Sunday, June 4, 2023

Latest Posts

ದಿನ ಭವಿಷ್ಯ : ನಿಮಗಿಂತ ಬಲಿಷ್ಠರ ಜತೆ ಸಂಘರ್ಷಕ್ಕೆ ಇಳಿಯದಿರಿ, ಅದು ನಿಮಗೇ ಹಾನಿ ತರುತ್ತದೆ!

ಮಂಗಳವಾರ, ಮಂಗಳೂರು

ಮೇಷ
ಇಂದು ಹಠಮಾರಿತನದ ವರ್ತನೆ. ಅದರಲ್ಲೂ ನಿಮ್ಮ ಖಾಸಗಿ ವಿಷಯಕ್ಕೆ ಮಾತ್ರ ಆದ್ಯತೆ ಕೊಡುವಿರಿ. ಇತರರ ಹಿತಾಸಕ್ತಿ ಗೌಣವಾಗುವುದು.

ವೃಷಭ
ನಿಮ್ಮ ಪ್ರಾಮಾಣಿಕ ಹಿತೈಷಿಗಳಿಂದ ದೂರ ಸರಿಯದಿರಿ. ಮುಂದಕ್ಕೆ ಪಶ್ಚಾತ್ತಾಪ ಪಡಬೇಕಾಗಬಹುದು. ಕೌಟುಂಬಿಕ ಸಾಮರಸ್ಯ ಕೆಡಬಹುದು.

ಮಿಥುನ
ಆರೋಗ್ಯ ಸಮಸ್ಯೆ ಉಂಟಾಗುವುದು. ಉದ್ಯಮದಲ್ಲಿ ಹಿನ್ನಡೆ. ಹಣಕಾಸು ಸಮಸ್ಯೆ ಎದುರಿಸುವಿರಿ. ಉದ್ಯೋಗದಲ್ಲಿ ಹೆಚ್ಚಿನ ಹೊಣೆಗಾರಿಕೆ.

ಕಟಕ
ನಿಮಗಿಂತ ಬಲಿಷ್ಠರ ಜತೆ ಸಂಘರ್ಷಕ್ಕೆ ಇಳಿಯದಿರಿ. ಅದು ನಿಮಗೇ ಹಾನಿ ತರುತ್ತದೆ. ಇತರರ ವಿಷಯದಿಂದ ದೂರವಿರಿ.

ಸಿಂಹ
ಗೊಂದಲದ ಪರಿಸ್ಥಿತಿಗೆ ಸಿಲುಕುವಿರಿ. ವಿಭಿನ್ನ ತೆರನಾದ ವ್ಯಕ್ತಿಗಳ ಜತೆ ವ್ಯವಹರಿಸ ಬೇಕಾಗುವುದು. ಕೌಟುಂಬಿಕ ಶಾಂತಿಗೆ ಭಂಗ ಬರಲಿದೆ.

ಕನ್ಯಾ
ಉದ್ಯೋಗ ಬದಲಿಸುವುದಾದರೆ ನಿಮಗೆ ಕಾಲ ಸೂಕ್ತವಾಗಿದೆ. ಉತ್ತಮ ಅವಕಾಶ ದೊರಕಬಹುದು. ಆರೋಗ್ಯ ಸುಧಾರಣೆ.

ತುಲಾ
ಸಹೋದ್ಯೋಗಿ ಯೊಬ್ಬರು ನಿಮ್ಮನ್ನು ಮೀರಿಸಿದ ಸಾಧನೆ ತೋರುತ್ತಾರೆ. ಅದು ನಿಮಗೆ ಅಸಹನೆ ತರಬಹುದು. ಆರ್ಥಿಕ ಒತ್ತಡ ಹೆಚ್ಚುವುದು.

ವೃಶ್ಚಿಕ
ಉದ್ಯೋಗದಲ್ಲಿ ಹೊಸ ಅವಕಾಶ ಒದಗುವುದು. ಸಣ್ಣ ಆರೋಗ್ಯ ಸಮಸ್ಯೆ ಕಾಡಬಹುದು. ಆತಂಕ ಪಡುವ ಅಗತ್ಯವಿಲ್ಲ. ಗಂಭೀರ ಸ್ವರೂಪ ತಳೆಯಲಾರದು.

ಧನು
ನಿಮ್ಮ ಮನಸ್ಥಿತಿಗೆ ತಕ್ಕ  ವ್ಯಕ್ತಿಗಳ ಒಡನಾಟ.  ಇದರಿಂದ ನಿಮ್ಮ ಮನದ ಬೇಗುದಿ ದೂರವಾಗುವುದು. ಆರ್ಥಿಕವಾಗಿ ಸುಧಾರಣೆ ಕಾಣುವಿರಿ.

ಮಕರ
ನಿಮಗೆ ಹಲವಾರು ಕೆಲಸಗಳ ಜವಾಬ್ದಾರಿ. ಕೆಲಸದಲ್ಲಿ ಪೂರ್ಣ ಗಮನವಿರಲಿ. ಪ್ರತಿಫಲ ದೊರಕುವುದು. ಆಹಾರ ಸೇವನೆ ಮಿತಿಯಲ್ಲಿರಲಿ.

ಕುಂಭ
ಸಂಬಂಧದಲ್ಲಿ ಒಡಕು ಮೂಡುವ ಬೆಳವಣಿಗೆ ಸಂಭವಿಸುತ್ತದೆ.  ಸಂಧಾನದಿಂದ , ತಾಳ್ಮೆಯಿಂದ ಅದನ್ನು ಪರಿಹರಿಸಿಕೊಳ್ಳಬೇಕು. ಆರ್ಥಿಕ ಹೊರೆ.

ಮೀನ
ಕೌಟುಂಬಿಕ ಭಿನ್ನಾಭಿಪ್ರಾಯ ಉಂಟಾಗುವುದು. ಅದು ಉಲ್ಬಣಿಸದಂತೆ ಎಚ್ಚರಿಕೆ ವಹಿಸಿ. ಒಮ್ಮೆ ಸಂಬಂಧ ಕಡಿದರೆ ಮತ್ತೆ ಕಷ್ಟವಾದೀತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!