ದಿನಭವಿಷ್ಯ: ಈಗಿರುವ ಪರಿಸ್ಥಿತಿ ಪರ್ಮನೆಂಟ್‌ ಅಲ್ಲ! ಅದನ್ನು ದೂರುತ್ತಾ ಕೂರಬೇಡಿ

ಮೇಷ
ಸಂತೋಷದ ದಿನ. ಆದರೂ ನಿಮ್ಮ ಮನಸ್ಥಿತಿ ಪದೇಪದೇ ಬದಲಾಗುವುದ.  ನಿಮ್ಮ ಲಘು ಧೋರಣೆ ಕೆಲವರಿಗೆ ಇಷ್ಟವಾಗದಿರಬಹುದು.
ವೃಷಭ
ಹೆಚ್ಚು ವಿಶ್ವಾಸದಿಂದ ಕಾರ್ಯ ನಿರ್ವಹಣೆ.     ಯಾವ ಅಡ್ಡಿ ನಿಮ್ಮನ್ನು ಬಾಧಿಸದು. ಆರೋಗ್ಯ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆಯಿರಿ.
ಮಿಥುನ
ಉದ್ಯೋಗದಲ್ಲಿ ಯಥಾಸ್ಥಿತಿ. ಆದರೂ ನಿಮ್ಮಲ್ಲಿ ಅತೃಪ್ತಿ.  ಸಂಬಂಧದಲ್ಲಿ ಬಿರುಕು ಮೂಡದಂತೆ ಎಚ್ಚರ ವಹಿಸಬೇಕು.
ಕಟಕ
ದಿನದ ಅಂತ್ಯಕ್ಕೆ ಅನಿರೀಕ್ಷಿತವಾದುದು ಸಂಭವಿಸಬಹುದು. ಅದು ನಿಮಗೆ ಒಳಿತೇ ಮಾಡಲಿದೆ. ಪ್ರೀತಿಯಲ್ಲಿ ಮುಖ್ಯ ಬೆಳವಣಿಗೆ.
ಸಿಂಹ
ಯಾವುದೇ ಕೆಲಸ ಅಪೂರ್ಣವಾಗಿ ಬಿಡದಿರಿ. ಅದರಿಂದ ಸಮಸ್ಯೆ ಸೃಷ್ಟಿ.  ಆರೋಗ್ಯಕರ ಆಹಾರ ಮಾತ್ರ ಸೇವಿಸಿರಿ. ಕೌಟುಂಬಿಕ ಅಸಹಕಾರ.
ಕನ್ಯಾ
ನಿಮ್ಮ ಜೀವನಕ್ರಮದ ಕುರಿತು ಎಚ್ಚರ ವಹಿಸಿ. ಅನಾರೋಗ್ಯಕರ ಆಹಾರ, ಪರಿಪಾಠ ತ್ಯಜಿಸಿ. ಕೌಟುಂಬಿಕ ಉದ್ವಿಗ್ನತೆ ಉಂಟಾದೀತು.
ತುಲಾ
ವೃತ್ತಿ ಕ್ಷೇತ್ರದಲ್ಲಿ ಎಚ್ಚರದಿಂದ ನಿರ್ವಹಿಸಿ. ಹೆಚ್ಚು ಕೇಳಿ, ಕಡಿಮೆ ಮಾತಾಡಿ. ನಿಮ್ಮ ಮಾತನ್ನು ತಿರುಚಬಹುದು. ದೈಹಿಕ ನೋವು ಸಂಭವವಿದೆ.
ವೃಶ್ಚಿಕ
ಪರಿಸ್ಥಿತಿಗೆ ಒಗ್ಗಿಕೊಳ್ಳಿ. ಅದರ ಬಗ್ಗೆ ದೂರುತ್ತಾ ಕೂರದಿರಿ. ನಿಮಗೆ ಪ್ರತಿಕೂಲ ಪರಿಸ್ಥಿತಿ ಇದ್ದಾಗ ಹೊಂದಾಣಿಕೆ ಮುಖ್ಯ. ಖರ್ಚು ಹೆಚ್ಚಳ.
ಧನು
ಇತರರನ್ನು ನಿಯಂತ್ರಿಸುವುದು ನಿಮಗೆ ಇಂದು ಕಷ್ಟವಾದೀತು. ಅವರ ಕಾರ್ಯ ನಿಮ್ಮ ಮೇಲೆ ಪರಿಣಾಮ ಬೀರಲಿದೆ.
ಮಕರ
ಇಂದು ಹಲವಾರು ಬೆಳವಣಿಗೆ ಸಂಭವಿಸುವ ಸಾಧ್ಯತೆ. ಹಳೆಯ ಪ್ರಸಂಗ ನಿಮ್ಮನ್ನು ಕಾಡಬಹುದು. ಅದರಿಂದ ಪಲಾಯನ ಮಾಡದಿರಿ.
ಕುಂಭ
ಹೊಸ ಉದ್ಯೋಗದ ಅವಕಾಶ. ವಿವೇಚಿಸಿ ನಿರ್ಧಾರ ತಾಳಿ. ವ್ಯಕ್ತಿಯೊಬ್ಬರ ವರ್ತನೆ ನೋವು ತರಬಹುದು. ಸಮಾಧಾನಚಿತ್ತವಿರಲಿ.
ಮೀನ
ಹೊಸಪ್ರಯೋಗ ಮಾಡಲು ಇಂದು ಹೋಗದಿರಿ. ಎಂದಿನಂತೆ ಕಾರ್ಯ ನಿರ್ವಹಿಸಿ. ಭಿನ್ನಮತ ಉಲ್ಬಣಕ್ಕೆ ಕೊಂಡೊಯ್ಯಬೇಡಿ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!