Saturday, June 10, 2023

Latest Posts

ದಿನಭವಿಷ್ಯ| ಇಂದು ಈ ರಾಶಿಯವರ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಲಭ್ಯ…

ದಿನಭವಿಷ್ಯ

ಮೇಷ
ನಿಮ್ಮ ಕ್ರಿಯಾಶೀಲತೆಯನ್ನು ವ್ಯರ್ಥ ಮಾಡುತ್ತಿದ್ದೀರಿ. ಉದಾಸೀನತೆ ಬಿಟ್ಟು ಕಾರ್ಯವೆಸಗಿ. ಉತ್ತಮ ಸಾಧನೆ ಮಾಡುವ ಅವಕಾಶ ಕೈಚೆಲ್ಲದಿರಿ.

ವೃಷಭ
ಕೌಟುಂಬಿಕ ವಿಚಾರದಲ್ಲಿ ಹೊರಗಿನವರ ಸಲಹೆ ಕೇಳದಿರಿ. ಅದರಿಂದ ನಿಮಗೇ ತೊಂದರೆ. ಆಪ್ತರೊಂದಿಗಿನ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ.

ಮಿಥುನ
ಭಾವನಾತ್ಮಕ ಶಿಸ್ತು ಬೆಳೆಸಿಕೊಳ್ಳಿ.  ನಿಮ್ಮ ಭಾವನೆಯನ್ನು ಸುಲಭದಲ್ಲಿ ಬಿಟ್ಟುಕೊಡಬೇಡಿ. ಆಪ್ತರೆನಿಸಿದವರು ದೂರವಾದಾರು.

ಕಟಕ
ವೃತ್ತಿಯಲ್ಲಿ ಹೊಸ ಅವಕಾಶ ಲಭ್ಯ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ತಪ್ಪು ಕಲ್ಪನೆಯಿಂದ ಹುಟ್ಟಿಕೊಂಡ ಕೌಟುಂಬಿಕ ಸಮಸ್ಯೆ ನಿವಾರಣೆ.

ಸಿಂಹ
ಪ್ರೀತಿ, ಪ್ರಣಯದ ಭಾವ ನಿಮ್ಮನ್ನು ಆವರಿಸಬಹುದು. ಇದಕ್ಕಾಗಿ ನಿಮ್ಮ ಹಿತಾಸಕ್ತಿ ಕಡೆಗಣಿಸದಿರಿ. ಸಮಸ್ಯೆಗೆ ಸಿಲುಕುವಿರಿ, ಎಚ್ಚರದಿಂದಿರಿ.

ಕನ್ಯಾ
ಆತ್ಮೀಯ ಸಂಬಂಧ ವೊಂದನ್ನು ಇನ್ನಷ್ಟು ಗಟ್ಟಿಗೊಳಿಸಲು ಯೋಜಿಸಿರಿ. ಕೆಲವರ ವದಂತಿ ನಂಬಿ ಸಂಬಂಧ ಹಾಳು ಮಾಡದಿರಿ.  ಕುಟುಂಬದ ಸಹಕಾರ.

ತುಲಾ
ಮಿತ್ರರೊಂದಿಗೆ ಜಗಳ ಸಂಭವ. ಸಣ್ಣ ಮಾತಿಗೂ ರೇಗದಿರಿ.  ಆರ್ಥಿಕ ವಿಚಾರದಲ್ಲಿ ಒತ್ತಡ ಹೆಚ್ಚು. ಹಣಕ್ಕಾಗಿ ಇತರರು ಬೇಡಿಕೆ ಇಡುವರು.

ವೃಶ್ಚಿಕ
ನಿಮ್ಮ ಮೇಲೆ ಮೊದಲಾಗಿ ವಿಶ್ವಾಸ ಹೆಚ್ಚಿಸಿಕೊಳ್ಳಿ. ನಿಮ್ಮಿಂದ ಆಗದು ಎಂಬ ಅಪನಂಬಿಕೆ ಬಿಡಿ. ಸಣ್ಣ ಆರೋಗ್ಯ ಸಮಸ್ಯೆ ಇಂದು ಕಾಡಬಹುದು.

ಧನು
ಖಾಸಗಿ ಬದುಕಿನಲ್ಲಿ ಸಮಸ್ಯೆ. ಮಾನಸಿಕ ಚಿಂತೆಯಿಂದ ದೈಹಿಕವಾಗಿಯೂ ದುಷ್ಪರಿಣಾಮ.  ಪ್ರಯಾಣ ಕಿರಿಕಿರಿ ಸೃಷ್ಟಿಸುತ್ತದೆ.

ಮಕರ
ಖಾಸಗಿ ಬದುಕಿನಲ್ಲಿ ಏರುಪೇರು. ಪ್ರೀತಿಯ ಆಕರ್ಷಣೆಗೆ ತುತ್ತಾಗುವಿರಿ. ಕೆಲವರು ಮುನಿಸಿಕೊಳ್ಳುವ ಸಾಧ್ಯತೆ ಯಿದೆ.  ಸಂಧಾನದಿಂದ ಸಮಸ್ಯೆ ಪರಿಹರಿಸಿ.

ಕುಂಭ
ಉದ್ಯೋಗ ಕ್ಷೇತ್ರದಲ್ಲಿ ಬಾಸ್‌ನ ಅವಕೃಪೆಗೆ ತುತ್ತಾಗುವಿರಿ. ಇತರರ ಕರ್ತವ್ಯಚ್ಯುತಿಯ ಹೊಣೆ ನೀವೇ ಹೊರ ಬೇಕಾಗುವುದು. ಕೌಟುಂಬಿಕ ಅಸಹಕಾರ.

ಮೀನ
ಮನೆ ಮತ್ತು ಕಚೇರಿಯಲ್ಲಿ ಹೊಣೆಗಾರಿಕೆ ಹೆಚ್ಚಳ. ಎಲ್ಲ ಕೆಲಸ ಮುಗಿಸಲು ಅಸಾಧ್ಯ. ಕೆಲವರ ಅಸಮಾಧಾನಕ್ಕೆ ತುತ್ತಾಗುವಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!