Friday, December 8, 2023

Latest Posts

ದಿನಭವಿಷ್ಯ: ಸಣ್ಣ ವಿಷಯಗಳನ್ನು‌ ದೊಡ್ಡದು ಮಾಡಬೇಡಿ, ಕೆಲವರ ಜತೆ ಎಷ್ಟು ಬೇಕೋ ಅಷ್ಟೇ ವ್ಯವಹರಿಸಿ..

ಶನಿವಾರ, 19 ನವೆಂಬರ್ 2022

ಮೇಷ
ನಿಮ್ಮ ಪಾಲಿಗೆ ಅಚ್ಚರಿಯ ಬೆಳವಣಿಗೆ ಸಂಭವಿಸೀತು. ಸಂಬಂಧ ಗಟ್ಟಿಗೊಳ್ಳು ವುದು. ಅನಿರೀಕ್ಷಿತ ವಲಯದಿಂದ ಶುಭ ಸುದ್ದಿ ಕೇಳುವಿರಿ.

ವೃಷಭ
ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸ ನಿಮ್ಮ ಕೆಲಸ ಸಫಲವಾಗುವಂತೆ ಮಾಡುವುದು. ಮಾನಸಿಕ ಬೇಗುದಿ ಕಡಿಮೆಯಾಗುವುದು.

ಮಿಥುನ
ಸಿಹಿಕಹಿ ನೆನಪುಗಳು ಕಾಡಬಹುದು. ಮುಖ್ಯ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ವಿವೇಚಿಸಿ ನಿರ್ಧಾರ ತಾಳಿ. ಕೆಲವರ ಸಲಹೆ ಪಡೆಯಿರಿ.

ಕಟಕ
ಆಪ್ತರೆನಿಸಿದ ವ್ಯಕ್ತಿಯೊಬ್ಬರು ಸಮಸ್ಯೆ ಸೃಷ್ಟಿಸಬಹುದು. ಹಾಗಾಗಿ ಎಲ್ಲರನ್ನೂ ಕುರುಡಾಗಿ ನಂಬಬೇಡಿ. ವಿವೇಚನೆಯಿಂದ ವರ್ತಿಸಿ.

ಸಿಂಹ
ಹಣದ ವಿಷಯದಲ್ಲಿ ಲೆಕ್ಕಾಚಾರದಿಂದ ನಡಕೊಳ್ಳಿ. ಖರ್ಚು ಕಡಿಮೆ ಮಾಡಿ. ವೃತ್ತಿಗೆ ಸಂಬಂಧಿಸಿ ಮಹತ್ವದ ಬೆಳವಣಿಗೆ ಸಂಭವಿಸಬಹುದು.

ಕನ್ಯಾ
ನಿಮ್ಮ ಕೆಲವು ಕಾರ್ಯ ಕೆಲವರಿಂದ ಟೀಕೆಗೆ ಒಳಗಾಗಬಹುದು. ಆದರೆ ಅಂತಿಮವಾಗಿ ನಿಮ್ಮ ನಿಲುವನ್ನು ಎಲ್ಲರೂ ಒಪ್ಪಿಕೊಳ್ಳು ವರು. ಆರ್ಥಿಕ ಲಾಭ.

ತುಲಾ
ಕೆಲಸದಲ್ಲಿ  ಯಶಸ್ಸು. ಸಣ್ಣ ವಿಷಯಗಳನ್ನು ದೊಡ್ಡದು ಮಾಡದಿರಿ. ಕೆಲವರ ಜತೆ ಎಷ್ಟು ಬೇಕೋ ಅಷ್ಟೇ ವ್ಯವ ಹರಿಸಿ. ಇಲ್ಲವಾದರೆ ಸಮಸ್ಯೆ ಉಂಟಾದೀತು.

ವೃಶ್ಚಿಕ
ಮುಖ್ಯ ಕಾರ್ಯಕ್ಕೆ ಸಹೋದ್ಯೋಗಿಗಳ ಸಹಕಾರ ಲಭ್ಯ. ನಿಮಗೆ ಸರಿ ಎನಿಸದ ಕಾರ್ಯ ಮಾಡಲು ಹೋಗದಿರಿ. ಅದರಿಂದ ಮುಜುಗರ ತಪ್ಪಿಸಿಕೊಳ್ಳಬಹುದು.

ಧನು
ಕುಟುಂಬದ ಸಮಸ್ಯೆ, ಕೆಲವರಿಗೆ ವಿವೇಕ ತುಂಬುವ ಕೆಲಸ ಮಾಡಿ. ಇಲ್ಲವಾದರೆ ಕೌಟುಂಬಿಕ ಶಾಂತಿ ಕದಡುವ ಪ್ರಸಂಗ ಒದಗಬಹುದು.

ಮಕರ
ಪ್ರೀತಿಪಾತ್ರರ ವರ್ತನೆ ಯಲ್ಲಿ ಬದಲಾವಣೆ ಕಂಡುಬಂದೀತು. ಇದರಿಂದ ಮನಸ್ಸಿಗೆ ಆತಂಕ. ಆದರೆ ನಿಜವಾಗಿ ಆತಂಕ ಪಡುವ ಅಗತ್ಯವಿಲ್ಲ.

ಕುಂಭ
ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ದೊರಕುವುದು. ದುಬಾರಿ ವಸ್ತು ಖರೀದಿ ಸಂಭವ. ಕೌಟುಂಬಿಕ ಸಮಾಧಾನ ಮತ್ತು ಸಹಕಾರ.

ಮೀನ
ಕಾರ್ಯಸಿದ್ಧಿ. ಧನ ಲಾಭ. ವೃತ್ತಿಯಲ್ಲಿ ಉನ್ನತಿ.  ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು. ನವವಿವಾಹಿತರಿಗೆ ಶುಭ ಬೆಳವಣಿಗೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!