February 23, 2026
Monday, February 23, 2026
spot_img

ದಿನಭವಿಷ್ಯ: ಯಾವ ರೀತಿಯಿಂದ ನೋಡಿದರೂ ಇಂದು ತೃಪ್ತಿಕರ ದಿನ, ನೆಮ್ಮದಿಯಿಂದಿರುವಿರಿ

ಮೇಷ
ಯಾವುದೇ ಕೆಲಸ  ಬಾಕಿ ಇಡಬೇಡಿ. ಸಂಗಾತಿ ಜತೆಗಿನ ಸಂಬಂಧ ಸುಧಾರಣೆ. ಭಿನ್ನಮತ ನಿವಾರಣೆ. ಆರೋಗ್ಯದ ಚಿಂತೆ ಪರಿಹಾರ, ನಿರಾಳತೆ.        
ವೃಷಭ
ಆಪ್ತ ಸಂಬಂಧ ಇನ್ನೊಂದು ಸ್ತರ ಮೇಲೇರಲಿದೆ. ಏಕಾಂಗಿಗಳಿಗೆ ವೈವಾಹಿಕ ಅವಕಾಶ ಉಜ್ವಲ. ಆರ್ಥಿಕ ಪರಿಸ್ಥಿತಿ ಉತ್ತಮ, ಆದಾಯ ಏರಿಕೆ.            
ಮಿಥುನ
ವೃತ್ತಿಯಲ್ಲಿ ಸವಾಲು. ತಪ್ಪು ಘಟಿಸದಂತೆ ಎಚ್ಚರ ವಹಿಸಿ. ಹೊಸ ವ್ಯವಹಾರ ದಲ್ಲಿ ಹಣ ಹೂಡುವುದು ಸಮಂಜಸವೆನಿಸದು. ಕೌಟುಂಬಿಕ ಅಸಹಕಾರ.  
ಕಟಕ
ಎಲ್ಲ ವಿಧಗಳಲ್ಲೂ ಇಂದು ತೃಪ್ತಿಕರ ದಿನ. ಧನಪ್ರಾಪ್ತಿ. ಕಾರ್ಯ ಸಫಲ. ನಿಮ್ಮ ಇಷ್ಟವೊಂದು ನೆರವೇರುವುದು. ಬಂಧು ಸಹಕಾರ.    
ಸಿಂಹ
 ಏರಿಳಿತಗಳ ದಿನ. ದೊಡ್ಡ ಹೊಣೆ ಬೀಳಲಿದೆ.ಅದನ್ನು ಪೂರೈಸಲು ಕಷ್ಟ ಪಡುವಿರಿ. ಕಳಕೊಂಡ ಪ್ರೀತಿ ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಿರಿ.  
ಕನ್ಯಾ
 ಸವಾಲಿನ ದಿನ. ಹಣದ ವ್ಯವಹಾರದಲ್ಲಿ ತೊಡಕು ಕಾಣಿಸೀತು. ಹದ ತಪ್ಪಿದ ಮಾತು ಉದ್ವಿಗ್ನತೆ ಉಂಟು ಮಾಡಬಹುದು. ಸಂಯಮ ವಹಿಸಿರಿ.  
 ತುಲಾ
ವೃತ್ತಿಕ್ಷೇತ್ರದಲ್ಲಿ ಉಂಟಾಗಿದ್ದ ಉದ್ವಿಗ್ನತೆ ನಿವಾರಣೆ. ಸೌಹಾರ್ದ ಪರಿಸ್ಥಿತಿ ನೆಲೆಸಲಿದೆ. ಧನಹಾನಿ ಸಂಭವ, ಎಚ್ಚರದಿಂದ ವ್ಯವಹರಿಸಿ.    
ವೃಶ್ಚಿಕ
 ದೈನಂದಿನ ಒತ್ತಡದಿಂದ ಮುಕ್ತಿ. ನಿಮ್ಮ ಇಷ್ಟದ ಹವ್ಯಾಸದಲ್ಲಿ ಕಾಲ ಕಳೆಯುವ ಅವಕಾಶ. ಒಟ್ಟಿನಲ್ಲಿ ಇಂದು ಸಂತೋಷದ ಮನಸ್ಥಿತಿ
ಧನು
ಅದೃಷ್ಟ ನಿಮಗೆ ಕೈಕೊಡಬಹುದು. ಹಾಗಾಗಿ ಕಾರ್ಯದಲ್ಲಿ ಸ-ಲತೆ ದೊರಕದು. ಪ್ರೀತಿಯ ವಿಷಯದಲ್ಲಿ ಭಾವನಾತ್ಮಕ ಏರುಪೇರು.        
ಮಕರ
 ಇಂದು ಹೆಚ್ಚು ಭಾವುಕ ಪ್ರಸಂಗಕ್ಕೆ ಸಾಕ್ಷಿಯಾಗುವಿರಿ. ಆರ್ಥಿಕ ಪ್ರಗತಿಗೆ ಅಡ್ಡಿ ಬಂದೀತು. ವೃತ್ತಿಯಲ್ಲಿ ಆಂಶಿಕ ಯಶಸ್ಸು ಪಡೆಯುವಿರಿ      
ಕುಂಭ
ಬಹಳಷ್ಟು ಕೆಲಸ ಬಾಕಿಯಿದೆ. ಅದನ್ನು ಪೂರೈಸಬೇಕಾದ ಒತ್ತಡ. ಪ್ರೀತಿಯ ವಿಚಾರದಲ್ಲಿ ದುಡುಕಿನ ನಿರ್ಧಾರ ತಾಳಬೇಡಿ.
ಮೀನ
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ಕೆಲ ಸಮಸ್ಯೆ ಎದುರಿಸುವಿರಿ. ಅಭದ್ರತೆಯ ಭಾವ ಕಾಡಲಿದೆ. ಸಂಗಾತಿ ಜತೆಗೆ ಮನಸ್ತಾಪ ಸಂಭವ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !