ಲೋಕಸಭಾ ಸದಸ್ಯ ಸ್ಥಾನದಿಂದ ಸಂಸದ ಅಫ್ಜಲ್ ಅನ್ಸಾರಿ ಅನರ್ಹ

ಹೊಸ ದಿಗಂತ ವರದಿ ಡಿಜಿಟಲ್ ಡೆಸ್ಕ್:

ಕ್ರಿಮಿನಲ್ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಎಸ್ಪಿ ಸಂಸದ ಅಫ್ಜಲ್ ಅನ್ಸಾರಿ ಅವರನ್ನ ಸೋಮವಾರ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಮಾಫಿಯಾ ಮುಕ್ತಾರ್ ಅನ್ಸಾರಿಯ ಹಿರಿಯ ಸಹೋದರ ಅಫ್ಜಲ್ ಅನ್ಸಾರಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ.

ಈ ಸಂಬಂಧ ಲೋಕಸಭೆ ಸೆಕ್ರೆಟರಿಯೇಟ್ ಸೋಮವಾರ ಅಧಿಸೂಚನೆ ಹೊರಡಿಸಿದೆ. ಅಫ್ಜಲ್ ಅನ್ಸಾರಿ ಅವರು ಆರು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!