವಿಸುವಿರಿ.