Sunday, December 10, 2023

Latest Posts

ದಿನಭವಿಷ್ಯ: ಆಪ್ತರ ಜೊತೆಗಿದ್ದ ಮನಸ್ತಾಪ ನಿವಾರಣೆ, ಒಳ್ಳೆಯ ದಿನ

ಮೇಷ
ನಿಮ್ಮ ಹಿತಾಸಕ್ತಿ ಕಾಯುವಂತಹ ನಿರ್ಧಾರ ತಾಳಲು ಮೀನಮೇಷ ಬೇಡ. ಗೊಂದಲವನ್ನು ನಿವಾರಿಸಿಕೊಳ್ಳಿ. ಆಪ್ತರ ಸಹಕಾರ ಲಭ್ಯ

ವೃಷಭ
ಉದ್ಯೋಗದಲ್ಲಿ ಯಶಸ್ಸು. ಕಾರ್ಯ ಸಫಲತೆ. ಸಂಬಂಧದ ವಿಷಯದಲ್ಲಿ ದಿಟ್ಟ ನಿರ್ಧಾರ ತಾಳಬೇಕಾದ ಪರಿಸ್ಥಿತಿ. ವಾಹನ ಖರೀದಿಗೆ ಸಕಾಲ.


ಮಿಥುನ
ಆತ್ಮವಿಶ್ವಾಸ ಕುಂದಿಸುವ ಬೆಳವಣಿಗೆ. ಉದ್ದೇಶಿತ ಕಾರ್ಯ ನೆರವೇರದು. ಹಣಕ್ಕೆ ಸಂಬಂಧಿಸಿ ದೊಡ್ಡ ವ್ಯವಹಾರ ನಡೆಸಲು ಹೋಗದಿರಿ. ಆರೋಗ್ಯ ಸುಧಾರಣೆ.

ಕಟಕ
ಕಾರ್ಯಸಿದ್ಧಿ. ಆರ್ಥಿಕ ಅಭಿವೃದ್ಧಿ. ದೂರ ಪ್ರಯಾಣದ ಅವಕಾಶ. ಬಂಧುಗಳಿಂದ ಸಹಕಾರ. ಆಪ್ತರೊಂದಿಗಿನ ಮನಸ್ತಾಪ ನಿವಾರಣೆ, ಸಂಬಂಧ ವೃದ್ಧಿ.

ಸಿಂಹ
ಯಾವುದೇ ಕಾರ್ಯ ಸಂಪೂರ್ಣ ಯಶಸ್ಸು ಕಾಣದು. ಹಾಗಾಗಿ ಅತೃಪ್ತಿ ಕಾಡುವುದು. ಕಾಲು ನೋವು ಬಾಧಿಸಬಹುದು. ಲಘು ವ್ಯಾಯಾಮ ಒಳಿತು.

ಕನ್ಯಾ
ಸಂತೋಷದ ದಿನ. ಮನೆಯಲ್ಲಿ ಆತ್ಮೀಯ ಬಂಧುಗಳ ಜತೆ ಕಾಲ ಕಳೆಯುವ ಅವಕಾಶ. ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ, ಇಂದು ಸರಿಯಾಗುವುದು.

ತುಲಾ
ನಿಮ್ಮ ಕಾರ್ಯಗಳು ಸಫಲವಾಗುವವು. ಉದ್ದೇಶಿತ ಗುರಿ ಈಡೇರಿಕೆ. ಧನಲಾಭ. ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುವಿರಿ. ಕೌಟುಂಬಿಕ ನೆಮ್ಮದಿ.


ವೃಶ್ಚಿಕ
ವಿಶ್ವಾಸ, ಆಶಾವಾದ ಕುಂದಿಸುವ ಬೆಳವಣಿಗೆ ಉಂಟಾದೀತು. ಪ್ರಮುಖ ನಿರ್ಧಾರ ತಾಳುವುದನ್ನು ಮುಂದೂಡಿ. ಹಣದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳದಿರಿ.

ಧನು
ಖಾಸಗಿ ಬದುಕಿನಲ್ಲಿ ಏರುಪೇರು. ಸಂತೋಷ ಬೇಸರ ಎರಡನ್ನೂ ಅನುಭವಿಸುವಿರಿ. ಹಣದ ವಿಚಾರದಲ್ಲಿ ಸಮಾಧಾನ ತರುವ ವಿದ್ಯಮಾನ.

ಮಕರ
ನಿಮ್ಮ ಪಾಲಿಗೆ ನಿರಾಳ ದಿನ. ಏಕೆಂದರೆ ಕೆಲಸದ ಒತ್ತಡ ಕಾಡದು. ಗೊಂದಲಗಳ ನಿವಾರಣೆ. ಮುಖ್ಯ ವಿಷಯದಲ್ಲಿ ಸ್ಪಷ್ಟ ನಿಲುವು ತಳೆಯುವ ಸಂಕೇತ ತೋರುವುದು.

ಕುಂಭ
ನೀವು ವಿಶ್ವಾಸ ಇರಿಸಿದ ವ್ಯಕ್ತಿಯಿಂದ ವಂಚನೆಗೆ ಒಳಗಾಗುವಿರಿ. ಕೆಲವರ ಕುರಿತಂತೆ ಎಚ್ಚರಿಕೆಯ ಧೋರಣೆ ಅನುಸರಿಸಿ. ಕೌಟುಂಬಿಕ ಒತ್ತಡ, ಉದ್ವಿಗ್ನತೆ ಹೆಚ್ಚಳ.

ಮೀನ
ನೀವು ಬಯಸಿದ ಕಾರ್ಯ ಸಫಲ ವಾಗದು. ಅಡ್ಡಿಗಳು ಕಾಡುತ್ತವೆ. ಕೆಲವು ಬೆಳವಣಿಗೆ ಮಾನಸಿಕ ಒತ್ತಡ ಹೆಚ್ಚಿಸುವುದು. ಕೌಟುಂಬಿಕ ಅಸಹಕಾರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!