ಶುಕ್ರವಾರ, 17 ಡಿಸೆಂಬರ್ 2021
ಮೇಷ
ನಿಮ್ಮ ಮನಸ್ಥಿತಿ ಕೆಡಿಸುವ ಪ್ರಸಂಗ ಸಂಭವಿಸ ಬಹುದು. ಕೆಲವರ ವರ್ತನೆ ಅಸಹನೀಯ ಎನಿಸುವುದು. ಹೊಂದಾಣಿಕೆಯಿಂದ ಸಾಗುವುದು ಒಳಿತು.
ವೃಷಭ
ಕೆಲವು ಬೆಳವಣಿಗೆಗಳು ಸಣ್ಣದಾದರೂ ನಿಮ್ಮ ಸಂತೋಷ ಹೆಚ್ಚಿಸುತ್ತವೆ. ಆಪ್ತರೂ ನಿಮ್ಮ ಸಂಗದಲ್ಲಿದ್ದು ಖುಷಿ ಹೆಚ್ಚಿಸುತ್ತಾರೆ. ಒಟ್ಟಾರೆ ಆನಂದದ ದಿನ.
ಮಿಥುನ
ಅಕ ಕಾರ್ಯದ ಒತ್ತಡ. ಹಾಗಾಗಿ ವಿರಮಿಸಲು ಸಮಯ ಸಾಲದು. ವಿಭಿನ್ನ ಸ್ವಭಾವದ ವ್ಯಕ್ತಿಗಳ ಜತೆ ವ್ಯವಹಾರ ನಡೆಸಬೇಕಾಗುತ್ತದೆ.
ಕಟಕ
ಖಾಸಗಿ ಮತ್ತು ವೃತ್ತಿ ಬದುಕಿನ ಮಧ್ಯೆ ಗಡಿರೇಖೆ ಎಳೆಯಿರಿ. ಒಂದು ಮತ್ತೊಂದರ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ.
ಸಿಂಹ
ಏರುಪೇರಿನ ದಿನ. ಕುಟುಂಬದಲ್ಲಿ ಸಣ್ಣ ಬಿಕ್ಕಟ್ಟು ಏರ್ಪಡಬಹುದು. ಆದರೆ ಅದನ್ನು ಸುಲಭದಲ್ಲಿ ನಿಬಾಯಿಸಬಲ್ಲಿರಿ.
ಕನ್ಯಾ
ಕೆಲವು ಸಣ್ಣ ವಿಷಯಗಳೂ ನಿಮ್ಮ ಮನಸ್ಸು ಕೆಡಿಸಬಹುದು. ಎಲ್ಲದಕ್ಕೂ ಸೂಕ್ಷ್ಮ ಸಂವೇದಿಯಾಗಿ ವರ್ತಿಸುವುದು ತರವಲ್ಲ. ದೃಢತೆ ಇರಲಿ.
ತುಲಾ
ಅನಪೇಕ್ಷಿತ ಪ್ರಸಂಗ ಉಂಟಾಗಬಹುದು. ಅದನ್ನು ತಾಳ್ಮೆಯಿಂದ ನಿಭಾಯಿಸಿ. ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿರಿ.
ವೃಶ್ಚಿಕ
ವೃತ್ತಿಯಲ್ಲಿ ಒತ್ತಡ. ನೀವು ಬಯಸಿದ ಕಾರ್ಯ ಸಾತವಾಗದು. ನಿರೀಕ್ಷಿಸದ ಅಡ್ಡಿ ಬರುತ್ತದೆ. ಹತಾಶೆ ಬೇಡ, ಮರಳಿ ಯತ್ನವ ಮಾಡಿರಿ. ಕೌಟುಂಬಿಕ ಸಹಕಾರ.
ಧನು
ಉದ್ಯೋಗದಲ್ಲಿ ಪೂರಕ ಬೆಳವಣಿಗೆ. ಆಪ್ತರ ಜತೆ ವಾಗ್ವಾದ ಮಾಡಲು ಹೋಗದಿರಿ. ಇಲ್ಲವಾದರೆ ಸಂಬಂಧ ಕೆಡಬಹುದು. ಹೊಟ್ಟೆಗೆ ಸಂಬಂಸಿದ ಅಸೌಖ್ಯ ಕಾಡಬಹುದು.
ಮಕರ
ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಎಲ್ಲರ ಮೆಚ್ಚಿಗೆ ಗಳಿಸುವಿರಿ. ಖಾಸಗಿ ಬದುಕಲ್ಲೂ ನೀವು ಇಚ್ಛಿಸಿದ ವಿಷಯ ಈಡೇರಿಕೆ.
ಕುಂಭ
ನಿಮ್ಮ ನಿರ್ವಹಣೆಯನ್ನು ಮೆಚ್ಚದಿದ್ದರೆ ಹತಾಶ ರಾಗದಿರಿ. ಮುಖ್ಯವಾಗಿ ನಿಮಗೆ ತೃಪ್ತಿಯಾಗುವ ರೀತಿಯಲ್ಲಿ ಕಾರ್ಯ ಮಾಡಿ. ಕೌಟುಂಬಿಕ ಸಹಕಾರ.
ಮೀನ
ಎಲ್ಲರು ಮೆಚ್ಚುವಂತಹ ನಿರ್ವಹಣೆ ತೋರುವಿರಿ. ಕಾಡುತ್ತಿದ್ದ ಸಮಸ್ಯೆ ಯೊಂದು ನಿವಾರಣೆಯ ಸಂಕೇತ ತೋರಬರುವುದು.