Saturday, September 23, 2023

Latest Posts

ಖುಷಿ ಕ್ಷಣಿಕ, ನೋವೇ ಶಾಶ್ವತ ಅನ್ನೋರಲ್ಲಿ ನೀವೂ ಒಬ್ರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಬ್ಬರು ಸ್ನೇಹಿತರು ಬೀಚ್‌ಗೆ ಟ್ರಿಪ್ ಹೋಗಿದ್ರು. ಯಾವುದೋ ವಿಷಯಕ್ಕೆ ಇಬ್ಬರ ಮಧ್ಯೆ ಮಾತಿಗೆ ಮಾತಾಯ್ತು. ಮಾತು ಜಗಳಕ್ಕೆ ತಿರುಗಿತ್ತು. ಒಬ್ಬ ಸ್ನೇಹಿತ ಕೋಪದಿಂದ ಇನ್ನೊಬ್ಬನ ಕೆನ್ನೆಗೆ ಹೊಡೆದೇ ಬಿಟ್ಟ.
ಆಗ ಹೊಡೆಸಿಕೊಂಡ ಸ್ನೇಹಿತ ಮರಳಿನ ಮೇಲೆ ನನ್ನ ಸ್ನೇಹಿತ ಇಂದು ನನ್ನ ಕೆನ್ನೆಗೆ ಹೊಡೆದ ಎಂದು ಬರೆದ.
ಇಬ್ಬರೂ ಸ್ವಲ್ಪ ಹೊತ್ತು ಮೌನವಾಗಿದ್ದರು. ಆಮೇಲೆ ಹಾಗೆ ಸರಿಯಾದರು. ನಂತರ ಬೋಟಿಂಗ್ ಹೋಗೋಣ ಎಂದು ನಿರ್ಧರಿಸಿದರು. ಬೋಟಿಂಗ್ ಹೋದ ವೇಳೆ ಸ್ನೇಹಿತನೊಬ್ಬ ನೀರಿಗೆ ಬಿದ್ದು ಬಿಟ್ಟ. ಇದೇ ಕಪಾಳಕ್ಕೆ ಹೊಡೆದ ಸ್ನೇಹಿತನೇ ನೀರಿಗಿಳಿದು ಆತನನ್ನು ಕಾಪಾಡಿದ. ಇಬ್ಬರೂ ದಡಕ್ಕೆ ಬಂದರು. ಆ ಸ್ನೇಹಿತ ಬಂಡೆ ಮೇಲೆ ನನ್ನ ಗೆಳೆಯ ಇಂದು ನನ್ನ ಜೀವ ಉಳಿಸಿದ ಎಂದು ಬರೆದ.
ಕೆನ್ನೆಗೆ ಹೊಡೆದ ಗೆಳೆಯ, ಕುತೂಹಲದಿಂದ ನಾನು ನಿನ್ನ ಕೆನ್ನೆಗೆ ಹೊಡೆದೆ. ನಿನ್ನ ತಂದೆ ತಾಯಿ ಕೂಡ ಒಂದು ದಿನವೂ ಹೊಡದಿರಲಿಲ್ಲ. ಅಂಥ ನೋವಿನ ಘಟನೆಯನ್ನು ಮರಳ ಮೇಲೆ ಬರೆದೆ. ನೀರಿನಲ್ಲಿ ನೀನು ಮುಳುಗಿ ಹೋಗ್ತಿರಲಿಲ್ಲ. ನಾನು ನಿನ್ನನ್ನು ಮುಳುಗದಂತೆ ತಡೆದೆ ಅಷ್ಟೆ, ಅದನ್ನು ಕಲ್ಲಿನ ಮೇಲೆ ಕೆತ್ತೋಕೆ ಕಾರಣ ಏನು ಎಂದು ಕೇಳಿದ.
ಮನಸ್ಸಿಗೆ ನೋವಾದ ಘಟನೆಗಳನ್ನು ಮರಳ ಮೇಲೆ ಬರೆಯಬೇಕು, ಸಮಯ ಎನ್ನುವ ಅಲೆ ಬಂದು ಅದನ್ನು ಅಳಿಸಿಬಿಡುತ್ತದೆ. ನಮಗೆ ಖುಷಿ ನೀಡಿದ್ದನ್ನು ಕಲ್ಲಿನ ಮೇಲೆ ಬರೆಯಬೇಕು ಅದು ಶಾಶ್ವತ ಎಂದು ಹೇಳಿದ.

ಹೌದಲ್ವಾ? ನಾವು ಇಷ್ಟು ದಿನ ಮಾಡಿದ್ದೆಲ್ಲಾ ಉಲ್ಟಾ! ಕೆಟ್ಟ ಸನ್ನಿವೇಶಗಳನ್ನು ಕಲ್ಲಿನ ಮೇಲೆ ಕೆತ್ತು ಇಟ್ಟುಕೊಂಡಿದ್ದೇವೆ. ಖುಷಿ ಕ್ಷಣಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಆದರೆ ಯೋಚಿಸಿ, ಎರಡನ್ನೂ ಬದಲಾಯಿಸಿ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!