Monday, December 11, 2023

Latest Posts

ಅಯ್ಯಂಗಾರ್ ಹತ್ಯಾಕಾಂಡ ಖಂಡಿಸಿ ಟಿಪ್ಪು ವಿರುದ್ಧ ಮೇಲುಕೋಟೆಯಲ್ಲಿ ಪಂಜಿನ ಮೆರವಣಿಗೆ

ಹೊಸ ದಿಗಂತ ವರದಿ, ಮೇಲುಕೋಟೆ :

ಶತಮಾನಗಳ ಹಿಂದೆ ಟಿಪ್ಪು ಸುಲ್ತಾನ್ ಮೈಸೂರು ಮಹಾರಾಜರ ಪರವಾಗಿದ್ದ ಕಾರಣ ಮೇಲುಕೋಟೆಯ ಮಂಡ್ಯಂ ಅಯ್ಯಂಗಾರ್ ಕುಟುಂಬದವರ ಹತ್ಯಾಕಾಂಡ ನಡೆಸಿದ್ದನ್ನು ಖಂಡಿಸಿ ಹಿಂದೂ ಜಾಗರಣವೇದಿಕೆ ಸದಸ್ಯರು ದೀಪಾವಳಿ ಅಮಾವಾಸ್ಯೆ ದಿನವಾದ ಸೋಮವಾರ ರಾತ್ರಿ ಮೇಲುಕೋಟೆಯಲ್ಲಿ ಪಂಜಿನ ಮೆರವಣಿಗೆ ನಡೆಸಿ ಹಿಂದೂ ವಿರೋಧಿ ಟಿಪ್ಪು, ಕನ್ನಡವಿರೋಧಿ ಟಿಪ್ಪು, ಮತಾಂದ ಟಿಪ್ಪುಗೆ ದಿಕ್ಕಾರ ಎಂದು ಘೋಷಣೆ ಕೂಗಿದರು.

ಮಂಡ್ಯಂ ಅಯ್ಯಂಗಾರರ ಕುಟುಂಬದವರನ್ನು ನರಕಚತುರ್ಧಶಿ ಹಬ್ಬದ ದಿನವೇ ಮಾರಣ ಹೋಮ ಮಾಡಿ ಕೊಲೆ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಮುಖಂಡ ಮೊಹನ್ ರಾವ್ ಟಿಪ್ಪು ಒಬ್ಬ ಮತಾಂಧ ಅವನು ಸ್ವಾತಂತ್ರ್ಯ ಹೋರಾಟಗಾರ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ.

ಆದರೆ ಅವನು ಹಿಂದೂಗಳ ಮೇಲೆ ಮಾಡಿದ ಹತ್ಯಾಕಾಂಡಗಳನ್ನು ಮುಚ್ಚಿಟ್ಟು ಇತಿಹಾಸ ತಿರುಚಲಾಗಿದೆ. ಹಳೆಯ ಘಟನೆ ಏಕೆ ಎಂದು ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ನಿಜವಾದ ಸತ್ಯವಾದ ಇತಿಹಾಸವನ್ನು ಹಾಗೂ ಹಿಂದೂಗಳ ಮೇಲೆ ಆದ ಕ್ರೌರ್ಯಗಳ ಐತಿಹಾಸಿಕ ವಿವರಗಳನ್ನು ತಿಳಿಸುವ ಕಾರ್ಯಮಾಡಬೇಕು. ಭಾರತದ ಅಸ್ಮಿತೆಯಾದ ಮೈಸೂರರಸರನ್ನು ಹೀನಾಯವಾಗಿ ನಡೆಸಿಕೊಂಡ ಟಿಪ್ಪು ರಾಜಮನೆತನದ ಮೇಲೆ ಕ್ರೌರ್ಯಮೆರೆದಿದ್ದಾನೆ ಅವರಿಗೆ ಬೆನ್ನೆಲುಬಾಗಿ ನಿಂತ ಮಂಡಯಂ ಐಯ್ಯಂಗಾರರನ್ನು ಮಾರಣ ಹೋಮಮಾಡಿದ್ದಾನೆ ಎಂದರು

ಮಂಡಯಂ ಅಯ್ಯಂಗಾರ್ ವಂಶದ ಮುಖಂಡ .ಮೇಲುಕೋಟೆ ವಿದ್ವಾನ್ ರಂಗುವಾದ್ಯಾರ್ ಮಾತನಾಡಿ ಶ್ರೀರಂಗಪಟ್ಟಣ, ಮೇಲುಕೋಟೆ. ನೆಲಮನೆ ಲಕ್ಷ್ಮಿ ನರಸಿಂಹ ದೇಗುಲದ ಬಳಿ 750 ಕುಟುಂಬಗಳ 3500 ಜನ ಮಂಡಯಂ ಐಯ್ಯಂಗಾರ್ ಹೆಣ್ಣು,ಗಂಡು, ಮಕ್ಕಳೆನ್ನದೆ ಮಾರಣಹೋಮ ಮಾಡಿದ ಟಿಪ್ಪುಕ್ರೌರ್ಯ ಮಾಡಿದ ಇದು ಕೃಪಾಪೋಷಿತ ಇತಿಹಾಸದಲ್ಲಿ ದಾಖಲಾಗಲಿಲ್ಲ.. ಆದರೆ ಐತಿಹಾಸಿಕ ಕೊಲೆಯ ಮಾರಣಹೋಮದ ದಾಖಲೆ ಇದೆ. ನಾವು ನರಕಚತುರ್ದಶಿ ಹಬ್ಬ ಮಾಡುವುದಿಲ್ಲ ತಿಥಿ ಮಾಡುತ್ತಿದ್ದೇವೆ ಎಂದು ಆಕ್ರೋಶಭರಿವಾಗಿ ಮಾತನಾಡಿದರು

ಮೇಲುಕೋಟೆ ಮಂಡ್ಯಂ ಐಯ್ಯಂಗಾರ್ ಕುಡಿ ಮಧು ಮಾತನಾಡಿ, ನಮ್ಮ ಪೂರ್ವಜರ ಹತ್ಯಾಕಾಂಡ ಖಂಡಿಸಿ ಕಾರ್ಯಕ್ರಮ ರೂಪಿಸಿದ ಜಾಗರಣೆ ವೇದಿಕೆಗೆ ಧನ್ಯವಾದ ನಾವು ಇಂದಿಗೂ ನರಕಚತುರ್ದಶಿ ಹಬ್ಬ ಆಚರಿಸುವುದಿಲ್ಲ ನಮ್ಮ ಪೂರ್ವಜರ ಕಣ್ಣಲ್ಲಿ ನೀರಲ್ಲ ರಕ್ತಬರಿಸಿದ್ದಾರೆ. ನಮ್ಮ ನೆಲದ ಮಹಾರಾಜರ ವಿರುದ್ದ ಹೋರಾಡಿ ಅವರಿಗೆ ಕಿರುಕುಳ ನೀಡಿದ ಹಾಗೂ ಕನ್ನಡ ಭಾಷೆಯ ಕಗ್ಗೊಲೆಮಾಡಿದ ಹಿಂದೂ ವಿರೊಧಿ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಭಿಸುವ ವ್ಯವಸ್ಥಿತ ಹುನ್ನಾರ ಮಾಡಲಾಗಿದೆ ಇಂತಹ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದು ಸತ್ಯದ ಅನಾವರಣ ಆಗಾಬೇಕಾದ್ದು ಅಗತ್ಯ ಎಂದರು

ಹಿಂದೂ ಜಾಗರಣ ವೇದಿಕೆ ಅಂಗಡಿ ಬೀದಿಯಿಂದ ಅರಮನೆ ತೋಟದವರೆಗೆ ಪಂಜಿನ ಮೆರವಣಿಗೆ ನಡೆಸಿದರು . ಈ ವೇಳೆ ಬಿ.ಜೆ.ಪಿ ಮುಖಂಡ ಇಂದ್ರೇಶ್ ಇತಿಹಾಸ ತಜ್ಞ ನಂಜರಾಜ್, ದನಂಜಯ, ನಾಗೇಗೌಡ ನ್ಯಾಮನಹಳ್ಳಿ ಸೋಮಶೇಖರ್, ಮೇಲುಕೋಟೆ ಮುರಳಿ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು ಇದೇ ವೇಳೆ ಹತ್ಯಾಂಕಾಂಡದಲ್ಲಿ ಮಡಿದ ಮಂಡಯಂ ಐಯ್ಯಂಗಾರರ ಸ್ಮರಣೆಗಾಗಿ ಎರಡು ನಿಮಿಷಗಳ ಮೌನ ಶೋಕಾಚರಣೆ ಮಾಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!